ತಲಕಾವೇರಿ: ಕಾವೇರಿ ಮಾತೆಯ ಪುರಾಣ, ಚಿತ್ರಕಥೆ ಪುಸ್ತಕ ಲೋಕಾರ್ಪಣೆ

| Published : Oct 17 2025, 01:03 AM IST

ತಲಕಾವೇರಿ: ಕಾವೇರಿ ಮಾತೆಯ ಪುರಾಣ, ಚಿತ್ರಕಥೆ ಪುಸ್ತಕ ಲೋಕಾರ್ಪಣೆ
Share this Article
  • FB
  • TW
  • Linkdin
  • Email

ಸಾರಾಂಶ

ಕೊಡಗಿನ ಚಿತ್ರಶಿಲ್ಪ ಕಲಾವಿದ ಬಿ.ಕೆ.ಗಣೇಶ್ ರೈ ಅವರು ರಚಿಸಿರುವ ಶ್ರೀ ಕಾವೇರಿ ಮಾತೆಯ ಪುಣ್ಯಪ್ರದವಾದ ಪುರಾಣ ಚಿತ್ರಕಥೆ ಪುಸ್ತಕ ಮತ್ತು ಚಿತ್ರಪಟ ತಲಕಾವೇರಿಯ ಸನ್ನಿಧಿಯಲ್ಲಿ ಪೂಜಾವಿಧಿ ವಿಧಾನಗಳೊಂದಿಗೆ ಲೋಕಾರ್ಪಣೆಗೊಂಡಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗಿನ ಚಿತ್ರಶಿಲ್ಪ ಕಲಾವಿದ ಬಿ.ಕೆ.ಗಣೇಶ್ ರೈ ಅವರು ರಚಿಸಿರುವ ಶ್ರೀ ಕಾವೇರಿ ಮಾತೆಯ ಪುಣ್ಯಪ್ರದವಾದ ಪುರಾಣ ಚಿತ್ರಕಥೆ ಪುಸ್ತಕ ಮತ್ತು ಚಿತ್ರಪಟ ತಲಕಾವೇರಿಯ ಸನ್ನಿಧಿಯಲ್ಲಿ ಪೂಜಾವಿಧಿ ವಿಧಾನಗಳೊಂದಿಗೆ ಲೋಕಾರ್ಪಣೆಗೊಂಡಿತು.ಮಡಿಕೇರಿ ಐಶ್ವರ್ಯ ಕ್ರಿಯೇಶನ್ಸ್‌ನ ದ್ವಿತೀಯ ಪ್ರಕಟಣೆಯಾಗಿರುವ ಶ್ರೀ ಕಾವೇರಿ ಮಾತೆಯ ಪುಣ್ಯಪ್ರದವಾದ ಪುರಾಣ ಚಿತ್ರಕಥೆ ಪುಸ್ತಕ 1995ರಲ್ಲಿ ಕನ್ನಡ, ಕೊಡವ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. ಜಲವರ್ಣ ಕಲಾಕೃತಿಯೊಂದಿಗೆ ನಿರ್ಮಾಣವಾಗಿದ್ದ ಚಿತ್ರಕಥೆ ಪುಸ್ತಕ ಇದೀಗ ದ್ವಿತೀಯ ಮುದ್ರಣ ಹಾಗೂ ಪ್ರಕಟಣೆ ನವ್ಯ ತಂತ್ರಜ್ಞಾನದೊಂದಿಗೆ ಡಿಜಿಟಲ್ ಗ್ರಾಫಿಕ್ಸ್‌ನಲ್ಲಿ ಅತ್ಯಂತ ಸುಂದರವಾಗಿ ಮೂಡಿಬಂದಿದೆ.

ಈ ಬಾರಿ ಕನ್ನಡ, ಅರೆಭಾಷೆ, ಇಂಗ್ಲಿಷ್ ಮತ್ತು ತಮಿಳು ಭಾಷೆಯಲ್ಲಿ ಮುದ್ರಣವಾಗಿರುವುದು ವಿಶೇಷ. ವಿವಿಧ ಭಾಷಿಕರಿಗೆ ಹಾಗೂ ಮಕ್ಕಳಿಂದ, ವಯೋವೃದ್ಧರ ವರೆಗೂ ಶ್ರೀ ಕಾವೇರಿ ಮಾತೆಯ ಪುರಾಣ ಚಿತ್ರಕಥೆ ಅತ್ಯಂತ ಸರಳವಾಗಿ ತಿಳಿದುಕೊಳ್ಳುವಂತಾಗಿದೆ.2025ರ ಮಹಾಶಿವರಾತ್ರಿಯಂದು ಕಾವೇರಿಮಾತೆಯ ಶ್ಲೋಕವನ್ನು ಆಧರಿಸಿ ಬಿ.ಕೆ.ಗಣೇಶ್ ರೈ ಅವರು ರಚಿಸಿದ ಪದ್ಮಾಸನದಲ್ಲಿ ಕುಳಿತಿರುವ ಭಂಗಿಯ ಶ್ರೀ ಕಾವೇರಿಮಾತೆಯ ವರ್ಣರಂಜಿತ ಚಿತ್ರ ಲೋಕಾರ್ಪಣೆಯಾಗಿತ್ತು. ಇದೀಗ ಶ್ರೀ ಕಾವೇರಿ ಮಾತೆಯ ಪುರಾಣ ಚಿತ್ರಕಥೆಯೊಂದಿಗೆ, ನಿಂತಿರುವ ಭಂಗಿಯಲ್ಲಿ ಶ್ರೀ ಕಾವೇರಿ ತಾಯಿಯ ಚಿತ್ರಪಟ ಕೂಡ ಲೋಕಾರ್ಪಣೆಯಾಗಿದೆ.