ಸಾರಾಂಶ
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಮಿತಿಮೀರಿದ ಬಳಕೆಯಿಂದಾಗಿ ವಿದ್ಯಾರ್ಥಿಗಳಿಗೆ ವಿಧ್ಯಾಭ್ಯಾಸದ ಮೇಲೆ ಗಮನ ಕಡಿಮೆ ಆಗುತ್ತಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಓದಿನ ಮೇಲೆ ಗಮನ ಬರಬೇಕು, ಅದಕ್ಕೊಂದು ಪೂರಕ ವಾತಾವರಣ ನಿರ್ಮಾಣ ಆಗಬೇಕು ಎನ್ನುವ ಸದುದ್ದೇಶದಿಂದ ಗೌಡಗೆರೆಯಲ್ಲಿರುವ ವೇದಾಂತಿ ಫಾರಂ ಹೌಸ್‌ನಲ್ಲಿ ತಮೋಘ್ನ ಸಂಸ್ಥೆಯು ಶ್ರೀಗಂಧ ಸಂಸ್ಥೆಯ ಸಹಕಾರದೊಂದಿಗೆ ಗ್ರಂಥಾಲಯವೊಂದನ್ನು ಆರಂಭಿಸಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಮಿತಿಮೀರಿದ ಬಳಕೆಯಿಂದಾಗಿ ವಿದ್ಯಾರ್ಥಿಗಳಿಗೆ ವಿಧ್ಯಾಭ್ಯಾಸದ ಮೇಲೆ ಗಮನ ಕಡಿಮೆ ಆಗುತ್ತಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಓದಿನ ಮೇಲೆ ಗಮನ ಬರಬೇಕು, ಅದಕ್ಕೊಂದು ಪೂರಕ ವಾತಾವರಣ ನಿರ್ಮಾಣ ಆಗಬೇಕು ಎನ್ನುವ ಸದುದ್ದೇಶದಿಂದ ಗೌಡಗೆರೆಯಲ್ಲಿರುವ ವೇದಾಂತಿ ಫಾರಂ ಹೌಸ್‌ನಲ್ಲಿ ತಮೋಘ್ನ ಸಂಸ್ಥೆಯು ಶ್ರೀಗಂಧ ಸಂಸ್ಥೆಯ ಸಹಕಾರದೊಂದಿಗೆ ಗ್ರಂಥಾಲಯವೊಂದನ್ನು ಆರಂಭಿಸಿದೆ.ಇತ್ತೀಚೆಗೆ ಗೌಡಗೆರೆಯ ವೇದಾಂತಿ ಫಾರಂ ಹೌಸ್ ನಲ್ಲಿ ಗ್ರಂಥಾಲಯ ಉದ್ಘಾಟನೆ ಕಾರ್ಯಕ್ರಮ ನಡೆಯಿತು. ಹಿರಿಯ ಪತ್ರಕರ್ತ ವಿಶೇಶ್ವರ್ ಭಟ್ ಅವರು ವಾಚನಾಲಯವನ್ನು ಉದ್ಭಾಟಿಸಿದರು. ಸುತ್ತಲಿನ ಹಚ್ಚ ಹಸಿರಿನ ,ಪರಿಸರ ಸ್ನೇಹಿ ವಾತಾವರಣದಲ್ಲಿ ಈ ವಾಚನಾಲಯ ಆರಂಭವಾಗಿದೆ. ಇಲ್ಲಿ ವಿದ್ಯಾರ್ಥಿಗಳಿಗೆ, ಓದುವ ಆಸಕ್ತರಿಗೆ ಪೂರಕವಾಗುವ ನಿಟ್ಟಿನಲ್ಲಿ ಉತ್ತಮ ಪುಸ್ತಕಗಳನ್ನು ಇರಿಸಲಾಗಿದೆ. ಮಹಾನ್ ವ್ಯಕ್ತಿಗಳ ಭಾವಚಿತ್ರಗಳನ್ನು ಕೂಡ ಅಳವಡಿಸಲಾಗಿದೆ. ಇಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳು , ನಾಡಿನ ಶ್ರೇಷ್ಠ ಬಗ್ಗೆ ವಚನಕಾರರು ಕ್ರೀಡಾ ಪಟುಗಳು, ಸಂಗೀತಗಾರರು, ಪತ್ರಕರ್ತರು ಸೇರಿದಂತೆ ಹತ್ತು ಹಲವು ಕ್ಷೇತ್ರದ ಸಾಧಕರ ಪುಸ್ತಕಗಳನ್ನು ಓದುಗರಿಗೆ ವ್ಯವಸ್ಥೆ ಮಾಡಲಾಗಿದೆ.ಓದಿನ ಜೊತೆಗೆ ಪರಿಸರ ಸ್ನೇಹಿ ವಾತಾವರಣ ಬೆಳೆಸಬೇಕು ಎನ್ನುವ ಕಾರಣಕ್ಕೆ ಸಸಿ ನೆಡುವ ಕಾರ್ಯಕ್ರಮವನ್ನು ಕೂಡ ಹಮ್ಮಿಕೊಳ್ಳಲಾಗಿತ್ತು. ಇದೇ ಸಂದರ್ಭದಲ್ಲಿ ವಾಚನಾಲಯದ ಆವರಣದಲ್ಲಿ ಗಣ್ಯರು ಗಿಡಗಳನ್ನು ನೆಟ್ಟರು. ಸಮಾರಂಭದಲ್ಲಿ ತಮೋಘ್ನ ಸಂಸ್ಥೆಯ ಡಾ.ಕವಿತಾ ರಾಮಕೃಷ್ಣ ದಂಪತಿ ಉಪಸ್ಥಿತರಿದ್ದರು. ಕವಿತಾ ರಾಮಕೃಷ್ಣ ಅವರು ಒಮಾನ್ ದೇಶದ ಮಸ್ಕಟ್‍ನಲ್ಲಿ ನೆಲೆಸಿದ್ದು, ತಾಯ್ನಾಡು ಹಾಗೂ ಒಮಾನ್‍ನಲ್ಲಿ ಹಲವು ಸಾಮಾಜಿಕ, ಸಾಂಸ್ಕೃತಿಕ, ಕಲಾತ್ಮಕ ಹಾಗೂ ಯೋಗ ಸಂಬಂಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ.