ಸಾರಾಂಶ
Talawaragera: Mahapurana from March 20
-ಮಾ.30ರಂದು ಸಾಮೂಹಿಕ ವಿವಾಹ, ರಥೋತ್ಸವ
-----ಕನ್ನಡಪ್ರಭ ವಾರ್ತೆ ಸುರಪುರ
ಸೊಲ್ಲಾಪೂರ ಜಿಲ್ಲೆಯ ಹೊಟಗಿ ಬೃಹನ್ಮಠದ ತಾಲೂಕಿನ ತಳವಾರಗೇರಿಯ ಶಾಖಾ ಬೃಹನ್ಮಠದಲ್ಲಿ 17ನೇ ವರ್ಷದ ಮಹಾಶಿವಶರಣ ವಿಶ್ವಜ್ಯೋತಿ ವಿಶ್ವರಾಧ್ಯ ಮಹಾಪುರಾಣ ಮಾ.20ರಿಂದ ನಡೆಯಲಿದ್ದು, ಮಾ.30ರಂದು ಮಹಾಪುರಾಣ ಮಹಾಮಂಗಲ, ಸಾಮೂಹಿಕ ವಿವಾಹ, ರಥೋತ್ಸವ ನಡೆಯಲಿದೆ.ಶ್ರೀಮದ್ ಕಾಶೀ ಜ್ಞಾನ ಸಿಂಹಾಸನದ ಪೀಠಾದೀಪತಿ ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮಾ.20ರಿಂದ ಪ್ರತಿದಿನ ಸಂಜೆ ಶರಣ ರಮೇಶ ಯಾಳಗಿ ಮಹಾಪುರಾಣ ವಾಚಿಸಲಿದ್ದು, ಸಂಗೀತ ಕಾರ್ಯಕ್ರಮ ಗುರುಕುಮಾರ ಹೂಗಾರ, ಮಹಾದೇವ ತಬಲಾ ವಾದನ ನುಡಿಸುವರು. ಸೊಲ್ಲಾಪುರದ ಬೃಹನ್ಮಠದ ಚನ್ನಯೋಗಿ ರಾಜೇಂದ್ರ ಶಿವಾಚಾರ್ಯ, ಮಾಗಣಗೇರಿ ಬೃಹನ್ಮಠದ ಶಿವಾಚಾರ್ಯ ರತ್ನ ವಿಶ್ವರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಅಧ್ಯಕ್ಷತೆವಹಿಸುವರು. ಮಾ.30ರಂದು ಬೆ.6ಕ್ಕೆ ಚನ್ನವೀರ ಶಿವಾಚಾರ್ಯರ ಮೂರ್ತಿಗೆ ರುದ್ರಾಭೀಷೇಕ ಹಾಗೂ ಜಂಗಮ ವಟುಗಳಿಗೆ ಅಯ್ಯಾಚಾರ ಭಕ್ತರಿಗೆ ಶಿವಧೀಕ್ಷೆ ನಡೆಯುವುದು. ಅಂದು ಬೆಳಿಗ್ಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ, ಮಧ್ಯಾಹ್ನ ಪುರಾಣ ಮಹಾಮಂಗಲ ನಂತರ ಸಾಮೂಹಿಕ ವಿವಾಹ ಹಾಗೂ ಧಾರ್ಮಿಕ ಸಭೆ ನಡೆಯುವುದು.
------11ವೈಡಿಆರ್12: ಕಾಶಿಮಠದ ಪೀಠಾಧಿಪತಿ ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ.