ಸಾರಾಂಶ
ರಾಮನಗರ: ಸುಮಾರು ವರ್ಷಗಳಿಂದ ನಷ್ಟಲ್ಲಿದ್ದ ಸಂಘವನ್ನು ಶಾಸಕರ ಸಹಕಾರದಿಂದ ಶಕ್ತಿ ತುಂಬಲಾಗುತ್ತಿದೆ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಯರೇಹಳ್ಳಿ ಮಂಜು ಹೇಳಿದರು.
ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸದಸ್ಯರು ಸಂಘದ ಮೇಲೆ ವಿಶ್ವಾಸವಿಟ್ಟು ಹಣಕಾಸಿನ ವ್ಯವಹಾರ ಮಾಡಿ ಅಭಿವೃದ್ಧಿಗೆ ಸಹಕರಿಸುವಂತೆ ಕಿವಿಮಾತು ಹೇಳಿದರು.ಟಿಎಪಿಎಂಎಸ್ ಅಧ್ಯಕ್ಷ ದೊಡ್ಡಿ ಸುರೇಶ್ ಮಾತನಾಡಿ, ಈ ಹಿಂದೆ ಆಡಳಿತ ಮಂಡಳಿ ಹಲವು ಕಾರಣಾಂತರಗಳಿಂದ ನಿಷ್ಕ್ರಿಯ ಆಗಿತ್ತು, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಮಂಜಣ್ಣ ಅವರ ಸಹಕಾರದಿಂದ ಈ ಹಂತಕ್ಕೆ ಬಂದಿದೆ. ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ, ಜೆಡಿಎಸ್ ಮುಖಂಡರಾದ ಸಬ್ಬಕೆರೆ ಶಿವಲಿಂಗಯ್ಯ ಸೇರಿದಂತೆ ಎಲ್ಲರ ಸಹಕಾರದಿಂದ ಪ್ರಸಕ್ತ ಆಡಳಿತ ಮಂಡಳಿಗೆ ಅವಿರೋಧ ಆಯ್ಕೆಯಾಗಿದ್ದು, ಎಲ್ಲರ ಪರಿಶ್ರಮದಿಂದ ಲಾಭ ಪಡೆದುಕೊಂಡಿದೆ ಎಂದರು.
ವ್ಯವಸ್ಥಿತ ಗೋದಾಮು, ಫುಡ್ ಬಜಾರ್ ಸೇರಿದಂತೆ ಹಲವು ಯೋಜನೆಗಳನ್ನು ಹಾಕಿಕೊಂಡಿದ್ದು, ಆಡಳಿತ ಮಂಡಳಿ ನಿಮ್ಮೆಲ್ಲರ ಪರವಾಗಿದ್ದುಕೊಂಡು ಕಾರ್ಯನಿರ್ವಹಿಸಲು ಬದ್ಧವಾಗಿದೆ. ಎಲ್ಲರೂ ಒಗ್ಗಟ್ಟಿನಿಂದ ಸಂಘ ಅಭಿವೃದ್ಧಿ ಪಡಿಸಿದರೆ ಲಾಭದತ್ತ ಕೊಂಡೊಯ್ಯಬಹುದು ಎಂದು ಸಹಕಾರ ಕೋರಿದರು.ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಶ್ರೀನಿವಾಸ್ ಮೂರ್ತಿ, ನಿರ್ದೇಶಕರಾದ ಮಹದೇವಯ್ಯ, ವಾಸು, ನಾಗರಾಜು, ಬಿ.ಎನ್. ಶಂಕರ್, ಬಿ.ನರಸಿಂಹಯ್ಯ, ಕೆ.ಶಿವಪ್ರಕಾಶ್, ವಿ.ಶ್ರೀನಿವಾಸ್, ಸುಧಾರಾಣಿ ಕಲಾಪ್ರಿಯಾ, ಸಿಇಒ ಜನಾರ್ದನ್ ಹಾಜರಿದ್ದರು.
29ಕೆಆರ್ ಎಂಎನ್ 4.ಜೆಪಿಜಿರಾಮನಗರ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಅಧ್ಯಕ್ಷ ಸುರೇಶ್ ಅಧ್ಯಕ್ಷತೆಯಲ್ಲಿ ನಡೆಯಿತು.