ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚು ಕಾಳಜಿ ವಹಿಸಿ

| Published : Nov 15 2025, 02:15 AM IST

ಸಾರಾಂಶ

ನಿಮ್ಮ ಮಕ್ಕಳು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಕಷ್ಟು ಗುರಿಯನ್ನಿಟ್ಟುಕೊಂಡಿದ್ದಾರೆ

ಕಾರಟಗಿ: ಶಾಲೆಯಲ್ಲಿ ನಿಮ್ಮ ಮಕ್ಕಳು ಚೆನ್ನಾಗಿ ಶಿಕ್ಷಣ ಪಡೆಯುತ್ತಿದ್ದಾರೋ, ಅವರಿಗೆ ಸಂಬಂಧಿಸಿದ ಪಠ್ಯೇತರ ವಿಷಯಗಳಿಗೆ ಗುಣಮಟ್ಟದ ಶಿಕ್ಷಣ ಶಿಕ್ಷಕರು ನೀಡುತ್ತಿದ್ದಾರೋ ಎಂದು ಪ್ರತಿನಿತ್ಯ ಗಮನಿಸಬೇಕು ಎಂದು ತಾಪಂ ಇಓ ಲಕ್ಷ್ಮೀದೇವಿ ಹೇಳಿದರು.

ತಾಲೂಕಿನ ಬೇವಿನಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಮಕ್ಕಳ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಪೋಷಕ ಹಾಗೂ ಶಿಕ್ಷಕರ ಮಹಾಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ನಿಮ್ಮ ಮಕ್ಕಳು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಕಷ್ಟು ಗುರಿಯನ್ನಿಟ್ಟುಕೊಂಡಿದ್ದಾರೆ, ಅವರಿಗೆ ಒಳ್ಳೆಯ ಶಿಕ್ಷಣ ನೀಡಲು ಪೋಷಕರು ಮುಂದಾಗಬೇಕು. ಶಿಕ್ಷಕರೊಂದಿಗೆ ಪೋಷಕರು ಯಾವಾಗಲೂ ಸಂಪರ್ಕದಲ್ಲಿ ಇರಬೇಕು,ತಮ್ಮ ಮಕ್ಕಳಿಗೆ ಬೇಕಾದ ಶಿಕ್ಷಣ ನೀಡಲು ಸಲಹೆ ನೀಡಬೇಕು ಎಂದರು.

ಸಿಆರ್‌ಪಿ ತಿಮ್ಮಣ್ಣ ನಾಯಕ ಮಾತನಾಡಿ, ಮಹಾನ್ ಗಣ್ಯ ವ್ಯಕ್ತಿ, ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ದಿನ ಹಾಗೂ ಮಕ್ಕಳ ದಿನಾಚರಣೆ ಅಂಗವಾಗಿ ಶಿಕ್ಷಣ ಇಲಾಖೆಯ ಆದೇಶದಂತೆ ಇಂದು ಎಲ್ಲ ಶಾಲೆಯಗಳಲ್ಲಿ ಪೋಷಕ ಹಾಗೂ ಶಿಕ್ಷಕರ ಮಹಾಸಭೆ ವಿನೂತನ ಕಾರ್ಯಕ್ರಮ ಏರ್ಪಡಿಸಿರುವುದು ಸಂತಸದ ವಿಷಯ. ಶಿಕ್ಷಕರು ಮಕ್ಕಳಿಗೆ ಯಾವ ರೀತಿಯ ಶಿಕ್ಷಣ ನೀಡಬೇಕು ಹಾಗೂ ಪೋಷಕರು ಮಕ್ಕಳಿಗೆ ಮನೆಯಲ್ಲಿ ಶಿಕ್ಷಣದ ಅರಿವು ಹೇಗೆ ಮೂಡಿಸಬೇಕೆಂದು ಈ ಕಾರ್ಯಕ್ರಮಗಳನ್ನು ಚರ್ಚಿಸಿಬಹುದು. ಹಾಗೇ ಶಾಲಾ ಅಭಿವೃದ್ಧಿ ಆಡಳಿತ ಮಂಡಳಿಯಿಂದ ಅಗತ್ಯ ಸೌಕರ್ಯ ಒದಗಿಸಲು ಸಲಹೆ ಸೂಚ ಸಹ ಕಾರ್ಯಕ್ರಮದಲ್ಲಿ ಕಾಣಬಹುದಾಗಿದೆ ಎಂದರು.

ಈ ವೇಳೆ ಶಾಲೆಯ ಎಡಿಎಂಸಿ ಅಧ್ಯಕ್ಷರು, ಸದಸ್ಯರು, ಗ್ರಾಪಂ ಸದಸ್ಯರು, ಅಭಿವೃದ್ಧಿ ಅಧಿಕಾರಿಗಳು, ಊರಿನ ಪ್ರಮುಖರು, ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕ,ಶಿಕ್ಷಕಿರು, ಅಂಗನವಾಡಿ ಕಾರ್ಯಕರ್ತೆಯರು, ಊರಿನ ಶಿಕ್ಷಣ ಪ್ರೇಮಿಗಳು ಇದ್ದರು.