ಸಾರಾಂಶ
ಕನ್ನಡಪ್ರಭ ವಾರ್ತೆ ಯಲ್ಲಾಪುರ
ಪಟ್ಟಣದ ಗಾಂಧೀ ಕುಟೀರದಲ್ಲಿ ಸಂಕಲ್ಪ ಉತ್ಸವದ ೩ನೇ ದಿನ ಭಾನುವಾರ ಬಿಸಗೋಡಿನ ಶ್ರೀ ವೀರಾಂಜನೇಯ ಮಹಿಳಾ ತಾಳಮದ್ದಲೆ ಕೂಟದಿಂದ ಲವ ಕುಶ ತಾಳಮದ್ದಲೆ ನಡೆಯಿತು.ಹಿಮ್ಮೇಳದಲ್ಲಿ ತಿಮ್ಮಣ್ಣ ಭಾಗ್ವತ ಗಾಣಗದ್ದೆ, ಸುಬ್ರಾಯ ಭಟ್ಟ ಗಾಣಗದ್ದೆ, ನಾರಾಯಣ ಕೋಮಾರ; ಅರ್ಥಧಾರಿಗಳಾಗಿ ಸುಮಾ ಭಟ್ಟ ಬಿಸಗೋಡು (ಶ್ರೀರಾಮ), ಮೀನಾಕ್ಷಿ ಭಟ್ಟ ಕೆಳಗಿನಪಾಲ (ಶತ್ರುಘ್ನ), ವೀಣಾ ಭಟ್ಟ ಬರಗದ್ದೆ (ಲವ), ನಯನಾ ಗಣಪೂಮನೆ (ಕುಶ), ಹೇಮಾ ಭಟ್ಟ ದೇವರಗದ್ದೆ (ಚಂದ್ರಕೇತು), ಪಾರ್ವತಿ ಭಟ್ಟ ಕಿಚ್ಚುಪಾಲ (ವಾಲ್ಮೀಕಿ) ವಿವಿಧ ಪಾತ್ರಗಳನ್ನು ರವೀಂದ್ರ ಭಟ್ಟ ಅಣಲಗಾರ ನಿರ್ದೇಶನದಲ್ಲಿ ಅಚ್ಚುಕಟ್ಟಾಗಿ ನಿರ್ವಹಿಸಿದರು.
ಕೀರ್ತನೆ:ಹೊನ್ನಾವರದ ಗಣಪತಿ ಹೆಗಡೆ ಹಡಿನಬಾಳ ಇವರಿಂದ ಮೋಕ್ಷದಾತ ಶ್ರೀರಾಮ ಕಥಾಭಾಗದ ಕೀರ್ತನೆ ಪ್ರಸ್ತುತಪಡಿಸಿದರು. ಇವರಿಗೆ ಗಜಾನನ ಯಾಜಿ (ತಬಲಾ), ಅರುಣ ಭಟ್ಟ ಮೂರೂರು (ಹಾರ್ಮೋನಿಯಂ) ಸಹಕರಿಸಿದರು.
ಕವಿರತ್ನ ಕಾಳಿದಾಸ ಯಕ್ಷಗಾನ:ಕವಿರತ್ನ ಕಾಳಿದಾಸ ಯಕ್ಷಗಾನ ಜನಮನ ಗೆದ್ದಿತು. ಹಿಮ್ಮೇಳದಲ್ಲಿ ಭಾಗವತರಾಗಿ ಶಂಕರ ಭಟ್ಟ ಬ್ರಹ್ಮೂರು, ಮದ್ದಲೆ ವಾದಕರಾಗಿ ಸುನೀಲ ಭಂಡಾರಿ, ಚಂಡೆ ವಾದಕರಾಗಿ ಗಣೇಶ ಗಾಂವ್ಕರ; ಮುಮ್ಮೇಳದಲ್ಲಿ ಪಾತ್ರಧಾರಿಗಳಾಗಿ ಸುಬ್ರಹ್ಮಣ್ಯ ಚಿಟ್ಟಾಣಿ (ಕುಮುದಪ್ರಿಯ-ಮಂತ್ರಿ), ರಮೇಶ ಭಂಡಾರಿ ಮೂರೂರು (ಕಾಳಿದಾಸ), ಅಶೋಕ ಭಟ್ಟ (ವಿಜಯವರ್ಮ), ಕಾರ್ತಿಕ ಚಿಟ್ಟಾಣಿ (ಕಲಾಧರ), ನಾಗರಾಜ ಕುಂಕಿಪಾಲ (ವಿದ್ಯಾಧರೆ), ದೀಪಕ ಕುಂಕಿ (ಸಖಿ), ಶ್ರೀಧರ ಅಣಲಗಾರ (ಬ್ರಾಹ್ಮಣ), ಗುರು ಜಂಬೆಸಾಲ (ಕುರುಬ) ಪಾತ್ರಗಳನ್ನು ಸುಂದರವಾಗಿ ಪ್ರಸ್ತುತಪಡಿಸಿದರು. ಇಂದು ಸಂಕಲ್ಪ ಉತ್ಸವದ ಸಮಾರೋಪ
ನ.೪ ರಂದು ಬೆಳಗ್ಗೆ ೧೦.೩೦ಕ್ಕೆ ಧನ್ವಂತರಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಮತ್ತು ರಿಸರ್ಚ್ ಸೆಂಟರ್ ಸಿದ್ದಾಪುರದಿಂದ ಆಯುರ್ವೇದ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಸಂಜೆ ೪.೧೫ರಿಂದ ಭಗವದ್ಗೀತಾ ಪಠಣ ; ೪.೩೦ರಿಂದ ಮೇಧಾ ಭಟ್ಟ ಅಗ್ಗೆರೆ ಮತ್ತು ವಾಣಿ ರಮೇಶ ಹೆಗಡೆ ತಂಡದಿಂದ ಸಂಗೀತ ಕಾರ್ಯಕ್ರಮ; ೬ರಿಂದ ಮುಕ್ತಾ ಶಂಕರ ಮತ್ತು ಡಾ.ಶಿವರಾಮ ಭಾಗ್ವತ ಶಾರದಾಂಬಾ ಇವರಿಂದ ಗಮಕ ವಾಚನ ಮತ್ತು ಪ್ರವಚನ ನಡೆಯಲಿದೆ.೬.೩೦ಕ್ಕೆ ಸಮಾರೋಪ ಕಾರ್ಯಕ್ರಮದಲ್ಲಿ ರಾಮಚಂದ್ರಾಪುರ ಮಠದ ಶ್ರೀಮದ್ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಆಶೀರ್ವಚನ ನೀಡುವರು. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಹಿರಿಯ ನ್ಯಾಯವಾದಿ ಅರುಣ ಶ್ಯಾಂ, ತಿಂಗಳೆ ಪ್ರತಿಷ್ಠಾನ ಉಡುಪಿಯ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗಡೆ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ವಿದ್ವಾಂಸ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ, ಅನಂತ ಪ್ರತಿಷ್ಠಾನದ ಅಧ್ಯಕ್ಷ ಅನಂತಮೂರ್ತಿ ಹೆಗಡೆ, ವಿಶ್ವ ಹಿಂದೂ ಪರಿಷದ್ ಜಿಲ್ಲಾಧ್ಯಕ್ಷ ಎಸ್.ಎನ್. ಭಟ್ಟ ಏಕಾನ, ವಜ್ರಳ್ಳಿ ಸಹಕಾರಿ ಸಂಘದ ಅಧ್ಯಕ್ಷ ದತ್ತಾತ್ರೇಯ ಭಟ್ಟ, ಅಖಿಲ ಭಾರತ ಸಾಹಿತ್ಯ ಪರಿಷತ್‌ನ ಗಣಪತಿ ಬೋಳಗುಡ್ಡೆ, ಇಡಗುಂದಿ ಸಹಕಾರಿ ಸಂಘದ ಅಧ್ಯಕ್ಷ ನಾರಾಯಣ ಭಟ್ಟ, ಕಣ್ಣೀಗೇರಿ ಸಹಕಾರಿ ಸಂಘದ ಅಧ್ಯಕ್ಷ ಶೇಷಗಿರಿ ಭಟ್ಟ, ಸಿದ್ಧಿವಿನಾಯಕ ಸಹಕಾರಿ ಸಂಘದ ಅಧ್ಯಕ್ಷ ಸುಬ್ಬಣ್ಣ ಗಾಣಗದ್ದೆ ಉಪಸ್ಥಿತರಿರುವರು. ಈ ಸಂದರ್ಭ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ. ನಾರಾಯಣ ಹುಳ್ಸೆಗೆ ಸಂಕಲ್ಪ ಪ್ರಶಸ್ತಿ ಪ್ರದಾನ ಮಾಡಲಾಗುವುದು.೮.೩೦ ರಿಂದ ಪ್ರದರ್ಶನವಾಗುವ ಪಾಂಚಜನ್ಯ ಯಕ್ಷಗಾನದ ಹಿಮ್ಮೇಳದಲ್ಲಿ ಹಿಲ್ಲೂರು ರಾಮಕೃಷ್ಣ ಹೆಗಡೆ, ಅನಿರುದ್ಧ ವಗೀಸುರ, ಗಜಾನನ ಸಾಂತುರು; ಮುಮ್ಮೇಳದಲ್ಲಿ ಕಾರ್ತಿಕ ಚಿಟ್ಟಾಣಿ, ಸುಬ್ರಹ್ಮಣ್ಯ ಚಿಟ್ಟಾಣಿ, ಸುಧೀರ ಉಪ್ಸೂರು, ನಾಗೇಂದ್ರ ಮೂರೂರು, ಅಶೊಕ ಭಟ್ಟ, ಶ್ರೀಧರ ಅಣಲಗಾರ ಭಾಗವಹಿಸುವರು. ಸಮಾರೋಪ ಕಾರ್ಯಕ್ರಮದ ವೇದಿಕೆಯಲ್ಲಿ ನಿವೃತ್ತ ಯೋಧರಿಗೆ ಸನ್ಮಾನ ಮಾಡಲಾಗುವುದು.;Resize=(128,128))
;Resize=(128,128))