ತಾಪಂ ಇಒ, ಕೇಸ್‌ ವರ್ಕರ್‌ ಲೋಕಾ ಬಲೆಗೆ

| Published : Jun 29 2024, 12:39 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ಕೈಗಾರಿಕಾ ಉದ್ದೇಶಿತ ಬಡಾವಣೆಯ ನಕ್ಷೆಯನ್ನು ಅನುಮೋದನೆ ಮಾಡಲು ₹ 40ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಬೆಳಗಾವಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಕೇಸ್‌ ವರ್ಕರ್ ಲೋಕಾಯುಕ್ತ ಬಲೆಗೆ ಬಿದಿದ್ದಾರೆ. ಬೆಳಗಾವಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಾಮರೆಡ್ಡಿ ಪಾಟೀಲ ಹಾಗೂ ಕೇಸ್‌ ವರ್ಕರ್‌ ವೈಜನಾಥ ಸನದಿ ಲೊಕಾಯುಕ್ತ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿಗಳು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಕೈಗಾರಿಕಾ ಉದ್ದೇಶಿತ ಬಡಾವಣೆಯ ನಕ್ಷೆಯನ್ನು ಅನುಮೋದನೆ ಮಾಡಲು ₹ 40ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಬೆಳಗಾವಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಕೇಸ್‌ ವರ್ಕರ್ ಲೋಕಾಯುಕ್ತ ಬಲೆಗೆ ಬಿದಿದ್ದಾರೆ. ಬೆಳಗಾವಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಾಮರೆಡ್ಡಿ ಪಾಟೀಲ ಹಾಗೂ ಕೇಸ್‌ ವರ್ಕರ್‌ ವೈಜನಾಥ ಸನದಿ ಲೊಕಾಯುಕ್ತ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿಗಳು.

ಬೆಳಗಾವಿ ತಾಲೂಕಿನ ನಾವಗೆ ಗ್ರಾಮದ ರಿ.ಸ.ನಂಃ 32/4 ರಲ್ಲಿ 22 ಗುಂಟೆ 08 ಆಣೆ ವಿಸ್ತೀರ್ಣದ ಕೃಷಿ ಜಮೀನಿನಲ್ಲಿ ಗಿರಿಣಿ ಕಲ್ಲು ಕೈಗಾರಿಕೆ ಮಾಡುವ ಸಲುವಾಗಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಂದ ವಿನ್ಯಾಸ ನಕ್ಷೆಯನ್ನು ಅನುಮೋದನೆ ಮಾಡುವ ಸಲುವಾಗಿ ಬೆಳಗಾವಿ ನಗರದ ಕಾಕತಿವೇಸ್‌ನ ನಿವಾಸಿ ಶಹಾನವಾಜ್‌ ಖಾನ ಅಬ್ದುಲ್‌ ರೆಹಮಾನ ಪಠಾಣ ಅರ್ಜಿ ಸಲ್ಲಿಸಿದ್ದರು.ವಿನ್ಯಾಸ ನಕ್ಷೆಯ ಅನುಮೋದನೆ ಸಲುವಾಗಿ ತಾಪಂ ಇಒ ರಾಮರೆಡ್ಡಿ ಪಾಟೀಲ ಹಾಗೂ ಕೇಸ್ ವರ್ಕರ ವೈಜನಾಥ ಸನದಿ ಜೂನ್ 27 ರಂದು ₹ 40 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ಶಹಾನವಾಜ್‌ ಖಾನ ಪಠಾಣ ಅವರು ಬೆಳಗಾವಿ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ್ದರು. ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಲೋಕಾಯುಕ್ತ ಅಧಿಕಾರಿಗಳು, ಲಂಚದ ಹಣ ಪಡೆದುಕೊಳ್ಳುವ ವೇಳೆ ಲೋಕಾಯುಕ್ತ ಪೊಲೀಸ್ ಇನ್ಸಪೆಕ್ಟರ್‌ ಅನ್ನಪೂರ್ಣ ಹುಲಗೂರ ನೇತೃತ್ವದಲ್ಲಿ ದಾಳಿ ಮಾಡಿದ್ದಾರೆ. ಈ ವೇಳೆ ಇಬ್ಬರು ಅಧಕಾರಿಗಳು ರೆಡ್‌ಹ್ಯಾಂಡ್‌ ಆಗಿ ಸಿಕ್ಕಿ ಬಿದ್ದಿದ್ದು, ಇಬ್ಬರನ್ನು ಬಂಧಿಸಲಾಗಿದೆ.