ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ತಾಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಮತ್ತು ರೂಪಾಂತರಗೊಳಿಸುವ ಸಹಕಾರ ಸಂಘದ ಐದು ವರ್ಷದ ಅವಧಿಗೆ ಸೆ.28ರಂದು ನಡೆಯಲಿರುವ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಒಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದು, 26 ಮಂದಿ ಅಂತಿಮವಾಗಿ ಕಣದಲ್ಲಿ ಉಳಿದಿದ್ದಾರೆ.ತಾಲೂಕಿನಾದ್ಯಂತ ಚುನಾವಣೆಯಲ್ಲಿ ಸ್ಪರ್ಧಿಸಲು 43 ನಾಮಪತ್ರ ಸಲ್ಲಿಕೆಯಾಗಿತ್ತು. 16 ಮಂದಿ ವಾಪಸ್ ಪಡೆದುಕೊಂಡಿದ್ದಾರೆ. ಒಂದು ಅವಿರೋಧ ಆಯ್ಕೆಯಾಗಿ, ಅಂತಿಮವಾಗಿ 26 ಮಂದಿ ಚುನಾವಣೆ ಎದುರಿಸಲಿದ್ದಾರೆ. ಎ ತರಗತಿಯಲ್ಲಿ ಕಾಂಗ್ರೆಸ್ ಬೆಂಬಲಿತರಾಗಿ ಎಂ.ಲಿಂಗರಾಜು, ಬಿ.ಪುಟ್ಟಬಸವಯ್ಯ, ಎಸ್.ಸತೀಶ್, ಕೆ.ಪಿನರೇಂದ್ರ, ವಿ.ಎನ್ ಮನು, ಕೆ.ಜೆ.ದೇವರಾಜು ಹಾಗೂ ಜೆಡಿಎಸ್‌ನಿಂದ ಕೆ.ಸಿ ಕೆಂಪರಾಜು, ಚಿಕ್ಕಮಾದೇಗೌಡ, ಪುಟ್ಟರಾಮು, ಎಂ.ಆರ್ ನಾಗೇಂದ್ರ, ಬಿ.ರವಿ, ಶಿವಲಿಂಗಯ್ಯ ಇದ್ದಾರೆ.
ಬಿ ತರಗತಿಯಲ್ಲಿ ಕಾಂಗ್ರೆಸ್ ಬೆಂಬಲಿತ ಕಿರುವಾವಲು ಹೋಬಳಿಯಿಂದ ಡಿ.ಪ್ರಕಾಶ್, ದಿಲೀಪ್‌ಕುಮಾರ್, ಡಿ.ಎನ್ ನಾಗರತ್ನ, ಹಲಗೂರಿನಿಂದ ಎಸ್.ಮಾಲಾಶ್ರೀ ಅವಿರೋಧವಾಗಿ ಆಯ್ಕೆ, ಬಿಜಿಪುರದಿಂದ ಶ್ರೀನಿವಾಸ್ ಕಸಬಾ ಹೋಬಳಿಯಿಂದ ಎಸ್ ಚೌಡೇಶ್ ಡಿ.ದಿವ್ಯ , ಪಟ್ಟಣದಿಂದ ಎಂ.ಮಾದಯ್ಯ ಉ.ಮಲ್ಲು ಸ್ಪರ್ಧಿಸಿದ್ದಾರೆ, ಜೆಡಿಎಸ್‌ನಿಂದ ರಾಮಣ್ಣ, ರತ್ನಮ್ಮ, ಪಾಪಣ್ಣ, ಎಚ್.ವಿ.ಶಿವರುದ್ರಪ್ಪ, ಎನ್.ಶೋಭ, ಸಿ.ಜೆ ಶ್ರೀಧರ್, ಎಂ.ವಿ ಮಾಯಣ್ಣ ಕಣದಲ್ಲಿ ಇದ್ದಾರೆ. ಚುನಾವಣಾಧಿಕಾರಿಯಾಗಿ ಲೋಕೇಶ್ ಕಾರ್ಯನಿರ್ವಹಿಸಲಿದ್ದಾರೆ.ಟಿಎಪಿಸಿಎಂಎಸ್ ಚುನಾವಣೆ 41 ನಾಮಪತ್ರ ಸಲ್ಲಿಕೆ
ಪಾಂಡವಪುರ:ಪಟ್ಟಣದ ಟಿಎಪಿಸಿಎಂಎಸ್ ಸಂಸ್ಥೆಯ 12 ನಿರ್ದೇಶಕ ಸ್ಥಾನಕ್ಕೆ ನಡೆಯುವ ಚುನಾವಣೆಗೆ 41 ನಾಮಪತ್ರಗಳು ಸಲ್ಲಿಕೆಯಾಗಿದೆ.
ನಾಮಪತ್ರ ಸಲ್ಲಿಸಲು ಕೊನೆ ದಿನವಾದ ಸೋಮವಾರ ಜೆಡಿಎಸ್, ಬಿಜೆಪಿ, ರೈತಸಂಘ-ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.ಸಂಸ್ಥೆ ಎ ತರಗತಿ 4 ಸ್ಥಾನಗಳಿಗೆ 8 ನಾಮಪತ್ರಗಳು ಸಲ್ಲಿಕೆಯಾಗಿವೆ. ಬಿ ತರಗತಿ 8 ಸ್ಥಾನಗಳಿಗೆ 33 ನಾಮಪತ್ರಗಳು ಸಲ್ಲಿಕೆಯಾಗಿವೆ. ಇದರಲ್ಲಿ ಮಹಿಳೆ 2 ಸ್ಥಾನಕ್ಕೆ 7, ಪರಿಶಿಷ್ಟ ಜಾತಿ 1 ಸ್ಥಾನಕ್ಕೆ 4, ಪರಿಶಿಷ್ಟ ಪಂಗಡ 1 ಸ್ಥಾನಕ್ಕೆ 2, ಹಿಂದುಳಿದ ಎ - 1 ಸ್ಥಾನಕ್ಕೆ 3, ಹಿಂದುಳಿದ ವರ್ಗ ಬಿ 1 ಸ್ಥಾನಕ್ಕೆ 5, ಸಾಮಾನ್ಯ 2 ಸ್ಥಾನಕ್ಕೆ 12 ನಾಮಪತ್ರಗಳು ಸಲ್ಲಿಕೆಯಾಗಿವೆ. ಸೆ.23 ರಂದು ನಾಮಪತ್ರ ಪರಿಶೀಲನೆ ಹಾಗೂ ಸೆ.24 ವಾಪಸ್ ಪಡೆಯಲು ಕೊನೆ ದಿನವಾಗಿದೆ ಎಂದು ಚುನಾವಣಾಧಿಕಾರಿಯೂ ಆದ ತಹಸೀಲ್ದಾರ್ ಬಸವರೆಡ್ಡಪ್ಪರೋಣದ ತಿಳಿಸಿದರು.