ಪರಿಸರ ರಕ್ಷಣೆಗೆ ಮುಂದಾಗಿ

| Published : Oct 30 2025, 02:15 AM IST

ಸಾರಾಂಶ

ಪರಿಸರದ ಬಗ್ಗೆ ಪ್ರತಿಯೊಬ್ಬರು ಕಾಳಜಿ ವಹಿಸಬೇಕು. ಸಸಿ ನೆಟ್ಟು ಅವುಗಳನ್ನು ಪಾಲನೆ ಮಾಡುವ ಹೊಣೆಗಾರಿಗೆ ತಾಳಬೇಕು

ಕುಕನೂರು: ಪರಿಸರ ರಕ್ಷಣೆಗೆ ಪ್ರತಿಯೊಬ್ಬರು ಮುಂದಾಗಬೇಕು ಎಂದು ಪಿಎಸ್ಐ ನಾಗಪ್ಪ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಸರ್ದಾರ ವಲ್ಲಭಬಾಯಿ ಪಟೇಲರ ಜನ್ಮದಿನ ಪ್ರಯುಕ್ತ ಸಸಿ ನೆಟ್ಟು ಮಾತನಾಡಿದ ಅವರು, ಪರಿಸರದ ಬಗ್ಗೆ ಪ್ರತಿಯೊಬ್ಬರು ಕಾಳಜಿ ವಹಿಸಬೇಕು. ಸಸಿ ನೆಟ್ಟು ಅವುಗಳನ್ನು ಪಾಲನೆ ಮಾಡುವ ಹೊಣೆಗಾರಿಗೆ ತಾಳಬೇಕು. ಪರಿಸರ ಮನುಷ್ಯನಿಗೆ ಜೀವಿಸಲು ಬೇಕಾದ ಎಲ್ಲ ಅವಶ್ಯಕತೆ ನೀಡಿದೆ. ಅಂತಹ ಪರಿಸರ ನಾವು ರಕ್ಷಣೆ ಮಾಡಬೇಕಾದರೆ ಅದು ಸಸಿಗಳನ್ನು ಹಚ್ಚಿ ಬೆಳೆಸುವುದರಿಂದ ಮಾತ್ರ ಸಾಧ್ಯ. ಪ್ರತಿ ವರ್ಷ ಒಂದಾದರೂ ಸಸಿ ಪ್ರತಿಯೊಬ್ಬ ಮನುಷ್ಯ ನೆಡಬೇಕು.ಇದರಿಂದ ಪ್ರಕೃತಿ ಸೊಬಗು ಹೆಚ್ಚುತ್ತದೆ. ಶುದ್ಧ ಗಾಳಿ, ವಾತಾವರಣ ಲಭಿಸುತ್ತದೆ ಎಂದರು.

ಕುಕನೂರು ಪೊಲೀಸ್ ಠಾಣೆ ಆವರಣದಲ್ಲಿ ಸಸಿ ನೆಡಲಾಯಿತು. ಠಾಣೆ ಪೊಲೀಸ್ ಸಿಬ್ಬಂದಿಗಳಿದ್ದರು.