ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಡೆಂಘೀ ಹಾಗೂ ಚಿಕೂನ್ ಗುನ್ಯಾ ಸೇರಿದಂತೆ ಇತರ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಮುನ್ನಚ್ಚರಿಕೆ ವಹಿಸುವಂತೆ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರ ತಿಳಿಸಿದರು.ತಾಲೂಕಿನ ಬಲ್ಲೇನಹಳ್ಳಿ ಗ್ರಾಪಂ ಆವರಣದಲ್ಲಿ ಡೆಂಘೀ ವಿರೋಧಿ ಮಾಸಾಚರಣೆಯಲ್ಲಿ ಮಾತನಾಡಿ, ತಾಲೂಕಿನಾದ್ಯಂತ 22 ಡೆಂಘೀ ಪ್ರಕರಣಗಳು ಪತ್ತೆಯಾಗಿವೆ. ನಿಂತ ನೀರು ಸೊಳ್ಳೆಗಳ ಉತ್ಪತ್ತಿ ತಾಣವಾಗಿರುವುದರಿಂದ ಪ್ರತಿ ಶುಕ್ರವಾರ ಈಡೀಸ್ ಲಾರ್ವ ಉತ್ಪತ್ತಿ ತಾಣಗಳನ್ನು ನಾಶಕ್ಕೆ ಸೂಕ್ತ ಕ್ರಮ ಕೈಗೊಂಡಿದ್ದೇವೆ ಎಂದರು.
ಸ್ಥಳೀಯ ಗ್ರಾಪಂಗಳು ಕಸ ವಿಲೇವಾರಿ ಹಾಗೂ ಕುಡಿಯುವ ನೀರಿನ ಬಗ್ಗೆ ಜಾಗೃತಿ ವಹಿಸಿಬೇಕು. ಸಾರ್ವಜನಿಕರು ಚರಂಡಿಗಳಲ್ಲಿ ತೆಂಗಿನ ಚಿಪ್ಪು, ಹಳೆಯ ಟೈರು, ನೀರಿನ ತೊಟ್ಟಿಗಳಲ್ಲಿ ನೀರು ನಿಲ್ಲದಂತೆ ಮುನ್ನೆಚ್ಚರಿಕೆ ಕ್ರಮವಹಿಸಿ, ಜ್ವರ ಕಂಡ ಕೂಡಲೇ ನಿರ್ಲಕ್ಷಿಸದೆ ರಕ್ತ ತಪಾಸಣೆ ಮಾಡಿಸಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದರು.ಪಿಡಿಓ ಸುರೇಶ್ ಕುಮಾರ್ ಮಾತನಾಡಿ, ಇಲಾಖೆ ನಿರ್ದೇಶನದಂತೆ ಸ್ವಚ್ಛ ಶನಿವಾರ ಎಂಬ ಕಾರ್ಯಕ್ರಮದಡಿಯಲ್ಲಿ ನಮ್ಮ ಪಂಚಾಯಿತಿಯಲ್ಲಿ ಶುಚಿಗಾರ ಸಿಬ್ಬಂದಿ ಕೊರತೆ ಇದ್ದರೂ ಪಂಚಾಯ್ತಿ, ಚುನಾಯಿತ ಪ್ರತಿನಿಧಿಗಳು ಹಾಗೂ ಆರೋಗ್ಯ ಇಲಾಖೆಯ ಸಲಹೆ ಸಹಕಾರದಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡಿದ್ದೇವೆ ಎಂದರು.
ಲಭ್ಯ ಕುಡಿಯುವ ನೀರಿಗೆ ನಿಯಮಾನುಸರ ಬ್ಲೀಚಿಂಗ್ ಪುಡಿಯ ಮೂಲಕ ಶುಚಿಗೊಳಿಸಿ ಶುದ್ಧವಾದ ಕುಡಿಯುವ ನೀರು ಹಾಗೂ ಗ್ರಾಮ ನೈರ್ಮಲ್ಯಕ್ಕೆ ಮೊದಲನೇ ಆದ್ಯತೆ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಆರೋಗ್ಯ ಇಲಾಖೆಯ ಜೊತೆಗೆ ಪೂರಕವಾಗಿ ಸೇವೆ ನೀಡುತ್ತೇವೆ ಎಂದರು.ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರಾಜು, ಗ್ರಾಪಂ ಅಧ್ಯಕ್ಷೆ ಸವಿತಾ, ಉಪಾಧ್ಯಕ್ಷೆ ರಶ್ಮಿ ಹೇಮಂತ್ ಕುಮಾರ್, ಸದಸ್ಯರಾದ, ಜಗದೀಶ್, ಯೋಗೇಶ್, ಪ್ರಭಾಕರ್, ಬೆಟ್ಟಮ್ಮ, ಭವ್ಯ ಸುರೇಶ್, ಪ್ರಭಾಕರ್, ಪ್ರೀತಿ, ಸಂಪೂರ್ಣ, ಸಾವಿತ್ರಿ, ಸಂಪೂರ್ಣ, ಮಲ್ಲೇಶಚಾರಿ, ರಾಚಯ್ಯ, ಡಾ. ಗೋಪಾಲ್, ಕಾರ್ಯದರ್ಶಿ ವೆಂಕಟರಾಮು, ಗ್ರಂಥಪಾಲಕ ಕೂಡಲಕುಪ್ಪೆ ಸೋಮಶೇಖರ್, ಸಿಬ್ಬಂದಿ ಪದ್ಮ, ಸುವರ್ಣ, ಪಣಿಂದ್ರ, ಮಹೇಶ್, ಅರುಣ್, ಸಂಜಯ್ ಹಾಗೂ ಮಹದೇವು ಹಾಜರಿದ್ದರು. ಉಚಿತ ವಾಕ್ ಮತ್ತು ಶ್ರವಣ ತಪಾಸಣೆ ಶಿಬಿರ ಉದ್ಘಾಟನೆ
ಶ್ರೀರಂಗಪಟ್ಟಣ:ತಾಲೂಕಿನ ಬಾಬುರಾಯನ ಕೊಪ್ಪಲು ಗ್ರಾಮದಲ್ಲಿ ನಡೆದ ಉಚಿತ ವಾಕ್ ಮತ್ತು ಶ್ರವಣ ತಪಾಸಣೆ ಶಿಬಿರವನ್ನು ರಾಷ್ಟ್ರಪತಿ ವಿಜೇತ, ಎಸ್‌ಎಸ್‌ಎಸ್ ಅಧಿಕಾರಿ ಡಾ.ರಾಘವೇಂದ್ರ ಉದ್ಘಾಟಿಸಿದರು.ಮೈಸೂರಿನ ಹಿಯರಿಂಗ್ ಸ್ಪೀಚ್ ಮತ್ತು ಇಂಪ್ಲಾನೆಟ್ ಕ್ಲಿನಿಕ್ ಇಲ್ಲಿನ ಮುಖ್ಯಸ್ಥ ಡಾ.ರಾಧಾ ಸಿಂಹಾದ್ರಿ ಮಾತನಾಡಿ, ವಯಸ್ಸಾದಂತೆ ಶ್ರವಣ ದೋಷದ ಸಮಸ್ಯೆ ಕಾಣಿಸಿಕೊಳ್ಳುತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಸಣ್ಣ ಮಕ್ಕಳಿಗೂ ಕೂಡ ಕಣ್ಣಿನ ದೃಷ್ಟಿ ಸಮಸ್ಯೆಗಳನ್ನು ನೋಡುತ್ತಿದ್ದೇದೆ. ಹಾಗಾಗಿ ಪೋಷಕರು ಮಕ್ಕಳಿಗೆ ಮೊಬೈಲ್ ಫೋನ್ ನೀಡಬಾರದು ಎಂದರು.ಶಿಬಿರದಲ್ಲಿ ಸುಮಾರು 105 ಮಂದಿ ಶ್ರವಣದೋಷ ವ್ಯಕ್ತಿಗಳು ಭಾಗವಹಿಸಿದ್ದರು. ಕೆಲವರಿಗೆ ಉಚಿತವಾಗಿ ಶ್ರವಣ ಯಂತ್ರವನ್ನು ಕೊಡಲಾಯಿತು.
ಈ ವೇಳೆ ಶ್ರೀರಂಗಪಟ್ಟಣ ರೋಟರಿ ಅಧ್ಯಕ್ಷ ಮಂಜುರಾಂ, ಕಿರಂಗೂರು ಗ್ರಾಪಂ ಕಾರ್ಯದರ್ಶಿ ಲಕ್ಷ್ಮೀದೇವಿ, ಅಂಗವಿಕಲರ ಪುನರ್ವಸತಿ ವಸತಿ ಕಾರ್ಯಕರ್ತ ಜೆ ಎಸ್ ಕೃಷ್ಣ, ಹಿಯರಿಂಗ್ ಸ್ಪೀಚ್ ಮತ್ತು ಇಂಪ್ಲಾನೆಟ್ ಕ್ಲಿನಿಕ್‌ನ ವೈದ್ಯಾಧಿಕಾರಿಗಳು, ಮ್ಯಾನೇಜರ್ ನಿತ್ಯ, ನಾಗಭೂಷಣ್, ಅಚೀವರ್ಸ್ ಅಕಾಡೆಮಿಯ ವಿದ್ಯಾರ್ಥಿಗಳಾದ ಅಚಲ, ಗುರುಪ್ರಸಾದ್, ವಿಹಾನ್, ಆಧ್ಯಾನ್ ಸೇರಿದಂತೆ ಇತರರು ಇದ್ದರು.