ಕವಿಗೆ ಪ್ರತಿಭೆ, ಗ್ರಹಿಕೆ, ಪರಿಶ್ರಮ ಮುಖ್ಯ: ಸಾಹಿತಿ ಪ್ರೊ. ಚಂದ್ರಶೇಖರ ವಸ್ತ್ರದ

| Published : Sep 29 2025, 01:05 AM IST

ಕವಿಗೆ ಪ್ರತಿಭೆ, ಗ್ರಹಿಕೆ, ಪರಿಶ್ರಮ ಮುಖ್ಯ: ಸಾಹಿತಿ ಪ್ರೊ. ಚಂದ್ರಶೇಖರ ವಸ್ತ್ರದ
Share this Article
  • FB
  • TW
  • Linkdin
  • Email

ಸಾರಾಂಶ

ಹೇಗೆ ಬಂಗಾರವು ಒಂದು ವಸ್ತುವಾಗಿದ್ದು, ಅದರಿಂದ ವಿವಿಧ ಒಡವೆ ಮಾಡಲಾಗುವುದೋ ಹಾಗೆ ಕವಿಯೂ ಕವಿಗಳು ಪ್ರಸಕ್ತತೆಯನ್ನು ಅರ್ಥ ಮಾಡಿಕೊಂಡು, ಸರಿಯಾದ ಉಸಿರಾಟ, ಧ್ವನಿ, ಮತ್ತು ಭಾವನೆಗಳನ್ನು ಬಳಸಿ ಗಟ್ಟಿಯಾಗಿಸುದು ಕವನ.

ಗದಗ: ಸರ್ವಕಾಲಕ್ಕೂ ಸಲ್ಲುವ ಭಾಷೆಗಳ ಮೂಲಕ ಕವನ ಬರೆಯುವವರೇ ನಿಜವಾದ ಕವಿ. ಕವಿಗೆ ಪ್ರತಿಭೆ, ಗ್ರಹಿಕೆ, ಅಭ್ಯಾಸ ಮತ್ತು ಪರಿಶ್ರಮ ಇರಬೇಕು. ಕವಿತೆ ಎಂಬುದು ವಸ್ತುವನ್ನು ಒಡವೆಯಾಗಿ ಮಾಡುವ ಪ್ರಕ್ರಿಯೆ ಎಂದು ಹಿರಿಯ ಸಾಹಿತಿ ಪ್ರೊ. ಚಂದ್ರಶೇಖರ ವಸ್ತ್ರದ ತಿಳಿಸಿದರು.

ನಗರದ ಆದರ್ಶ ಶಿಕ್ಷಣ ಸಂಸ್ಥೆಯ ಅವರಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌, ವಿ.ಆರ್. ಕುಷ್ಟಗಿ ಮೆಮೋರಿಯಲ್ ಕಾಲೇಜ್ ಆಫ್ ಕಾಮರ್ಸ್‌ನ ಕನ್ನಡ ವಿಭಾಗದ ಸಹಯೋಗದಲ್ಲಿ ನಡೆದ ದಸರಾ ಕವಿಗೋಷ್ಠಿ- 2025 ಉದ್ಘಾಟಿಸಿ ಮಾತನಾಡಿದರು.

ಹೇಗೆ ಬಂಗಾರವು ಒಂದು ವಸ್ತುವಾಗಿದ್ದು, ಅದರಿಂದ ವಿವಿಧ ಒಡವೆ ಮಾಡಲಾಗುವುದೋ ಹಾಗೆ ಕವಿಯೂ ಕವಿಗಳು ಪ್ರಸಕ್ತತೆಯನ್ನು ಅರ್ಥ ಮಾಡಿಕೊಂಡು, ಸರಿಯಾದ ಉಸಿರಾಟ, ಧ್ವನಿ, ಮತ್ತು ಭಾವನೆಗಳನ್ನು ಬಳಸಿ ಗಟ್ಟಿಯಾಗಿಸುದು ಕವನ. ಕವಿತೆಯ ಭಾವಕ್ಕೆ ತಕ್ಕಂತೆ ದನಿ ಮತ್ತು ವೇಗವನ್ನು ಬದಲಾಯಿಸುವುದು, ದೇಹ ಭಾಷೆ ನಿಯಂತ್ರಿಸುವುದು, ಮತ್ತು ಶ್ರೋತೃಗಳೊಂದಿಗೆ ಕಣ್ಣಿನ ಸಂಪರ್ಕ ಇಟ್ಟುಕೊಳ್ಳುವುದು ಉತ್ತಮ ವಾಚನಕ್ಕೆ ಸಹಾಯ ಮಾಡುತ್ತದೆ ಎಂದರು.

ಕವನ ವಾಚನ ಮಾಡುವವರು ಕವಿತೆಯ ಅರ್ಥ, ವಿಷಯ, ಮತ್ತು ಭಾವನೆಗಳನ್ನು ಆಳವಾಗಿ ಅರ್ಥಮಾಡಿಕೊಳ್ಳಿ. ಕವಿತೆಯಲ್ಲಿರುವ ಕಥೆ ಅಥವಾ ಸಂದೇಶವನ್ನು ಗ್ರಹಿಸಲು ಪ್ರಯತ್ನಿಸಿ. ನಿಯಮಿತವಾಗಿ ಉಸಿರಾಡುತ್ತಾ, ಸೂಕ್ತವಾದ ವಿರಾಮಗಳನ್ನು ತೆಗೆದುಕೊಳ್ಳಿ. ಇದರಿಂದ ಕವಿತೆಯನ್ನು ಸ್ಪಷ್ಟವಾಗಿ ಮತ್ತು ನಿಧಾನವಾಗಿ ಓದಲು ಸಾಧ್ಯವಾಗುತ್ತದೆ ಮತ್ತು ಕವಿತೆಯ ಅರ್ಥ ಶ್ರೋತೃಗಳಿಗೆ ತಲುಪುತ್ತದೆ ಎಂದರು.

ಪ್ರೊ. ಶಕುಂತಲಾ ಸಿಂದೂರು, ಮಂಜುಳಾ ವೆಂಕಟೇಶಯ್ಯ, ಸವಿತಾ ಕಲಹಾಳ, ಪ್ರೊ. ಜಯಶ್ರೀ ಅಂಗಡಿ, ಡಾ. ಮಹೇಶ ಕೆರಿ, ಗೀತಾ ಹೂಗಾರ, ರಮ ಚಿಟಗೇರಿ, ಮುತ್ತಪ್ಪ ನಯನಪುರ, ಗಣೇಶಗೌಡ ಎನ್. ಪಾಟೀಲ, ಪ್ರೊ. ಈಶ್ವರ ಯಾವುಗಲ್, ಆರತಿ ಜಂಗಲಿ, ಮಂಜುನಾಥ ಬಳ್ಳಾರಿ, ನಾಗರಾಜ ವಾಸನಾದ, ಬಸಮ್ಮ ನಿಂಗನಗೌಡ ಅವರು ಕವಿತೆಗಳನ್ನು ಪ್ರಸ್ತುತಪಡಿಸಿದರು.

ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಉಪ ಪ್ರಾ. ಡಾ. ವಿ.ಟಿ. ನಾಯ್ಕರ ವಹಿಸಿದ್ದರು. ಕಸಾಪ ಕಾರ್ಯಕ್ರಮದಲ್ಲಿ ಪ್ರೊ. ಚಂದ್ರಶೇಖರ ವಸ್ತ್ರದ ಮಾತನಾಡಿದರು.ತಾಲೂಕು ಅಧ್ಯಕ್ಷೆ ಡಾ. ರಶ್ಮಿ ಅಂಗಡಿ, ಪ್ರೊ. ಬಿ.ಪಿ. ಜೈನರ್, ಪ್ರೊ. ಡಿ.ಎಸ್. ನಾಯಕ್ ಸೇರಿದಂತೆ ಇತರರು ಇದ್ದರು.