ಸೌಂದರ್ಯ ಕಾಪಾಡಿಕೊಳ್ಳಲು ದೇಹ ದಂಡನೆ ಅಗತ್ಯ: ಶ್ರೀನಿವಾಸ್

| Published : Feb 20 2024, 01:51 AM IST

ಸೌಂದರ್ಯ ಕಾಪಾಡಿಕೊಳ್ಳಲು ದೇಹ ದಂಡನೆ ಅಗತ್ಯ: ಶ್ರೀನಿವಾಸ್
Share this Article
  • FB
  • TW
  • Linkdin
  • Email

ಸಾರಾಂಶ

ಇಂದಿನ ದಿನಗಳಲ್ಲಿ ದೇಹ ಸೌಂದರ್ಯಕ್ಕೆ ಜನರು ಹೆಚ್ಚು ಒತ್ತು ನೀಡುತ್ತಿದ್ದಾರೆ. ಆದರೆ ದೇಹವನ್ನು ದಂಡಿಸುವವರ ಸಂಖ್ಯೆ ಕ್ಷೀಣಿಸುತ್ತಿರುವುದರಿಂದ ಮನುಷ್ಯನ ಆಯಸ್ಸು ಕಡಿಮೆ ಆಗುತ್ತ ಸಾಗಿದೆ

ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ

ಸೌಂದರ್ಯವನ್ನು ಕಾಪಾಡಿಕೊಳ್ಳಬೇಕಾದರೆ ದೇಹವನ್ನು ದಂಡಿಸಬೇಕು ಎಂದು ತಾಲೂಕು ದಂಡಾಧಿಕಾರಿ ಶ್ರೀನಿವಾಸ್ ತಿಳಿಸಿದರು.

ಎಚ್.ಡಿ. ಕೋಟೆ ಪಟ್ಟಣದ ಅಂಬೇಡ್ಕರ್ ಭವನದ ಮುಂಭಾಗ ಯಶು ಹೆಲ್ತ್ ಪಾಯಿಂಟ್ ಮಲ್ಟಿ ಜಿಮ್ ವತಿಯಿಂದ ಆಯೋಜಿಸಿದ್ದ 14ನೇ ವರ್ಷದ ತಾಲೂಕು ಮತ್ತು ಜಿಲ್ಲಾ ಮಟ್ಟದ ದೇಹಧಾರ್ಢ್ಯ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿ,

ಇಂದಿನ ದಿನಗಳಲ್ಲಿ ದೇಹ ಸೌಂದರ್ಯಕ್ಕೆ ಜನರು ಹೆಚ್ಚು ಒತ್ತು ನೀಡುತ್ತಿದ್ದಾರೆ. ಆದರೆ ದೇಹವನ್ನು ದಂಡಿಸುವವರ ಸಂಖ್ಯೆ ಕ್ಷೀಣಿಸುತ್ತಿರುವುದರಿಂದ ಮನುಷ್ಯನ ಆಯಸ್ಸು ಕಡಿಮೆ ಆಗುತ್ತ ಸಾಗಿದೆ ಎಂದರು.

ಮಿಸ್ಟರ್ ಏಷ್ಯಾ ಖ್ಯಾತಿಯ ನಜೀಬ್ ಖಾನ್ ಮಾತನಾಡಿ, ದೇಹವನ್ನು ದಂಡಿಸಲು ವಯಸ್ಸಿನ ಮಿತಿ ಇಲ್ಲ. ಆದ್ದರಿಂದ ಐವತ್ತು ವರ್ಷ ಮೇಲ್ಪಟ್ಟವರೂ ದೇಹವನ್ನು ದಂಡಿಸಿ ದೇಹ ಸೌಂದರ್ಯವನ್ನು ಉತ್ತಮಪಡಿಸಿಕೊಳ್ಳುವ ಜೊತೆ ಜೊತೆಗೆ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು.

ಈ ವೇಳೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ರನ್ನಿಂಗ್ ವಿಭಾಗದಲ್ಲಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕ ಪಡೆದ ಪೊಲೀಸ್ ಇಲಾಖೆ ಸರಗೂರಿನ ಎಂ.ಡಿ. ನಾಗರಾಜು ಅವರನ್ನು ಸನ್ಮಾನಿಸಲಾಯಿತು.

ತಾಲೂಕು ಮಟ್ಟದ ವಿಭಾಗದಲ್ಲಿ ಮಿಸ್ಟರ್ ಕೋಟೆ ಆಗಿ ಉಲ್ಲಾಸ್, ಬೆಸ್ಟ್ ಮಾಸ್ ಆಗಿ ಸಂತು, ಬೆಸ್ಟ್ ಪೋಸರ್ ಆಗಿ ಪ್ರವೀಣ್ ಕುಮಾರ್ ಮತ್ತು ಮೋಸ್ಟ್ ಮಸ್ಕಲರ್ ಆಗಿ ಸಾತ್ವಿಕ್ ಜಯಗಳಿಸಿದರು.

ವಿಜೇತರ ವಿವರ

ಜಿಲ್ಲಾ ಮಟ್ಟದ ವಿಭಾಗದಲ್ಲಿ ಮಿಸ್ಟರ್ ಮೈಸೂರು ಆಗಿ ಸತೀಶ್, ಬೆಸ್ಟ್ ಮಾಸ್ ಆಗಿ ಎಸ್.ಎಸ್. ಮಹದೇವಸ್ವಾಮಿ, ಬೆಸ್ಟ್ ಪೋಸರ್ ಆಗಿ ಎಸ್. ಪ್ರವೀಣ್ ಮತ್ತು ಮೋಸ್ಟ್ ಮಸ್ಕಲರ್ ಆಗಿ ಧನರಾಜ್ ಸರಗೂರು ಜಯಗಳಿಸಿದರು.

ಮಿಸ್ಟರ್ ಮೈಸೂರು ಮತ್ತು ಮಿಸ್ಟರ್ ಕೋಟೆ ವಿಜೇತರಿಗೆ ಆಕರ್ಷಕ ಟ್ರೋಫಿ, 10 ಸಾವಿರ ನಗದು ಬಹುಮಾನ ನೀಡಲಾಯಿತು. ಇನ್ನುಳಿದ ಮೂರು ವಿಭಾಗಕ್ಕೆ ಆಕರ್ಷಕ ಟ್ರೋಫಿ ಮತ್ತು ತಲಾ ಎರಡು ಸಾವಿರ ಬಹುಮಾನ ನೀಡಲಾಯಿತು.

ಈ ವೇಳೆ ಕಂದಾಯ ಇಲಾಖೆ ಸಿಬ್ಬಂದಿ ಸುಗುಣ, ಯಶು ಹೆಲ್ತ್ ಪಾಯಿಂಟ್ ನ ಮಾಲೀಕ ಯಶವಂತ್, ಪುರಸಭಾ ಸದಸ್ಯರಾದ ಐಡಿಯಾ ವೆಂಕಟೇಶ್, ಮಧುಕುಮಾರ್, ಪ್ರೇಂ ಸಾಗರ್, ಅನಿತಾ ನಿಂಗನಾಯಕ, ಚಾಕಳ್ಳಿ ಕೃಷ್ಣ, ಕವಿತಾ ಸುರೇಶ್, ಲೋಕೇಶ್, ಸುಹಾಸಿನಿ ದಿನೇಶ್, ಶಾಂತಮ್ಮ ಗೋವಿಂದರಾಜು, ಸೋಮಶೇಖರ್, ಕಸಾಪ ತಾಲೂಕು ಅಧ್ಯಕ್ಷ ಕನ್ನಡ ಪ್ರಮೋದ್, ಒಕ್ಕಲಿಗರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಸತೀಶ್, ಪತ್ರಕರ್ತರ ಸಂಘದ ಅಧ್ಯಕ್ಷ ಬೀಚನಹಳ್ಳಿ ಮಂಜು, ಮಂಜುಕೋಟೆ, ಶಿಕ್ಷಕರಾದ ಪ್ರಕಾಶ್ ಪುಟ್ಟಪ್ಪ, ಸಿದ್ದರಾಜು, ವಿಠಲ, ಚಿಕ್ಕನಾಯಕ, ರವಿಕುಮಾರ್ ಆರಾಧ್ಯ, ರವಿ ಇದ್ದರು.