ಫಲಾನುಭವಿಗಳಿಗೆ ಸೂಕ್ತ ಮಾಹಿತಿ ನೀಡಲು ಗೃಹಲಕ್ಷ್ಮಿ ಯೋಜನೆಗೆ ತಾಲೂಕುವಾರು ಹೆಲ್ಪ್‌ಡೆಸ್ಕ್

| Published : Sep 12 2024, 02:02 AM IST / Updated: Sep 12 2024, 12:48 PM IST

ಫಲಾನುಭವಿಗಳಿಗೆ ಸೂಕ್ತ ಮಾಹಿತಿ ನೀಡಲು ಗೃಹಲಕ್ಷ್ಮಿ ಯೋಜನೆಗೆ ತಾಲೂಕುವಾರು ಹೆಲ್ಪ್‌ಡೆಸ್ಕ್
Share this Article
  • FB
  • TW
  • Linkdin
  • Email

ಸಾರಾಂಶ

ಗೃಹಲಕ್ಷ್ಮೀ ಯೋಜನೆಯಡಿ ನೋಂದಣಿಯಾಗಿ ಸಹಾಯಧನ ಪಾವತಿಯಾಗದೇ ಇರುವ ಫಲಾನುಭವಿಗಳಿಗೆ ಸೂಕ್ತ ಮಾಹಿತಿ ನೀಡಲು ತಾಲೂಕುವಾರು ಶಿಶು ಅಭಿವೃದ್ಧಿ ಯೋಜನಾ ಕಚೇರಿಯಲ್ಲಿ ಹೆಲ್ಪ್ ಡೆಸ್ಕ್ ತೆರೆಯಲಾಗಿದೆ.  

 ದಾವಣಗೆರೆ: ಗೃಹಲಕ್ಷ್ಮೀ ಯೋಜನೆಯಡಿ ನೋಂದಣಿಯಾಗಿ ಸಹಾಯಧನ ಪಾವತಿಯಾಗದೇ ಇರುವ ಫಲಾನುಭವಿಗಳಿಗೆ ಸೂಕ್ತ ಮಾಹಿತಿ ನೀಡಲು ತಾಲೂಕುವಾರು ಶಿಶು ಅಭಿವೃದ್ಧಿ ಯೋಜನಾ ಕಚೇರಿಯಲ್ಲಿ ಹೆಲ್ಪ್ ಡೆಸ್ಕ್ ತೆರೆಯಲಾಗಿದೆ. 

ಇಲ್ಲಿಯವರೆಗೂ ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಮಾಡಿಕೊಳ್ಳದ ಫಲಾನುಭವಿಗಳು ಗ್ರಾಮ ಒನ್, ದಾವಣಗೆರೆ ಒನ್, ಸೇವಾಸಿಂಧು ಕೇಂದ್ರಗಳಲ್ಲಿ ನೋಂದಾಯಿಸಿ ಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಟಿ.ಎಸ್. ಲಲಿತ, ಪ್ರಥಮ ದರ್ಜೆ ಸಹಾಯಕರು (ಮೊ: 96203 80498), ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಎಂ.ಸಿ.ಸಿ. ಬಿ ಬ್ಲಾಕ್, ಕುವೆಂಪು ನಗರ ದಾವಣಗೆರೆ. 

ಆರ್.ಎ. ತುಷಾರ್, ದ್ವಿತೀಯ ದರ್ಜೆ ಸಹಾಯಕರು (9380629266), ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ, ದುರ್ಗಾಂಬಿಕಾ ಶಾಲೆ ಹತ್ತಿರ, ಸರಸ್ವತಿ ಬಡಾವಣೆ, ದಾವಣಗೆರೆ. ಕಿರಣ್ ತಾಲೂಕು ಸಂಯೋಜನಾಧಿಕಾರಿ, ಪೋಷಣ್ ಅಭಿಯಾನ ಯೋಜನೆ (9731262426), ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ, ನೆಲಮಹಡಿ, ಪಿ.ಎಲ್.ಡಿ ಬ್ಯಾಂಕ್ ಬಿಲ್ಡಿಂಗ್. ಶಿವಮೊಗ್ಗ ರಸ್ತೆ, ಹರಿಹರ. ಈಶ್ವರ ತಾಲೂಕು ಸಂಯೋಜನಾಧಿಕಾರಿ, ಪೋಷಣ್ ಅಭಿಯಾನ ಯೋಜನೆ(9740192819), ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ, ತಾಪಂ ಆವರಣ, ಸ್ರೀಶಕ್ತಿ ಭವನ ಜಗಳೂರು.

 ಸುದೀಪ್, ತಾಲೂಕು ಸಂಯೋಜನಾಧಿಕಾರಿ, ಪೋಷಣ್ ಅಭಿಯಾನ ಯೋಜನೆ (9844019027), ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ, ಎರಡನೇ ಮಹಡಿ, ಮಲ್ಲಪ್ಪ ಕಾಂಪ್ಲೆಕ್ಸ್, ಟಿ.ಎಂ.ರೋಡ್, ಹೊನ್ನಾಳಿ. ಶಿವಣ್ಣ ತಾಲೂಕು ಸಂಯೋಜನಾಧಿಕಾರಿ, ಪೋಷಣ್ ಅಭಿಯಾನ ಯೋಜನೆ (9686601791), ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ, ಶಿವಮೊಗ್ಗ ರಸ್ತೆ, ಐ.ಸಿ.ಐ.ಇ. ಬ್ಯಾಂಕ್ ಹತ್ತಿರ, ಜಿ.ಎಂ. ಕಾಂಪ್ಲೆಕ್ಸ್ ಚನ್ನಗಿರಿ ಈ ವಿಳಾಸಗಳಿಗೆ ಸಂಪರ್ಕಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಾನಾಯ್ಕ ತಿಳಿಸಿದ್ದಾರೆ.