ಶ್ರೀ ಕ್ಷೇತ್ರ ಕುಕ್ಕೆಹಳ್ಳಿ ಯಕ್ಷಗಾನ ಮೇಳದ ವೈಭವ ಸೂರ್ಯವಂಶಿ ಎಂಬ ಹೆಸರಿನ ಪ್ರಸಂಗದ ಪ್ರದರ್ಶನದಲ್ಲಿ ತಮಿಳು ಹಾಡೊಂದನ್ನು ಹಾಡಲಾಗುತ್ತಿದ್ದು, ಇದಕ್ಕೆ ಉಡುಪಿ ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆ ವಿರೋಧ ವ್ಯಕ್ತಪಡಿಸಿದೆ.

ಉಡುಪಿ: ಶ್ರೀ ಕ್ಷೇತ್ರ ಕುಕ್ಕೆಹಳ್ಳಿ ಯಕ್ಷಗಾನ ಮೇಳದ ವೈಭವ ಸೂರ್ಯವಂಶಿ ಎಂಬ ಹೆಸರಿನ ಪ್ರಸಂಗದ ಪ್ರದರ್ಶನದಲ್ಲಿ ತಮಿಳು ಹಾಡೊಂದನ್ನು ಹಾಡಲಾಗುತ್ತಿದ್ದು, ಇದಕ್ಕೆ ಉಡುಪಿ ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆ ವಿರೋಧ ವ್ಯಕ್ತಪಡಿಸಿದೆ.

ಇತ್ತೀಚೆಗೆ ಬೈಂದೂರಿನಲ್ಲಿ ನಡೆದ ಈ ಪ್ರಸಂಗದ ಪ್ರದರ್ಶನದಲ್ಲಿ ಭಾಗವತರು ನಾನ್ ನಲ್ಲವನಾ ಕೆಟ್ಟವನಾ... ಎಂಬ ಇತ್ತೀಚೆಗೆ ವೈರಲ್ ಆಗಿರುವ ತಮಿಳು ಹಾಡನ್ನು ಹಾಡಿದ್ದು, ಇದಕ್ಕೆ ಮೇಳದ ಕಲಾವಿದರು ರಂಗಸ್ಥಳದಲ್ಲಿ ಹೆಜ್ಜೆ ಹಾಕಿದ್ದಾರೆ. ಇದು ಕನ್ನಡ ಭಾಷೆ ಹಾಗೂ ಕನ್ನಡಿಗರಿಗೆ ಮಾಡುತ್ತಿರುವ ಅವಮಾನವಾಗಿರುತ್ತದೆ. ಇದನ್ನು ಕರವೇ ಬಲವಾಗಿ ಖಂಡಿಸುತ್ತಿದೆ ಎಂದು ಜಿಲ್ಲಾಧ್ಯಕ್ಷ ಅನ್ಸರ್ ಅಹಮದ್ ಹೇಳಿದ್ದಾರೆ.

ಈ ಪ್ರಸಂಗದ ಪ್ರದರ್ಶನಕ್ಕೆ ಅನುಮತಿನೀಡಬಾರದು ಎಂದು ಬೈಂದೂರು ಠಾಣೆಗೆ ಈಗಾಗಲೇ ದೂರು ನೀಡಲಾಗಿದೆ. ಕುಕ್ಕೆಹಳ್ಳಿ ಮೇಳದವರು ಕನ್ನಡ ವಿರೋಧಿ ವರ್ತನೆ ಮುಂದುವರಿಸಿದರೇ ಸ್ಥಳದಲ್ಲಿಯೇ ಪ್ರದರ್ಶನವನ್ನು ನಿಲ್ಲಿಸುತ್ತೇವೆ ಎಂದು ಅನ್ಸಾರ್ ಎಚ್ಚರಿಕೆ ನೀಡಿದ್ದಾರೆ.