ಕನ್ನಡ ನಾಡು ನುಡಿಯ ಬಗ್ಗೆ ಕಾಳಜಿ ವಹಿಸಿ: ಸಾವಿತ್ರಿ ಗಂಗಪ್ಪ

| Published : Apr 24 2025, 12:04 AM IST

ಸಾರಾಂಶ

ಕಡೂರು, ಯುವ ಜನರು ಕನ್ನಡ ಭಾಷೆಯ ಮೇಲೆ ಮಾತೃ ಪ್ರೇಮ ಬೆಳೆಸಿಕೊಳ್ಳುವ ಮೂಲಕ ಕನ್ನಡ ನಾಡು ನುಡಿಯ ಬಗ್ಗೆ ಕಾಳಜಿ ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಸಾವಿತ್ರಿ ಗಂಗಪ್ಪ ಹೇಳಿದರು.

ಗೆದ್ಲೇಹಳ್ಳಿಯ ಸ್ನಾತಕೋತ್ತರ ಕೇಂದ್ರದಲ್ಲಿ ಜಿಲ್ಲಾ ಕಸಾಪ ದತ್ತಿ ಉಪನ್ಯಾಸ ಮಾಲಿಕೆ ಗೀತ ಗಾಯನ ಕಾರ್ಯಕ್ರಮ ಉದ್ಘಾಟಿಸಿ

ಕನ್ನಡಪ್ರಭ ವಾರ್ತೆ, ಕಡೂರು

ಯುವ ಜನರು ಕನ್ನಡ ಭಾಷೆಯ ಮೇಲೆ ಮಾತೃ ಪ್ರೇಮ ಬೆಳೆಸಿಕೊಳ್ಳುವ ಮೂಲಕ ಕನ್ನಡ ನಾಡು ನುಡಿಯ ಬಗ್ಗೆ ಕಾಳಜಿ ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಸಾವಿತ್ರಿ ಗಂಗಪ್ಪ ಹೇಳಿದರು.ತಾಲೂಕಿನ ಗೆದ್ಲೇಹಳ್ಳಿಯ ಸ್ನಾತಕೋತ್ತರ ಕೇಂದ್ರದಲ್ಲಿ ಕಡೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ಶಿಬಿರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ದತ್ತಿ ಉಪನ್ಯಾಸ ಮಾಲಿಕೆ ಅಡಿ ಗೀತ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಈ ನಮ್ಮ ಕನ್ನಡ ಭಾಷೆ ಅಳಿಯಲು ಸಾಧ್ಯವೇ ಇಲ್ಲ. ಆದರೆ ಈ ಭಾಷೆಯನ್ನು ನಾವುಗಳೆಲ್ಲರೂ ಬಳಸಬೇಕು. ಆಗ ಶಾಶ್ವತವಾಗಿ ನಮ್ಮೊಂದಿಗೆ ಭಾಷೆ ಉಳಿಯುತ್ತದೆ. ಒಂದು ಭಾಷೆ ಉಳಿದರೆ ಮಾತ್ರ ಅದರ ಸಂಸ್ಕೃತಿ ನಮ್ಮೊಂದಿಗೆ ಉಳಿಯುತ್ತದೆ. ಭಾಷೆ ಅವನತಿ ಆದರೆ ಸಂಸ್ಕೃತಿ ಕೂಡ ಅವನತಿಯಾಗುತ್ತದೆ ಎಂದು ಅಭಿಪ್ರಾಯಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಮಹಿಳಾ ಘಟಕಗಳನ್ನು, ಹೋಬಳಿ ಮತ್ತು ಗ್ರಾಮ ಘಟಕಗಳನ್ನು ಸ್ಥಾಪಿಸಿದ್ದು, ಜೊತೆಗೆ ಇದೀಗ ಜಿಲ್ಲೆಯಲ್ಲಿ ಯುವ ಘಟಕ ಗಳನ್ನು ಆರಂಭಿಸಲಾಗುವುದು ಆ ಮೂಲಕ ಕನ್ನಡ ಭಾಷೆ ಮತ್ತು ನಮ್ಮ ಸಂಸ್ಕೃತಿಯನ್ನು ಮನೆ ಮನೆಗೆ ತಲುಪಿಸುವ ಕಾರ್ಯ ಮಾಡಲಾಗುವುದು ಎಂದು ತಿಳಿಸಿದರು.ಜಿಲ್ಲಾ ದಾಸ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಿರೇನಲ್ಲೂರು ಶ್ರೀನಿವಾಸ್ ಮತ್ತು ತರೀಕೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಘಟಕದ ಅಧ್ಯಕ್ಷೆ ಸುನಿತಾ ಕಿರಣ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಶಿಬಿರಾರ್ಥಿ ಗಳಿಗೆ ಗೀತ ಗಾಯನ ಏರ್ಪಡಿಸಿ ಜಾನಪದ ಗೀತೆ ಮತ್ತು ಭಾವಗೀತೆಗಳನ್ನು ಹಾಡುವ ಮೂಲಕ ಶಿಬಿರಾರ್ಥಿಗಳನ್ನು ರಂಜಿಸಿದರು ಎಂದರು.ಶಿಬಿರಾಧಿಕಾರಿಗಳಾದ ಪಂಕಜ ಎನ್. ಎಸ್. ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಎ ನಾಗೇಶ್, ಕಡೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್ ಪರಮೇಶ್ ಹಾಗೂ ಸಹಾಯಕ ಪ್ರಾಧ್ಯಾಪಕರಾದ ಸವಿತಾ ಎಚ್.ಎಸ್, ಸಹ ಶಿಬಿರಾಧಿಕಾರಿ ಬಸವರಾಜಪ್ಪ ಭಂಡಾರಿ ಕೆ.ಎಸ್ ಮತ್ತು ವಿಶ್ವಾಸ್ ಕೆ. ಎಸ್. ಮತ್ತಿತರರು ಉಪಸ್ಥಿತರಿದ್ದರು.

23ಕೆಕೆಡಿಯು1

ಗೆದ್ಲೇಹಳ್ಳಿಯ ಸ್ನಾತಕೋತ್ತರ ಕೇಂದ್ರದಲ್ಲಿ ಕಡೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ಶಿಬಿರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಉಪನ್ಯಾಸ ಮತ್ತು ಗೀತ ಗಾಯನ ಕಾರ್ಯಕ್ರಮವನ್ನು ಸಾವಿತ್ರಿ ಗಂಗಪ್ಪ ಉದ್ಘಾಟಿಸಿದರು.