ಸಾರಾಂಶ
ತುಮಕೂರು: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ ಜೀವ ಬೆದರಿಕೆ ಹಾಕಿರುವ ಬಿಜೆಪಿ ನಾಯಕರ ವಿರುದ್ಧ ಮತ್ತು ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ ಶಾಸಕ ಮುನಿರತ್ನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ದಲಿತರ ಜಾತಿ ನಿಂದನೆ ಮಾಡಿರುವ ಮುನಿರತ್ನರನ್ನು ಬಂಧಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಮಹಿಳಾ ಹಾಗೂ ಎಸ್ಸಿ ಘಟಕದ ವತಿಯಿಂದ ಮಹಿಳಾ ಠಾಣೆ ಮತ್ತು ನಗರ ಪೊಲೀಸರಿಗೆ ದೂರು ನೀಡಲಾಯಿತು.ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕುರಿತು ಬಿಜೆಪಿ ನಾಯಕ ತಂದರ್‌ಸಿಂಗ್ ಮಾರ್ವಾ ಅವರು ನೀನು ಸರಿಯಾಗಿ ವರ್ತಿಸಿದ್ದರೆ ನಿನ್ನ ಅಜ್ಜಿಗಾದ ಗತಿಯೇ ನಿನಗೂ ಆಗಲಿದೆ ಎಂದು ನೀಡಿರುವ ಹೇಳಿಕೆ ಹಾಗೂ ಮಹಾರಾಷ್ಟ್ರದ ಶಿವಸೇನೆ ಶಾಸಕ ಸಂಜಯ್ ಗಾಯಕ್ವಾಡ್ ರಾಹುಲ್ ಗಾಂಧಿ ಅವರ ನಾಲಿಗೆ ಕತ್ತರಿಸುವ ವ್ಯಕ್ತಿಗೆ 11 ಲಕ್ಷ ರು. ಬಹುಮಾನ ನೀಡುವುದಾಗಿ ಬಹಿರಂಗವಾಗಿ ಘೋಷಿಸಿದ್ದಾರೆ. ಅಲ್ಲದೆ ರೈಲ್ವೆ ರಾಜ್ಯ ಮಂತ್ರಿ ರವನೀತ ಬಿಟ್ಟು ಮತ್ತು ಉತ್ತರ ಪ್ರದೇಶದ ಸಚಿವ ರಘುರಾಜ್ ಸಿಂಗ್ ರಾಹುಲ್ ಗಾಂಧಿ ಅವರನ್ನು ನಂಬರ್‌ಒನ್ ಭಯೋತ್ಪಾದಕ ಎಂದು ನೀಡಿರುವ ಹೇಳಿಕೆಗಳು ನೆಮ್ಮದಿ ಮತ್ತು ಶಾಂತಿಯನ್ನು ಕದಡುವ ಉದ್ದೇಶ ಹೊಂದಿವೆ ಎಂದರು.ರಾಹುಲ್ ಗಾಂಧಿ ಅಧಿವೇಶನಗಳಲ್ಲಿ ಮತ್ತು ಅವರ ಸಂದರ್ಶನಗಳಲ್ಲಿ ಬಿಜೆಪಿ ಮಹಿಳೆಯರು, ದಲಿತರು, ಆದಿವಾಸಿಗಳು, ಬಡಜನರ ಬಗ್ಗೆ ಇರುವ ನಿರ್ಲಕ್ಷ್ಯವನ್ನು ಪ್ರಶ್ನೆ ಮಾಡಿ, ದಾಖಲೆಗಳ ಸಮೇತ ಬಯಲು ಮಾಡುತ್ತಿರುವುದರಿಂದ ಸತ್ಯವನ್ನು ಒಪ್ಪಿಕೊಳ್ಳಲಾಗದೆ ಈ ರೀತಿಯ ಹೇಳಿಕೆ ನೀಡುತ್ತಾರೆ. ಅಲ್ಲದೆ ಹರಿಯಾಣ ಮತ್ತು ಜಮ್ಮು, ಕಾಶ್ಮೀರದ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಂಡರನ್ನು ಪ್ರಚೋದನೆಗೊಳಿಸವ ತಂತ್ರಗಾರಿಕೆಯಾಗಿದೆ. ಆದ್ದರಿಂದ ಭಾರತೀಯ ನ್ಯಾಯ ಸಂಹಿತೆ-೨೦೨೩ರ ಸೆಕ್ಷನ್ ೩೫೧, ೩೫೨, ೩೫೩, ೬೧ ಹಾಗೂ ಸಂಬಂಧಿಸಿದ ಇನ್ನಿತರ ಕಾನೂನುಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ಒತ್ತಾಯಿಸಿದ್ದಾರೆ.ಎಸ್ಸಿ ಘಟಕದ ಅಧ್ಯಕ್ಷ ಬಿ.ಜಿ. ಲಿಂಗರಾಜು ಮಾತನಾಡಿ, ಬೆಂಗಳೂರಿನ ರಾಜಾರಾಜೇಶ್ವರಿ ನಗರದ ಶಾಸಕ ಮುನಿರತ್ನ ನಾಯ್ಡು ಗುತ್ತಿಗೆದಾರರಾದ ಚೆಲುವರಾಜು ಅವರೊಂದಿಗೆ ಹಣಕಾಸಿನ ವಿಚಾರವಾಗಿ ಫೋನ್‌ನಲ್ಲಿ ನಡೆದ ಮಾತುಕತೆ ವಿಚಾರಗಳು ಆಡಿಯೋ ಸಂಭಾಷಣೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಶಾಸಕ ಮುನಿರತ್ನ ನಾಯ್ಡು ಬಿ.ಬಿ.ಎಂ.ಪಿ. ಗುತ್ತಿಗೆದಾರ ಚೆಲುವರಾಜುಗೆ ಜಾತಿ ನಿಂದನೆ ಮಾಡಿದ್ದಾರೆ. ಅವರ ವಿರುದ್ದ ಅಟ್ರಾಸಿಟಿ ಕೇಸಿನ ಜೊತೆಗೆ, ಲೈಂಗಿಕ ದೌರ್ಜನ್ಯ ಮಾನಹಾನಿ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದರು. ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ ವೇಳೆ ರುವ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕ ಹಾಗೂ ಪರಿಶಿಷ್ಟ ಜಾತಿ ವಿಭಾಗದ ಮುಖಂಡರು ಶಾಸಕ ಮುನಿರತ್ನ ನಾಯ್ಡು ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಮುಖಂಡರಾದ ಮುರುಳೀಧರ ಹಾಲಪ್ಪ, ಮಾಜಿ ಶಾಸಕರಾದ ಗಂಗಹನುಮಯ್ಯ, ಇಕ್ಬಾಲ್ ಅಹಮದ್, ರಾಮಕೃಷ್ಣ, ಪ್ರಸನ್ನಕುಮಾರ್, ಶಿವಕುಮಾರ್.ಟಿ, ನರಸೀಯಪ್ಪ, ಶಿವಾಜಿ, ಷಣ್ಮುಖಪ್ಪ, ನಾಗಮಣಿ, ವಿಜಿಯಮ್ಮ, ಮರಿಚನ್ನಮ್ಮ, ಯಶೋಧ, ಹೊನೇಶ, ಗೋಪಿ ಇದ್ದರು.