ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುವ ಜೊತೆಗೆ ತಮ್ಮ ಹೋರಾಟಕ್ಕೆ ಬೆಂಬಲ ನೀಡುವಂತೆ ಸಿರಿಗೆರೆಯ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗೆ ದಾವಣಗೆರೆ ಹೈಕೋರ್ಟ್ ಸಂಚಾರಿ ಪೀಠ ಹೋರಾಟ ಸಮಿತಿ, ಜಿಲ್ಲಾ ವಕೀಲರ ಸಂಘಗಳಿಂದ ಮನವಿ ಮಾಡಲಾಯಿತು.
- ಹೋರಾಟ ಸಮಿತಿ- ಸಂಘದ ಹಿರಿಯ, ಕಿರಿಯ ವಕೀಲರ ನಿಯೋಗಕ್ಕೆ ಡಾ.ಶಿವಮೂರ್ತಿ ಶ್ರೀ ಅಭಯ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುವ ಜೊತೆಗೆ ತಮ್ಮ ಹೋರಾಟಕ್ಕೆ ಬೆಂಬಲ ನೀಡುವಂತೆ ಸಿರಿಗೆರೆಯ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗೆ ದಾವಣಗೆರೆ ಹೈಕೋರ್ಟ್ ಸಂಚಾರಿ ಪೀಠ ಹೋರಾಟ ಸಮಿತಿ, ಜಿಲ್ಲಾ ವಕೀಲರ ಸಂಘಗಳಿಂದ ಮನವಿ ಮಾಡಲಾಯಿತು.ಚಿತ್ರದುರ್ಗ ಜಿಲ್ಲೆ ಸಿರಿಗೆರೆಯ ತರಳಬಾಳು ಬೃಹನ್ಮಠದಲ್ಲಿ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳನ್ನು ಹೋರಾಟ ಸಮಿತಿ ಅಧ್ಯಕ್ಷ ಬಿ.ಎಂ.ಹನುಮಂತಪ್ಪ, ಸಂಘದ ಅಧ್ಯಕ್ಷ ಟಿ.ಆರ್. ಗುರುಬಸವರಾಜ, ಮಾಜಿ ಅಧ್ಯಕ್ಷ ಎಲ್.ಎಚ್. ಅರುಣಕುಮಾರ, ದೂಡಾ ಮಾಜಿ ಅಧ್ಯಕ್ಷ ಎ.ವೈ.ಪ್ರಕಾಶ, ಹಿರಿಯ ವಕೀಲರಾದ ಎನ್.ಶಿವಲಿಂಗಪ್ಪ, ಪ್ರಕಾಶ ಪಾಟೀಲ, ಅನೀಸ್ ಪಾಷ ಇತರರ ನೇತೃತ್ವದಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸಲು ಸರ್ಕಾರದ ಮೇಲೆ ಒತ್ತಡ ಹೇರುವಂತೆ ವಕೀಲರು ಒಮ್ಮತದಿಂದ ಮನವಿ ಮಾಡಿದರು.
ಹಿರಿಯ ವಕೀಲರು ಮಾತನಾಡಿ, ಹೈಕೋರ್ಟ್ ಸಂಚಾರಿ ಪೀಠಕ್ಕೆ ಅಗತ್ಯವಾದ ಕಟ್ಟಡ ದಾವಣಗೆರೆಯಲ್ಲಿ ಸಿದ್ಧವಾಗಿದೆ. ರಾಷ್ಟ್ರೀಯ ಹೆದ್ದಾರಿ-48ಕ್ಕೆ ಹೊಂದಿಕೊಂಡಂತೆ ನ್ಯಾಯಪೀಠ ಸ್ಥಾಪನೆಗೆ ವಾತಾವರಣವಿದೆ. ದಾವಣಗೆರೆಯಲ್ಲೇ ಕರ್ನಾಟಕ ಉಚ್ಛ ನ್ಯಾಯಾಲಯದ ಕಾಯಂ ಪೀಠ ಅಥವಾ ಸೂಕ್ತ ನ್ಯಾಯಾಂಗ ಪೀಠವನ್ನು ಸ್ಥಾಪಿಸಲು ಸರಿಯಾದ ಸ್ಥಳವೆಂದು ಪರಿಗಣಿಸಿ, ಸರ್ಕಾರಕ್ಕೂ ಶಿಫಾರಸು ಮಾಡಿ, ಒತ್ತಡ ಹೇರಬೇಕು. ಇಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಯಿಂದ ಎಲ್ಲರಿಗೂ ಅನುಕೂಲವಾಗಲಿದೆ ಎಂದು ತಿಳಿಸಿದರು.ನೆರೆಯ ಚಿತ್ರದುರ್ಗ, ವಿಜಯ ನಗರ, ಬಳ್ಳಾರಿ, ಹಾವೇರಿ, ಶಿವಮೊಗ್ಗ ಜಿಲ್ಲೆಗಳ ಕಕ್ಷಿದಾರರು, ವಕೀಲರಿಗೂ ಅನುಕೂಲ ಆಗುತ್ತದೆ. ಉತ್ತರ ಕರ್ನಾಟಕ ಧಾರವಾಡ ಅಥವಾ ಬೆಂಗಳೂರಿಗೆ ಹೋಗಿ ಬರುವ ಸಮಯವೂ ಉಳಿಯುತ್ತದೆ. ಮಧ್ಯ ಕರ್ನಾಟಕದಲ್ಲಿ ಹೈಕೋರ್ಟ್ ಸಂಚಾರಿ ಪೀಠಕ್ಕೆ ಪೂರಕವಾಗಿ ಹೊಸ ಕಟ್ಟಡವೇ ನಿರ್ಮಾಣವಾಗಿದೆ. ಅದನ್ನೇ ಪೀಠಕ್ಕೆ ಬಳಸಿಕೊಳ್ಳಲು ಅವಕಾಶವಿದೆ. ಈ ವಿಚಾರವನ್ನು ಕೇಂದ್ರ, ರಾಜ್ಯ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ, ಹೈಕೋರ್ಟ್ ಸಂಚಾರಿ ಪೀಠ ಸ್ಥಾಪಿಸಲು ಒತ್ತಡ ಹೇರುವಂತೆ ಆಗ್ರಹಿಸಿದರು.
ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ಹಿರಿಯ, ಕಿರಿಯ ವಕೀಲರು, ಹೋರಾಟ ಸಮಿತಿ, ಸಂಘದ ನಿಯೋಗದಿಂದ ಮನವಿ ಸ್ವೀಕರಿಸಿದರು. ದಾವಣಗೆರೆಯಲ್ಲಿ ಸಂಚಾರಿ ಹೈಕೋರ್ಟ್ ಪೀಠ ಸ್ಥಾಪಿಸಬೇಕಾದುದು ಅತ್ಯವಶ್ಯಕವಾಗಿದೆ. ನಿಮ್ಮಗಳ ಹೋರಾಟಕ್ಕೆ ಶ್ರೀಪೀಠದ ಸಂಪೂರ್ಣ ಬೆಂಬಲ, ಆಶೀರ್ವಾದವಿದೆ. ನಿಮ್ಮ ಬೇಡಿಕೆ, ಒತ್ತಾಯದ ವಿಚಾರದ ಬಗ್ಗೆ ಸರ್ಕಾರದ ಪ್ರಮುಖರು, ಸಂಬಂಧಿಸಿದವರೊಂದಿಗೆ ಚರ್ಚಿಸುತ್ತೇವೆ. ಅಲ್ಲದೇ, ನಿಮ್ಮ ಹೋರಾಟಕ್ಕೆ, ಬೇಡಿಕೆಗೆ ತರಳಬಾಳು ಬೃಹನ್ಮಠದ ಸಂಪೂರ್ಣ ಬೆಂಬಲವಿದೆ ಎಂದು ಅಭಯ ನೀಡಿದರು.ಹಿರಿಯ ವಕೀಲರಾದ ಅನೀಸ್ ಪಾಷ, ಎನ್.ಎಂ.ಆಂಜನೇಯ ಗುರೂಜಿ, ಉಚ್ಚಂಗಿದುರ್ಗ ಬಸವರಾಜ, ಸಂಘದ ಕಾರ್ಯದರ್ಶಿ ಎಸ್.ಮಂಜುನಾಥ, ಸಹ ಕಾರ್ಯದರ್ಶಿ ರೇವಣಸಿದ್ದಪ್ಪ, ಹೋರಾಟ ಸಮಿತಿ ಕಾರ್ಯದರ್ಶಿ ಎಸ್.ಬಸವರಾಜ, ವಿ.ಗೋಪಾಲ, ಎಲ್.ಶ್ಯಾಮ್, ಚಿತ್ರಲಿಂಗಪ್ಪ, ಗುರುಸಿದ್ದಪ್ಪ, ಸುಷ್ಮಾ ಪಾಟೀಲ, ಸದ್ಧರ್ಮ ಪೀಠದ ವಕೀಲರು ಇದ್ದರು.
- - --23ಕೆಡಿವಿಜಿ3:
ದಾವಣಗೆರೆಯಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪಿಸುವ ಹೋರಾಟಕ್ಕೆ ಬೆಂಬಲ ನೀಡುವಂತೆ ಸಿರಿಗೆರೆಯ ತರಳಬಾಳು ಬೃಹನ್ಮಠದಲ್ಲಿ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಕೋರುತ್ತಿರುವ ಹೈಕೋರ್ಟ್ ಪೀಠ ಹೋರಾಟ ಸಮಿತಿ, ವಕೀಲರ ಸಂಘದ ಪದಾಧಿಕಾರಿಗಳು, ಹಿರಿ-ಕಿರಿಯ ವಕೀಲರು.