ಸಂಘ ಶಕ್ತಿಯಿಂದ ಬದುಕು ಸುಗಮ:ಪ್ರಭು ಬೆನ್ನಾಳೆ ಮಹಾರಾಜರು

| Published : Feb 20 2024, 01:50 AM IST

ಸಾರಾಂಶ

ರಬಕವಿ-ಬನಹಟ್ಟಿ: ಪ್ರತಿಯೊಬ್ಬರಿಗೂ ಸಂಘದ ಸಂಪರ್ಕವಿರಲೇಬೇಕು. ಸಂಘ ಶಕ್ತಿಯಿಂದ ಬದುಕು ಸುಗಮವಾಗುವದಲ್ಲದೆ ಬದುಕುವ ಕಲೆ ರೂಢಿಸಿಕೊಳ್ಳಲು ಸಾಧ್ಯವೆಂದು ಇಂಚಗೇರಿ ಮಠದ ಪ್ರಭು ಬೆನ್ನಾಳೆ ಮಹಾರಾಜರು ಹೇಳಿದರು. ಬನಹಟ್ಟಿಯ ಸೋಮವಾರ ಪೇಟೆಯಲ್ಲಿ ಜರುಗಿದ ಶ್ರೀಗುರು ಕಾಡಸಿದ್ದೇಶ್ವರ ಸಹಕಾರಿ ಸಂಘದ ಉದ್ಘಾಟನೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಹಣದಿಂದಲೇ ಬಲವೆನ್ನುವುದು ಸತ್ಯ. ಅದರಂತೆ ಸಂಘಗಳೊಂದಿಗೆ ಇತರರನ್ನೂ ಬಲಪಡಿಸಿಕೊಂಡು ಸಮಾನತೆಯ ಸಮಾಜ ನಿರ್ಮಾಣ ಸಬಲರಾದವರ ಕರ್ತವ್ಯ ಎಂದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಪ್ರತಿಯೊಬ್ಬರಿಗೂ ಸಂಘದ ಸಂಪರ್ಕವಿರಲೇಬೇಕು. ಸಂಘ ಶಕ್ತಿಯಿಂದ ಬದುಕು ಸುಗಮವಾಗುವದಲ್ಲದೆ ಬದುಕುವ ಕಲೆ ರೂಢಿಸಿಕೊಳ್ಳಲು ಸಾಧ್ಯವೆಂದು ಇಂಚಗೇರಿ ಮಠದ ಪ್ರಭು ಬೆನ್ನಾಳೆ ಮಹಾರಾಜರು ಹೇಳಿದರು.

ಬನಹಟ್ಟಿಯ ಸೋಮವಾರ ಪೇಟೆಯಲ್ಲಿ ಜರುಗಿದ ಶ್ರೀಗುರು ಕಾಡಸಿದ್ದೇಶ್ವರ ಸಹಕಾರಿ ಸಂಘದ ಉದ್ಘಾಟನೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಹಣದಿಂದಲೇ ಬಲವೆನ್ನುವುದು ಸತ್ಯ. ಅದರಂತೆ ಸಂಘಗಳೊಂದಿಗೆ ಇತರರನ್ನೂ ಬಲಪಡಿಸಿಕೊಂಡು ಸಮಾನತೆಯ ಸಮಾಜ ನಿರ್ಮಾಣ ಸಬಲರಾದವರ ಕರ್ತವ್ಯ ಎಂದರು.

ರಬಕವಿಯ ಗುರುಸಿದ್ಧೇಶ್ವರ ಶ್ರೀಗಳು, ಬನಹಟ್ಟಿಯ ಶರಣಬಸವ ಶಿವಾಚಾರ್ಯರು, ಚಿಮ್ಮಡದ ಪ್ರಭು ಮಹಾಸ್ವಾಮಿಗಳು, ಯಲ್ಲಪ್ಪ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು.

ಪಿಎಸ್‌ಐ ಶಾಂತಾ ಹಳ್ಳಿ, ದುಂಡಪ್ಪ ಮಾಚಕನೂರ, ಮಲ್ಲಿಕಾರ್ಜುನ ತುಂಗಳ, ಶ್ಯಾಮ ಲೋಯಾ, ಕರೆಪ್ಪ ಭುಜಂಗ ವೇದಿಕೆ ಮೇಲಿದ್ದರು.

ದೇವೇಂದ್ರ ಮಹಿಷವಾಡಗಿ, ರಘುವೀರಸಿಂಗ್ ರಜಪೂತ, ಬಸವರಾಜ ಮೋಟಗಿ, ರಾಹುಲ್‌ ಕಲಾಲ, ಮಹಾನಿಂಗ ಜಾಂಗನೂರ, ಸಿದ್ದಪ್ಪ ಇಟನಾಳ, ಸಂಗಮೇಶ್ವರ ಹಾಸಿಲಕರ, ಜಕಪ್ಪ ಜಿಡ್ಡಿಮನಿ, ಗುರು ಶಾಸ್ತ್ರಗೊಲ್ಲರ, ಮಾಧುರಿ ಹಟ್ಟಿ, ಮಹಾದೇವ ಗಸ್ತಿ, ಸಂತೋಷ ಸಿಂಗೆ, ಅರ್ಜುನ ಜಿಡ್ಡಿಮನಿ ಉಪಸ್ಥಿತರಿದ್ದರು.