ಸಾರಾಂಶ
ಹೊಸಪೇಟೆ: ನಗರದ ಅಂಜುಮನ್ ಶಾದಿಮಹಲ್‌ನಲ್ಲಿ ಅಂಜುಮನ್ ಖಿದ್ಮತೆ ಇಸ್ಲಾಂ ಕಮಿಟಿಯಿಂದ ಎಸ್ಎಸ್ಎಲ್‌ಸಿ, ದ್ವಿತೀಯ ಪಿಯುಸಿಯಲ್ಲಿ ಶೇ.85ಕ್ಕೂ ಅಧಿಕ ಅಂಕಗಳೊಂದಿಗೆ ಪಾಸಾದ ವಿದ್ಯಾರ್ಥಿಗಳನ್ನು ಭಾನುವಾರ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಅಂಜುಮನ್ ಕಮಿಟಿ, ಹುಡಾ ಅಧ್ಯಕ್ಷ ಎಚ್.ಎನ್. ಮಹಮ್ಮದ್ ಇಮಾಮ್ ನಿಯಾಜಿ ಮಾತನಾಡಿ, ಪ್ರವಾದಿ ಮಹಮ್ಮದರ ಮೊದಲನೇ ಸಂದೇಶವೇ ವಿದ್ಯಾಭ್ಯಾಸವಾಗಿದೆ. ವಿದ್ಯಾಭ್ಯಾಸಕ್ಕಾಗಿ ಪ್ರಪಂಚದ ಯಾವುದೇ ಮೂಲೆಗೆ ಬೇಕಾದರೂ ಹೋಗಿ ಜ್ಞಾನ ಪಡೆದುಕೊಳ್ಳಬಹುದು. ಪ್ರತಿ ವಿದ್ಯಾರ್ಥಿಗಳು ಧರ್ಮದ ಜ್ಞಾನದ ಜೊತೆಗೆ ಪ್ರಾಪಂಚಿಕ ಜ್ಞಾನ ಕಲಿಯಬೇಕು. ಉತ್ತಮ ವಿದ್ಯಾಭ್ಯಾಸ ಮಾಡಿದಾಗ ಮಾತ್ರ ಐಎಎಸ್, ಐಪಿಎಸ್ ಹುದ್ದೆ ಪಡೆಯಲು ಸಾಧ್ಯ. ಪೊಲೀಸ್ ಅಧಿಕಾರಿ, ಜಿಲ್ಲಾಧಿಕಾರಿ, ಡಾಕ್ಟರ್, ಎಂಜಿನಿಯರ್ ಗಳಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗಲಿದೆ ಎಂದರು.ಮುಸ್ಲಿಂ ಧರ್ಮಗುರು ಮೆಹಬೂಬ್ ಪೀರಸಾಬ್, ಅಂಜುಮನ್ ಕಮಿಟಿಯ ಉಪಾಧ್ಯಕ್ಷ ಎಂ.ಎಂ. ಫೈರೋಜ್ ಖಾನ್, ಕಾರ್ಯದರ್ಶಿ ಅಬೂಬಕ್ಕರ್ ಅಶ್ರಫಿ, ಖಜಾಂಚಿ ಅನ್ಸರ್ ಬಾಷಾ, ಜಂಟಿ ಕಾರ್ಯದರ್ಶಿ ಡಾ.ದುರ್ವೆಶ್ ಮೈನುದ್ದೀನ್, ಸದ್ಯಸರಾದ ಸದ್ದಾಮ್ ಹುಸೇನ್, ಮೊಹಮ್ಮದ್ ಮೋಸಿನ್, ಗುಲಾಮ್ ರಸೂಲ್, ಖದೀರ್, ಮನ್ಸೂರ್, ವಿಜಯನಗರ ಜಿಲ್ಲೆಯ ವಕ್ಫ್ ಬೋರ್ಡ್ ಅಧ್ಯಕ್ಷ ದಾದಾಪೀರ್, ಮುಖಂಡರಾದ ಎಸ್.ಎಸ್.ಕೆ ವಲಿಸಾಬ್, ಫೈರೋಜ್ ಪಿರಾ ಸಾಬ್, ಜಾವೇದ್, ತಯ್ಯಬ್, ರಫೀಕ್, ಹಬೀಬುಲ್ಲ, ವಾಹಿದ್, ಕಲಾಂಸಾಬ್, ಹುಸೇನ್ ಸಾಬ್, ರಫೀಕ್, ಖಾದರ್ ಸಾಬ್ ಮತ್ತಿತರರಿದ್ದರು. ಹೊಸಪೇಟೆಯ ಅಂಜುಮನ್ ಶಾದಿಮಹಲ್ ನಲ್ಲಿ ಅಂಜುಮನ್ ಖಿದ್ಮತೆ ಇಸ್ಲಾಂ ಕಮಿಟಿ ವತಿಯಿಂದ ಭಾನುವಾರ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅಂಜುಮನ್ ಕಮಿಟಿ ಹಾಗೂ ಹುಡಾ ಅಧ್ಯಕ್ಷ ಎಚ್.ಎನ್. ಮಹಮ್ಮದ್ ಇಮಾಮ್ ನಿಯಾಜಿ ಅವರು ಸನ್ಮಾನಿಸಿದರು.