ಸಾರಾಂಶ
ಮಾನ್ವಿ ತಾಲೂಕಿನ ರಬ್ಬಣಕಲ್ ಗ್ರಾಮದಲ್ಲಿರುವ ಕುಡಿಯುವ ನೀರಿನ ಕೆರೆಗೆ ಶಾಸಕ ಹಂಪಯ್ಯ ನಾಯಕ ಭೇಟಿ ನೀಡಿ ಪರಿಶೀಲಿಸಿದರು.
ಮಾನ್ವಿ: ಪಟ್ಟಣಕ್ಕೆ ಕುಡಿವ ನೀರು ಸರಬರಾಜಾಗುವ ರಬ್ಬಣಕಲ್ ಕೆರೆ ಭರ್ತಿಗೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಹಂಪಯ್ಯ ನಾಯಕ ತಿಳಿಸಿದರು.
ತಾಲೂಕಿನ ರಬ್ಬಣಕಲ್ ಕುಡಿವ ನೀರಿನ ಕೆರೆಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಅಧಿಕಾರಿಗಳಿಗೆ ಸೂಚನೆ ನೀಡಿದ ಶಾಸಕರು, ಪಟ್ಟಣದಲ್ಲಿನ 23 ವಾರ್ಡ್ ಗಳಲ್ಲಿನ 50 ಸಾವಿರ ಜನಸಂಖ್ಯೆಗೆ ಶುದ್ಧ ಕುಡಿಯುವ ನೀರನ್ನು ಪೂರೈಸುವುದಕ್ಕಾಗಿ ತುಂಗಭದ್ರ ಜಲಾಶಯದಿಂದ ೮೫ ಮೈಲ್ ಕಾಲುವೆ ಮೂಲಕ ಕೆರೆತುಂಬಿಸುವುದಕ್ಕೆ 3 ದಿನಗಳ ಕಾಲ ನೀರನ್ನು ಬಿಡಲಾಗುತ್ತಿದ್ದು ಪುರಸಭೆ ಸಿಬ್ಬಂದಿ 86 ಎಕರೆ ವಿಸ್ತೀರ್ಣದ 9.5 ಮೀಟರ್ ಆಳ ಇರುವ ಕೆರೆ ತುಂಬಿಸಿದಲ್ಲಿ ಪಟ್ಟಣಕ್ಕೆ 4ರಿಂದ 5 ತಿಂಗಳ ಕಾಲ ಕುಡಿಯುವ ನೀರನ್ನು ಪೂರೈಸುವುದಕ್ಕೆ ಸಾಧ್ಯವಾಗುತ್ತದೆ. ಈ ಹಿನ್ನೆಲೆ ಸೂಕ್ತ ಕ್ರಮ ವಹಿಸಬೇಕು ಎಂದರು.ಪುರಸಭೆ ಮುಖ್ಯಾಧಿಕಾರಿ ಗಂಗಾಧರ ಮಾತನಾಡಿ, ಕೆರೆಯಲ್ಲಿ 5 ಮೀಟರ್ ವರೆಗೆ ನೀರನ್ನು ತುಂಬಲಾಗಿದ್ದು ಇನ್ನು ಹೆಚ್ಚಿನ ಪ್ರಮಾಣದಲ್ಲಿ ನೀರಿನ ಸಂಗ್ರಹಿಸಿಕೊಂಡು, ಯಾವುದೇ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು ಎಂದರು
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರು, ಅಧಿಕಾರಿ, ಸಿಬ್ಬಂದಿ, ಮುಖಂಡರು ಇದ್ದರು.