ಕಳೆದ ವರ್ಷ ಖಾಸಗಿ ಪೈನಾನ್ಸ್‌ಗಳಲ್ಲಿ ಸಾಲ ಪಡೆದು ಬಹಳಷ್ಟು ಮಂದಿ ಕಟ್ಟಲು ಸಾಧ್ಯವಾಗದೆ ಮನೆ ಖಾಲಿ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದಕ್ಕೆ ಕಾರಣ ಹೆಚ್ಚಿನ ಕಡೆ ಸಾಲ ಪಡೆದುಕೊಂಡು ಕಟ್ಟಲು ಸಾಧ್ಯವಾಗದ ಸ್ಥಿತಿ ಬರುವುದು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಹೈನುಗಾರಿಕೆ, ಸಣ್ಣ ವ್ಯಾಪಾರ ಹಾಗೂ ಕೃಷಿ ಆಧಾರಿತವಾಗಿ ಖಾಸಗಿ ಪೈನಾನ್ಸ್‌ಗಳಲ್ಲಿ ಸಾಲ ಪಡೆಯುವವರು ಅದನ್ನು ಸಮರ್ಪಕವಾಗಿ ವಿನಿಯೋಗಿಸಿ ಸಕಾಲದಲ್ಲಿ ಮರು ಪಾವತಿ ಮಾಡಿ, ಆರ್ಥಿಕ ಶಿಸ್ತು ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ. ಕವಿತಾ ಅವರು ತಿಳಿಸಿದರು.

ನಗರದ ಡಾ. ರಾಜಕುಮಾರ್ ಕಲಾಮಂದಿರದಲ್ಲಿ ಬಿಎಸ್‌ಎಸ್ ಸೋನಾಟ ಮೈಕ್ರೋ ಫೈನಾನ್ಸ್ ಕಂಪನಿಯಿಂದ ಸಿಆರ್‌ಎಸ್‌ಆರ್ ಫಂಡ್ ನಡಿಯಲ್ಲಿ ಜಿಲ್ಲೆಯ ವ್ಯಾಪ್ತಿಯ ಸರ್ಕಾರಿ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಹಾಗು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ 279 ಮಂದಿ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಮಾಣ ಪತ್ರವನ್ನು ವಿತರಿಸಿ ಅವರು ಮಾತನಾಡಿದರು.ಕಳೆದ ವರ್ಷ ಖಾಸಗಿ ಪೈನಾನ್ಸ್‌ಗಳಲ್ಲಿ ಸಾಲ ಪಡೆದು ಬಹಳಷ್ಟು ಮಂದಿ ಕಟ್ಟಲು ಸಾಧ್ಯವಾಗದೆ ಮನೆ ಖಾಲಿ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದಕ್ಕೆ ಕಾರಣ ಹೆಚ್ಚಿನ ಕಡೆ ಸಾಲ ಪಡೆದುಕೊಂಡು ಕಟ್ಟಲು ಸಾಧ್ಯವಾಗದ ಸ್ಥಿತಿ ಬರುವುದು. ಹೀಗಾಗಿ ಸಾಲ ಕೊಡುವ ಮುನ್ನವೇ ಅವರ ಆರ್ಥಿಕ ಸ್ಥಿತಿಯನ್ನು ಪರಿಶೀಲನೆ ಸಾಲ ನೀಡಿ, ಇದರಿಂದ ಗೊಂದಲವಾಗುವುದಿಲ್ಲ. ಒಳ್ಳೆಯ ಉದ್ದೇಶಕ್ಕೆ ಸಾಲ ನೀಡುವ ಕಂಪನಿಗಳಿಗೂ ಸಹ ತೊಂದರೆಯಾಗಿತ್ತು. ಸಾಲ ನೀಡುವಾಗಲೇ ಅವರು ಆರ್ಥಿಕತೆಯನ್ನು ಪರಿಶೀಲನೆ ಮಾಡಿ, ಸಾಲ ನೀಡಿದರೆ ಇಂಥ ಪ್ರಮಾದಗಳು ನಡೆಯುತ್ತಿಲ್ಲ. ಆದೇ ರೀತಿ ಸಾಲ ಪಡೆಯುವ ತಾವುಗಳು ಸಹ ಮರು ಪಾವತಿ ಮಾಡಲು ಸಾಧ್ಯವಾಗುಷ್ಟು ಸಾಲವನ್ನು ಪಡೆದು ಸಕಾಲದಲ್ಲಿ ಮರು ಪಾವತಿ ಮಾಡಿ, ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಕೆ ಮಾಡಿಕೊಂಡು ಅವರನ್ನು ವಿದ್ಯಾವಂತರನ್ನಾಗಿ ಮಾಡಿ, ಉತ್ತಮ ಉದ್ಯೋಗವನ್ನು ಪಡೆಯುವ ನಿಟ್ಟಿನಲ್ಲಿ ಇಂಥ ಕಂಪನಿಗಳ ಸೇವೆಯನ್ನು ಪಡೆದುಕೊಳ್ಳಬೇಕು ಎಂದರು. ಬಿಎಸ್‌ಎಸ್ ಸೊನಾಟಾ ಕಂಪನಿಯ ಜೀಫ್ ಅಪರೇಟಿಂಗ್ ಮ್ಯಾನೇಜರ್ ಎಸ್. ಪಂಚಾಕ್ಷರಿ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳು ಬುದ್ದಿವಂತರಿರುತ್ತಾರೆ. ಅವರುಗಳೇ ಹೆಚ್ಚು ಉದ್ಯೋಗ ಹಾಗೂ ಇತರೇ ಕಂಪನಿಗಳಲ್ಲಿ ಕೆಲಸ ಪಡೆದುಕೊಳ್ಳುವವರು. ನಾನು ಸಹ ಸರ್ಕಾರಿ ಶಾಲೆಯಲ್ಲಿಯೇ ಓದಿದವನು. ನಮ್ಮ ಬಿಎಸ್‌ಎಸ್ ಕಂಪನಿ ರಾಜ್ಯ ಅಲ್ಲದೇ ಹೊರ ರಾಜ್ಯಗಳಲ್ಲಿಯೂ ಇದೆ. ಚಾಮರಾಜನಗರ ಜಿಲ್ಲೆಯಲ್ಲಿ 7 ಕಡೆ ಶಾಖೆಗಳನ್ನು ಆರಂಭಿಸಿ, ಬಡವರು ಹಾಗೂ ಮಧ್ಯಮ ವರ್ಗದವರ ಕನಸು ನೆನಸು ಮಾಡುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಿ, ಅವರಿಗೆ ಸಾಲ ಸೌಲಭ್ಯಗಳನ್ನು ಕಲ್ಪಿಸಿ, ಆರ್ಥಿಕ ಪ್ರಗತಿ ಹೊಂದಲು ಕಾರಣಕರ್ತರಾಗುತ್ತಿದ್ದೇವೆ. ಇದರೊಟ್ಟಿಗೆ ಸಾಮಾಜಿಕ ಹೊಣೆಗಾರಿಕೆಯಡಿಯಲ್ಲಿ ವಿದ್ಯಾರ್ಥಿ ವೇತನ ನೀಡುವುದು, ಸಂಚಾರಿ ಆರೋಗ್ಯ ಸೇವೆ, ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ನೀಡುವ ಮೂಲಕ ಜಿಲ್ಲೆಯ ಅಭಿವೃದ್ದಿಯಲ್ಲಿ ನಾವು ಸಹ ಕೈಜೋಡಿಸುತ್ತೇವೆ ಎಂದರು.

ಕಾರ್ಯಕ್ರಮದಲ್ಲಿ 279ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಪ್ರಮಾಣ ಪತ್ರ ಹಾಗೂ ನೆನಪಿನ ಕಾಣಿಕೆಯನ್ನು ನೀಡಿ ಅಭಿನಂದಿಸಲಾಯಿತು. ವೇದಿಕೆಯಲ್ಲಿ ಕಂಪನಿಯ ಉಪಾಧ್ಯಕ್ಷ ಶಂಕರರಾವ್, ಸಿಎಸ್‌ಆರ್ ಮ್ಯಾನೇಜರ್ ಪಂಡಿತ್ ಗಂಗಾಧರ್ ಪಾಟೀಲ್, ವಿಭಾಗೀಯ ವಲಯ ಮ್ಯಾನೇಜರ್ ಗಂಗಾಧರಯ್ಯ ಸಹಾಯಕ ಮ್ಯಾನೇಜರ್ ಪ್ರಶಾಂತ್‌ಕುಮಾರ್, ಸಹಾಯಕ ಮ್ಯಾನೇಜರ್ ಚಂದ್ರು, ಸಿಂಧುಜಾ, ಅನಿಲ್ ಮೊದಲಾದವರು ಇದ್ದರು.

-----

19ಸಿಎಚ್ಎನ್‌12ಚಾಮರಾಜನಗರದ ಡಾ. ರಾಜ್‌ಕುಮಾರ್ ಕಲಾಮಂದಿರದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಶೇ. 80ಕ್ಕೂ ಹೆಚ್ಚು ಅಂಕ ಪಡೆದ ಬಡ ವಿದ್ಯಾರ್ಥಿಗಳಿಗೆ ಎಸ್ಪಿ ಡಾ. ಬಿ.ಟಿ. ಕವಿತಾ ಅವರು ವಿದ್ಯಾರ್ಥಿ ವೇತನ ವಿತರಣೆ ಮಾಡಿದರು.