ತಾಲೂಕು ಪ್ರಥಮ ಕನ್ನಡ ಜಾನಪದ ಮಹಿಳಾ ಸಮ್ಮೇಳನ ಇಂದು

| Published : Oct 05 2025, 01:02 AM IST

ಸಾರಾಂಶ

ಕನ್ನಡ ಜಾನಪದ ಪರಿಷತ್, ಬೆಂಗಳೂರು, ಕನ್ನಡ ಜಾನಪದ ಪರಿಷತ್, ಜಿಲ್ಲಾ ಘಟಕ, ಬಾಗಲಕೋಟೆ, ಕನ್ನಡ ಜಾನಪದ ಪರಿಷತ್ ಮಹಿಳಾ ಮುಧೋಳ ತಾಲೂಕು ಘಟಕ, ಕನ್ನಡ ಜಾನಪದ ಪರಿಷತ್ ವಲಯ ಮಹಿಳಾ ಘಟಕ ಲೋಕಾಪುರ ಅವರ ಕಜಾಪ ಜಿಲ್ಲಾಧ್ಯಕ್ಷ ಡಿ.ಎಂ. ಸಾಹುಕಾರ ಅವರ ನೇತೃತ್ವ ಹಾಗೂ ಸಂಯುಕ್ತಾಶ್ರಯದಲ್ಲಿ ಅ.೫ ರಂದು ಎಪಿಎಂಸಿ ಆವರಣದಲ್ಲಿ ಮುಧೋಳ ತಾಲೂಕು ಪ್ರಥಮ ಕನ್ನಡ ಜಾನಪದ ಮಹಿಳಾ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಲೋಕಾಪುರ

ಕನ್ನಡ ಜಾನಪದ ಪರಿಷತ್, ಬೆಂಗಳೂರು, ಕನ್ನಡ ಜಾನಪದ ಪರಿಷತ್, ಜಿಲ್ಲಾ ಘಟಕ, ಬಾಗಲಕೋಟೆ, ಕನ್ನಡ ಜಾನಪದ ಪರಿಷತ್ ಮಹಿಳಾ ಮುಧೋಳ ತಾಲೂಕು ಘಟಕ, ಕನ್ನಡ ಜಾನಪದ ಪರಿಷತ್ ವಲಯ ಮಹಿಳಾ ಘಟಕ ಲೋಕಾಪುರ ಅವರ ಕಜಾಪ ಜಿಲ್ಲಾಧ್ಯಕ್ಷ ಡಿ.ಎಂ. ಸಾಹುಕಾರ ಅವರ ನೇತೃತ್ವ ಹಾಗೂ ಸಂಯುಕ್ತಾಶ್ರಯದಲ್ಲಿ ಅ.೫ ರಂದು ಎಪಿಎಂಸಿ ಆವರಣದಲ್ಲಿ ಮುಧೋಳ ತಾಲೂಕು ಪ್ರಥಮ ಕನ್ನಡ ಜಾನಪದ ಮಹಿಳಾ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಲೋಕಾಪುರ ವಲಯ ಘಟಕ ಅಧ್ಯಕ್ಷ ರೇಖಾ ನರಹಟ್ಟಿ ತಿಳಿಸಿದ್ದಾರೆ.

ಪಟ್ಟಣದ ಎಪಿಎಂಸಿ ಆವರಣದಲ್ಲಿ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬೆಳಗ್ಗೆ ೭ ಗಂಟೆಗೆ ದುರ್ಗಾದೇವಿ ದೇವಸ್ಥಾನದಿಂದ ಎಪಿಎಂಸಿ ಪ್ರಧಾನ ವೇದಿಕೆಯವರೆಗೆ ಸಮ್ಮೇಳನಾಧ್ಯಕ್ಷ ಮೆರವಣಿಗೆ ನಡೆಯಲಿದೆ. ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ. ಎಸ್. ಬಾಲಾಜಿ ರಾಷ್ಟ್ರಧ್ವಜಾರೋಹಣ, ಜಿಲ್ಲಾಧ್ಯಕ್ಷ ಡಿ.ಎಂ.ಸಾಹುಕಾರ ನಾಡಧ್ವಜಾರೋಹಣ, ಜಿಲ್ಲಾಧಿಕಾರಿ ಸಂಗಪ್ಪ ಪರಿಷತ್ ಧ್ಜಜಾರೋಹಣ ನೆರವೇರಿಸುವರು.

ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಸಮ್ಮೇಳನ ಉದ್ಘಾಟಿಸುವರು, ಜ್ಞಾನೇಶ್ವರ ಮಠದ ಪೀಠಾಧಿಕಾರಿ ಬ್ರಹ್ಮಾನಂದ ಶ್ರೀಗಳು ಸಾನ್ನಿಧ್ಯ, ಡಾ. ಎಸ್. ಬಾಲಾಜಿ ಅಧ್ಯಕ್ಷತೆ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ನಾಡೋಜ ಯಲ್ಲವ್ವ ರೊಡ್ಡಪ್ಪನವರ ಸರ್ವಾಧ್ಯಕ್ಷತೆ ವಹಿಸುವರು. ಸಮ್ಮೇಳನದ ನಿಮಿತ್ತ ಮಹಿಳಾ ಘಟಕದ ಪದಾಧಿಕಾರಿಗಳ ಪದಗ್ರಹಣ, ಗೊಷ್ಠಿ, ಬಹಿರಂಗ ಅಧಿವೇಶನ, ಸನ್ಮಾನ ಸಮಾರಂಭ, ಕಲಾವಿದರ ಸನ್ಮಾನ, ಜಾನಪದ ಸಂಜೆ ಕಾರ್ಯಕ್ರಮ ನಡೆಯಲಿವೆ ಎಂದು ತಿಳಿಸಿದರು.

ಸಪ್ತಸ್ವರ ಸಂಸ್ಥೆ ಅಧ್ಯಕ್ಷ ಜ್ಯೋತಿ ಪಾಟೀಲ, ಮುಧೋಳ ಸಾಹಿತಿ ಶ್ರೀಮತಿ ಅನಿತಾ ಪಾಟೀಲ ಮಾತನಾಡಿ, ಸುಮಾರು ತಾಲೂಕಿನಲ್ಲಿ ಪ್ರಥಮ ಕನ್ನಡ ಜಾನಪದ ಮಹಿಳಾ ಸಮ್ಮೇಳನ ಹಮ್ಮಿಕೊಂಡಿದ್ದು, ಸುಮಾರು ೨ ಸಾವಿರದಿಂದ ೨.೫ ಸಾವಿರ ಮಹಿಳೆಯರು ಭಾಗವಹಿಸಲಿರುವ ಈ ಕಾರ್ಯಕ್ರಮದಲ್ಲಿ ಸಾಮಾಜಿಕ ಹಾಗೂ ರಾಷ್ಟ್ರೀಯ ವಿಚಾರಗಳ ಮಂಥನ ಪರ್ಯಾವರಣ ಸಂರಕ್ಷಣೆ ಮುಂತಾದ ಚಟುವಟಿಕೆಗಳ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಕಜಾಪ ವಲಯ ಮಹಿಳಾ ಘಟಕದ ಉಪಾಧ್ಯಕ್ಷ ಶಕುಂತಲಾ ರಂಗಣ್ಣವರ, ರಾಜೇಶ್ವರಿ ಮೋದಿ, ಸುಧಾ ಗಸ್ತಿ, ಸುರೇಖಾ ಹಟ್ಟಿ, ಸರಸ್ವತಿ ಪಾಟೀಲ, ಗೀತಾ ಹಲಕಿ, ಮಂಜುಳಾ ಸಂಬಾಳದ, ಕವಿತಾ ಮುದಕವಿ, ಯಲ್ಲವ್ವ ನಾಟಕಾರ, ನಿವೇದಿತಾ ಕಾಂಬಳೆ, ಸಾವಿತ್ರಿ ಹಡಪದ, ಸವಿತಾ ಗಂಗಾವತಿ, ಕಸಾಪ ತಾಲೂಕಾಧ್ಯಕ್ಷ ಆನಂದ ಪೂಜಾರಿ, ಚಂದ್ರಕಾಂತ ರಂಗಣ್ಣವರ, ಎಸ್.ಎಂ.ರಾಮದುರ್ಗ, ಡಾ. ಸಂತೋಷ ಶೆಟ್ಟರ್, ಸಂಗಮೇಶ ನಿಲಗುಂದ ಇನ್ನಿತರರು ಇದ್ದರು.