ಸಾರಾಂಶ
ಕೃಷ್ಣಾ ನದಿಯಿಂದ ಪ್ರವಾಹವುಂಟಾಗುವ ಜುಗೂಳ, ಮಂಗಾವತಿ, ಕುಸನಾಳ, ಮೊಳವಾಡ ಸೇರಿದಂತೆ ಗ್ರಾಮಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಪಿಡಿಒಗಳಿಗೆ ತಾಪಂ ಇಒ ವೀರಣ್ಣ ವಾಲಿ ಸೂಚಿಸಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಕೃಷ್ಣಾ ನದಿಯಿಂದ ಪ್ರವಾಹವುಂಟಾಗುವ ಜುಗೂಳ, ಮಂಗಾವತಿ, ಕುಸನಾಳ, ಮೊಳವಾಡ ಸೇರಿದಂತೆ ಗ್ರಾಮಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಪಿಡಿಒಗಳಿಗೆ ತಾಪಂ ಇಒ ವೀರಣ್ಣ ವಾಲಿ ಸೂಚಿಸಿದರು.ಕಾಗವಾಡ ಪಟ್ಟಣದ ಪ್ರವಾಸಿ ಮಂದರಿದಲ್ಲಿ ಗುರುವಾರ ನಡೆದ ತಾಲೂಕಿನ ಎಲ್ಲ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲಾದ್ಯಂತ ಉತ್ತಮ ಮಳೆಯಾಗುತ್ತಿದೆ. ಅತಿವೃಷ್ಟಿ ಬರುವ ಸಾಧ್ಯತೆಯಿದೆ. ಕೇಂದ್ರ ಸ್ಥಾನದಲ್ಲಿ ಇದ್ದು ಈಗಿನಿಂದಲೇ ಕಾರ್ಯಪ್ರವೃತರಾಗಿ ಕಾಳಜಿ ಕೇಂದ್ರಗಳಲ್ಲಿ ಅಗತ್ಯ ಸೌಕರ್ಯ ಪಟ್ಟಿಮಾಡಿ ಪೂರೈಸಲು ಕ್ರಮ ಕೈಗೊಳ್ಳಬೇಕು. 15 ದಿನಗಳಿಗೊಮ್ಮೆ ಜಲಕುಂಬ, ನೀರಿನ ಟ್ಯಾಂಕ್ ಶುಚಿಗೊಳಿಸಬೇಕು, ಜತೆಗೆ ಕುಡಿಯುವ ನೀರು ತಪಾಸಣೆಗೊಳಪಡಿಸುವಂತೆ ತಿಳಿಸಿದರು.
ಮನರೇಗಾ, ವಸತಿ, ಡಿಜಿಟಲ್ ಗ್ರಂಥಾಲಯ, ಕರ ವಸೂಲಿ ಸಂಗ್ರಹ, ಎಸ್‌ಬಿಎಂ ಯೋಜನೆಗಳ ನಿಗದಿತ ಕಾಲಮಿತಿಯಲ್ಲಿ ಪ್ರಗತಿ ಸಾಧಿಸಲು ತಿಳಿಸಿದರು. ಸಭೆಯಲ್ಲಿ ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಎ.ಡಿ.ಅನ್ಸಾರಿ, ಪಿಡಿಒಗಳಾದ, ಯಶವಂತ ವಂಟಗೂಡೆ, ಸಂಜೀವ ಸೂರ್ಯವಂಶಿ, ಶಿಲ್ಪಾ ನಾಯ್ಕವಾಡಿ, ಶೈಲಶ್ರೀ ಭಜಂತ್ರಿ, ಪ್ರಶಾಂತ ಇನಾಮದಾರ, ರಾಕೇಶ ಕಾಂಬಳೆ, ಅನೀಲ ಸೆಜೊಳೆ ಸಿಬ್ಬಂದಿ ಗುರು ಸೋಮನ್ನವರ, ಅಮೀತ ಇಂಗಳಗಾಂವಿ, ಆದಿನಾಥ, ಯುವರಾಜ, ಮುರುಗೇಶ, ಮಹಾಂತೇಶ ಪಡದಲ್ಲಿ ಮುಂತಾದವರು ಭಾಗವಹಿಸಿದ್ದರು.