ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಮತದಾರರ ವಿಶೇಷ ಮತಪಟ್ಟಿ ಪರಿಷ್ಕರಣೆಯಲ್ಲಿ ಯಾವುದೇ ಲೋಪಗಳು ಆಗದಂತೆ ಕ್ರಮ ವಹಿಸಬೇಕು ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಪೀಹಳ್ಳಿ ರಮೆಶ್ ಗಮನಕ್ಕೆ ತಂದರು.ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ತಹಸೀಲ್ದಾರ್ ಚೇತನ ಯಾದವ್ ಅವರ ನೇತೃತ್ವದಲ್ಲಿ ಆಯೋಜಿಸಿದ್ದ ಎಸ್‌ಐಆರ್ ಸಂಬಂಧ ವಿವಿಧ ಪಕ್ಷಗಳ ಅಧ್ಯಕ್ಷರ ಸಮ್ಮಖದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಈ ಹಿಂದೆ ಪುರಸಭೆ, ಗ್ರಾಪಂ, ತಾಪಂ ಸೇರಿದಂತೆ ಸ್ಥಳಿಯ ಚುನಾವಣೆಗಳಲ್ಲಿ ಅಕ್ರಮ ಮತದಾನಗಳು ನಡೆದಿವೆ. ಅಲ್ಲದೇ, ಪಟ್ಟಣ ಪುರಸಭಾ ವ್ಯಾಪ್ತಿಯ 6 ನೇ ವಾರ್ಡ್ ಒಂದರಲ್ಲಿ ಸುಮಾರು 80ಕ್ಕೂ ಹೆಚ್ಚು ಗ್ರಾಮಾಂತರ ಪ್ರದೇಶದ ವಿವಿಧ ಹಳ್ಳಿಗಳಲ್ಲಿ ವಾಸವಿರುವವರ ಹೆಸರನ್ನು ಮತದಾರರ ಸೇರಿಸಿ ಅವರು ಮತ ಚಲಾಯಿಸಿದ್ದರು. ನಂತರದಲ್ಲಿ ಗ್ರಾಪಂ ಚುನಾವಣೆಯಲ್ಲೂ ಸಹ ಮತ ಚಲಾಯಿಸಿದ್ದರು ಎಂದರು.
ಈ ಸಂಬಂಧ ಅಕ್ರಮ ಮತಗಳು ನಡೆದಿವೆ ಎಂದು ಕೋರ್ಟ್ ಮೆಟ್ಟಿಲೀರಿರುವ ಪ್ರಕರಣಗಳು ನಡೆದಿದೆ. ಆದ್ದರಿಂದ ಎರಡು ಕಡೆಗಳಲ್ಲಿ ಮತವಿರುವುದು ಸೇರಿಸದಂತೆ ಜೊತೆಗೆ ಅರ್ಹ ಮತದಾರರಿಗೆ ವಂಚನೆಯಾಗದ ರೀತಿ ಮತ ಪರಿಸ್ಕರಿಸಿ ನಡೆಸಿ, ಯಾವುದೇ ಲೋಪವಾಗದಂತೆ ಪಾರದರ್ಶಕವಾಗಿ ನೋಡಿಕೊಳ್ಳಬೇಕು ಎಂದು ತಹಸೀಲ್ದಾರ್ ಗೆ ಮನವಿ ಮಾಡಿದರು.ನಂತರ ತಹಸೀಲ್ದಾರ್ ಚೇತನಾ ಯಾದವ್ ಮಾತನಾಡಿ, ಕ್ಷೇತ್ರದಲ್ಲಿ ಈಗಾಗಲೇ 81ರಷ್ಟು ಮತಪಟ್ಟಿ ಪರಿಷ್ಕರಣೆ ನಡೆದಿದೆ. ಆ.8ರೊಳಗೆ ಶೇ.100ರಷ್ಟು ಮತದಾರರ ವಿಶೇಷ ಮತಪಟ್ಟಿ ಪರಿಸ್ಕರಿಸಲಾಗುತ್ತದೆ. ಜೊತೆಗೆ ಆಯಾ ಗ್ರಾಮಗಳ ವಿವಿಧ ಪಕ್ಷಗಳಿಂದ ನೇಮಿಸಿಕೊಂಡಿರುವ ಬಿಎಲ್ .ಎ ಗಳು ಭಾಗವಹಿಸಿ ಅಧಿಕಾರಿಗಳೊಂದಿಗೆ ಮತಪಟ್ಟಿ ಪರಿಸ್ಕರಣೆ ಯಶಸ್ಸಿಗೆ ಕೈ ಜೋಡಿಸಬೇಕು ಎಂದರು. ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್. ಪ್ರಕಾಶ್, ಕಸಬಾ ಹೋಬಳಿಯ ಬಿಎಲ್‌ಎ ಕಾಳೇಗೌಡ, ಕೆಆರ್‌ಎಸ್ ಪಕ್ಷದ ಚಿಕ್ಕತಿಮ್ಮೇಗೌಡ ಸೇರಿದಂತೆ ಇತರರಿದ್ದರು.