ಸಾರಾಂಶ
ಡೆಂಘೀ ಪ್ರಕರಣಗಳ ಬಂದಾಗ ಕೊನೆಯ ಹಂತದಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ರೋಗಿಗಳನ್ನು ಕಳಿಸದೆ ಮೊದಲ ಹಂತದ ಪರೀಕ್ಷ ನಡೆಸಿ ಕಳಿಸಬೇಕು. ಅಗತ್ಯಕ್ಕಿಂತ ಹೆಚ್ಚಿನ ಬೆಡ್‌ಗಳನ್ನು ಹಾಕುವುದು, ಚಿಕತ್ಸೆ ನೀಡಿ ಹೆಚ್ಚಿನ ಹಣಕ್ಕೆ ಬೇಡಿಕೆ ಇಡುವಂತಿಲ್ಲ. ಚಿಕಿತ್ಸಾ ವೆಚ್ಚ ಕುರಿತು ಫಲಕ ಪ್ರದರ್ಶಿಸಬೇಕು, ಕ್ಲಿನಿಕ್‌ಗಳಲ್ಲಿ ರೋಗಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಅರಕಲಗೂಡು ತಾಲೂಕು ಆರೋಗ್ಯಾಧಿಕಾರಿ ಡಾ. ಪುಷ್ಪಲತಾ ಸೂಚನೆ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಅರಕಲಗೂಡು
ಖಾಸಗಿ ಕ್ಲಿನಿಕ್ ವೈದ್ಯರು ರೋಗಿಗಳಿಗೆ ವ್ಯವಸ್ಥಿತ ರೀತಿಯಲ್ಲಿ ಚಿಕಿತ್ಸೆ ನಡೆಸದಿದ್ದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಾಲೂಕು ಆರೋಗ್ಯಾಧಿಕಾರಿ ಡಾ. ಪುಷ್ಪಲತಾ ಸೂಚನೆ ನೀಡಿದರು.ಆರೋಗ್ಯ ಇಲಾಖೆ ಕಚೇರಿ ಸಭಾಂಗಣದಲ್ಲಿ ಖಾಸಗಿ ಕ್ಲಿನಿಕ್ ವೈದ್ಯರು, ಮೆಡಿಕಲ್ ಶಾಪ್ ಮಾಲೀಕರ ಸಭೆ ನಡೆಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು. ಹೆಚ್ಚಿನ ರೋಗಿಗಳು ಬರುತ್ತಿದ್ದಾರೆ ಎಂದು ಅಗತ್ಯಕ್ಕಿಂತ ಹೆಚ್ಚಿನ ಬೆಡ್‌ಗಳನ್ನು ಹಾಕುವುದು, ಚಿಕತ್ಸೆ ನೀಡಿ ಹೆಚ್ಚಿನ ಹಣಕ್ಕೆ ಬೇಡಿಕೆ ಇಡುವಂತಿಲ್ಲ. ಚಿಕಿತ್ಸಾ ವೆಚ್ಚ ಕುರಿತು ಫಲಕ ಪ್ರದರ್ಶಿಸಬೇಕು, ಕ್ಲಿನಿಕ್‌ಗಳಲ್ಲಿ ರೋಗಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಡೆಂಘೀ ಪ್ರಕರಣಗಳ ಬಂದಾಗ ಕೊನೆಯ ಹಂತದಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ರೋಗಿಗಳನ್ನು ಕಳಿಸದೆ ಮೊದಲ ಹಂತದ ಪರೀಕ್ಷ ನಡೆಸಿ ಕಳಿಸಬೇಕು. ರೋಗಿಗಳ ಮಾಹಿತಿಯನ್ನು ದಾಖಲು ಮಾಡಿಕೊಂಡು ಆರೋಗ್ಯ ಇಲಾಖೆಗೆ ಕಳಿಸುವಂತೆ ಸೂಚಿಸಿದರು. ಮೆಡಿಕಲ್ ಶಾಪ್ ಮಾಲೀಕರು ಗರ್ಭಪಾತದ ಮಾತ್ರೆಗಳನ್ನು ವೈದ್ಯರ ಚೀಟಿ ಇಲ್ಲದೆ ಮಾರಾಟ ಮಾಡಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ. ಈ ಕುರಿತು ಎಚ್ಚರ ವಹಿಸಬೇಕು ಎಂದರು.
ಆರೋಗ್ಯ ಶಿಕ್ಷಣಾಧಿಕಾರಿ ಪರಮೇಶ್, ಆರೋಗ್ಯ ನಿರೀಕ್ಷಕ ಚಂದ್ರೇಗೌಡ ಇದ್ದರು.