ವಾಲ್ಮೀಕಿ ಸಿದ್ಧಾಂತ ಸ್ವಾಸ್ಥ್ಯ ಸಮಾಜದ ಮಾರ್ಗದರ್ಶಿ ಸೂತ್ರ

| Published : Oct 20 2025, 01:02 AM IST

ವಾಲ್ಮೀಕಿ ಸಿದ್ಧಾಂತ ಸ್ವಾಸ್ಥ್ಯ ಸಮಾಜದ ಮಾರ್ಗದರ್ಶಿ ಸೂತ್ರ
Share this Article
  • FB
  • TW
  • Linkdin
  • Email

ಸಾರಾಂಶ

ರಾಷ್ಟ್ರಕವಿ ಕುವೆಂಪು ಹೇಳಿರುವಂತೆ ಭರತ ಖಂಡದ ಅಖಂಡತೆಯನ್ನು, ಏಕತೆಯನ್ನು, ಸಂರಕ್ಷಿಸಿ ಬೆಳೆಸಿದ ಕೀರ್ತಿ ವಾಲ್ಮೀಕಿ ಅವರ ರಾಮಾಯಣಕ್ಕೆ ಸಲ್ಲುತ್ತದೆ.

ಕನ್ನಡಪ್ರಭ ವಾರ್ತೆ ನಂಜನಗೂಡು

ವಾಲ್ಮೀಕಿ ಮಹರ್ಷಿಗಳು ಸಂಸ್ಕೃತ ಸಾಹಿತ್ಯದ ಮೊದಲ ಕವಿ ಎನಿಸಿದ್ದಾರೆ, ಅವರು ರಚಿಸಿರುವ ರಾಮಾಯಣ ಕೃತಿಯು ಸ್ವಾಸ್ಥ್ಯ ಸಮಾಜವನ್ನು ನಿರ್ಮಿಸುವ ಮಾರ್ಗದರ್ಶಿ ಸೂತ್ರಗಳಾಗಿದೆ ಎಂದು ವಾಲ್ಮೀಕಿ ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ಎಸ್.ಸಿ. ಬಸವರಾಜು ಹೇಳಿದರು.

ತಾಲೂಕಿನ ಸಿಂಧುವಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಹರ್ಷಿ ವಾಲ್ಮೀಕಿ ಅವರ ಉದಾತ್ತ ಬೋಧನೆಗಳು ನಮ್ಮೆಲ್ಲರಿಗೂ ಸದ್ಗುಣ, ಶಿಸ್ತು, ಮೌಲ್ಯ ಕಲಿಸುವುದಲ್ಲದೆ ಪ್ರಾಮಾಣಿಕತೆಯಿಂದ ಜೀವನ ನಡೆಸಲು ಸ್ಪೂರ್ತಿ ನೀಡಿದೆ. ಆದ್ದರಿಂದ ವಾಲ್ಮೀಕಿ ಅವರ ತತ್ತ್ವ ಸಿದ್ಧಾಂತ ಮತ್ತು ಅವರ ಬೋಧನೆ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಜಿಪಂ ಮಾಜಿ ಸದಸ್ಯ ಸಿ. ಚಿಕ್ಕರಂಗನಾಯಕ ಮಾತನಾಡಿ, ರಾಷ್ಟ್ರಕವಿ ಕುವೆಂಪು ಹೇಳಿರುವಂತೆ ಭರತ ಖಂಡದ ಅಖಂಡತೆಯನ್ನು, ಏಕತೆಯನ್ನು, ಸಂರಕ್ಷಿಸಿ ಬೆಳೆಸಿದ ಕೀರ್ತಿ ವಾಲ್ಮೀಕಿ ಅವರ ರಾಮಾಯಣಕ್ಕೆ ಸಲ್ಲುತ್ತದೆ. ಅಲ್ಲದೆ ವಾಲ್ಮೀಕಿ ಮಹರ್ಷಿ ರಾಮಾಯಣ ಕೃತಿಯು ಭಾರತೀಯ ಸಂಸ್ಕೃತಿಯ ಮೇಲೆ ಆಳವಾದ ಪ್ರಭಾವ ಬೀರಿದೆ. ಜೊತೆಗೆ ವಾಲ್ಮೀಕಿಯ ಬೋಧನೆಗಳು ಶ್ರೀರಾಮಚಂದ್ರನ ಮೌಲ್ಯಗಳನ್ನು ಉತ್ತೇಜಿಸುತ್ತವೆ. ಸತ್ಯ, ಕರ್ತವ್ಯ, ಮತ್ತು ಕರುಣೆಯಂತಹ ಮಾನವೀಯ ಮೌಲ್ಯಗಳನ್ನು ಜನ ಸಾಮಾನ್ಯರಿಗೆ ಒತ್ತಿ ಹೇಳುತ್ತದೆ ಎಂದರು.

ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರವನ್ನು ಗ್ರಾಮದ ಪ್ರತಿ ಬೀದಿಗಳಲ್ಲಿ ಅದ್ಧೂರಿಯಾಗಿ ಮೆರವಣಿಗೆ ನಡೆಸಲಾಯಿತು.

ಸಮಾರಂಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕುಂಬ್ರಹಳ್ಳಿ ಸುಬ್ಬಣ್ಣ, ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಎಸ್.ಎಂ. ಕೆಂಪಣ್ಣ, ಗ್ರಾಪಂ ಅಧ್ಯಕ್ಷ ಹೊಣಕಾರ ನಾಯಕ, ಗ್ರಾಪಂ ಸದಸ್ಯ ಸ್ವಾಮಿ, ಸಿದ್ದರಾಜು, ಶಿವರಾಜು, ಬಂಗಾರು, ಪುಟ್ಟಣ್ಣ, ಸ್ವರೂಪ, ರಂಗಸ್ವಾಮಿ, ಮಲ್ಲೇಶ್, ಗ್ರಾಮದ ಯಜಮಾನರು ಮತ್ತು ಗ್ರಾಮಸ್ಥರು ಇದ್ದರು.