ಆರ್‌ಎಸ್‌ಬಿ ಮಹಿಳಾ ವೇದಿಕೆಯಿಂದ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿವೇತನ

| Published : Jul 30 2024, 12:35 AM IST

ಆರ್‌ಎಸ್‌ಬಿ ಮಹಿಳಾ ವೇದಿಕೆಯಿಂದ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿವೇತನ
Share this Article
  • FB
  • TW
  • Linkdin
  • Email

ಸಾರಾಂಶ

ರಾಜಾಪುರ ಸಾರಸ್ವತ ಮಹಿಳಾ ವೇದಿಕೆ ವತಿಯಿಂದ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ರ್‍ಯಾಂಕ್ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು ಹಾಗೂ ವಿದ್ಯಾರ್ಥಿ ವೇತನ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಮಣಿಪಾಲ

ಇಲ್ಲಿನ ರಾಜಾಪುರ ಸಾರಸ್ವತ ಮಹಿಳಾ ವೇದಿಕೆ ವತಿಯಿಂದ ಭಾನುವಾರ ಮಣಿಪಾಲ ಆರ್‌ಎಸ್‌ಬಿ ಸಭಾಭವನದಲ್ಲಿ ಜರುಗಿದ ವಾರ್ಷಿಕ ಮಹಾಸಭೆಯ ಸಮಾರಂಭದಲ್ಲಿ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ರ್‍ಯಾಂಕ್ ಗಳಿಸಿದ ವಿದ್ಯಾರ್ಥಿಗಳಾದ ಭಕ್ತಿ ಕಾಮತ್, ಶ್ರೀಧ ಕಾಮತ್, ಶೇ.೯೮ ಕ್ಕಿಂತ ಅಧಿಕ ಅಂಕಗಳಿಸಿದ ಪ್ರತಿಭಾನ್ವಿತರಾದ ಸುಶಾಂತ್ ನಾಯಕ್, ಅಶ್ವಿನಿ ಡಿ. ನಾಯಕ್, ಅದಿತಿ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.೯೮ಕ್ಕಿಂತ ಅಧಿಕ ಅಂಕಗಳಿಸಿದ ನರೇಂದ್ರ ಪ್ರಭು, ಸಂವಿದ್, ನಿಶ್ಮಿತಾ ಪ್ರಭು ಅವರನ್ನು ಸನ್ಮಾನಿಸಲಾಯಿತು.

ಅಲ್ಲದೇ ಈ ಸಂದರ್ಭದಲ್ಲಿ ೫೨ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಯಿತು. ನರಸಿಂಗೆ ದೇವಳದ ಆಡಳಿತ ಮೊಕ್ತೇಸರ ಅಲೆವೂರು ರಮೇಶ್ ಸಾಲ್ವಣ್‌ಕಾರ್ ವಿದ್ಯಾರ್ಥಿಗಳಿಗೆ ಸಂಸ್ಕಾರ, ಸಂಸ್ಕೃತಿಯ ಬಗ್ಗೆ ಮಾಹಿತಿ ನೀಡಿದರು.ಸಭೆಯ ಅಧ್ಯಕ್ಷತೆಯನ್ನು ವೇದಿಕೆಯ ಅಧ್ಯಕ್ಷೆ ಗೀತಾ ಎಸ್.ನಾಯಕ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಗಾಯತ್ರಿ ಜಿ. ನಾಯಕ್, ಕಾರ್ಯದರ್ಶಿ ನಯನಾ ಎನ್. ನಾಯಕ್, ಕೋಶಾಧಿಕಾರಿ ಸುರೇಖಾ ಕೆ. ನಾಯಕ್, ಮಹಿಳಾ ವೇದಿಕೆಯ ಸಂಸ್ಥಾಪಕರಾದ ಸುನೀತಾ ಎನ್. ನಾಯಕ್, ರವಿಜಾ ಎಸ್. ನಾಯಕ್, ಸುಮಾ ಎಸ್. ನಾಯಕ್, ವೇದಿಕೆಯ ಮಾಜಿ ಅಧ್ಯಕ್ಷೆ ಮೋಹಿನಿ ಎನ್. ನಾಯಕ್ ಸಹಿತ ಸರ್ವ ಸದಸ್ಯರು ಉಪಸ್ಥಿತರಿದ್ದರು. ಡಾ. ವಿದ್ಯಾಲತಾ ನಾಯಕ್, ಜ್ಯೋತಿ ನಾಯಕ್ ಆತ್ರಾಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.