ನಗರದ ಹುಡ್ಕೋ ಕಾಲೋನಿ ವಿಐಎಸ್‌ಎಲ್ ಹೆಲಿಪ್ಯಾಡ್ ಆವರಣದಲ್ಲಿ ಆಯೋಜಿಸಲಾಗಿರುವ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ. ತರಳಬಾಳು ಹುಣ್ಣಿಮೆ ಮಹೋತ್ಸವದ ೨ನೇ ದಿನ ಭಾನುವಾರ ಸಂಜೆ ಕಾರ್ಯಕ್ರಮದಲ್ಲಿ ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ವಚನಾನಂದ ಸ್ವಾಮೀಜಿ ಪಾಲ್ಗೊಂಡು ಆಶೀರ್ವಚನ ನೀಡಿದರು.
ಕನ್ನಡಪ್ರಭ ವಾರ್ತೆ ಭದ್ರಾವತಿ
ನಗರದ ಹುಡ್ಕೋ ಕಾಲೋನಿ ವಿಐಎಸ್‌ಎಲ್ ಹೆಲಿಪ್ಯಾಡ್ ಆವರಣದಲ್ಲಿ ಆಯೋಜಿಸಲಾಗಿರುವ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ. ತರಳಬಾಳು ಹುಣ್ಣಿಮೆ ಮಹೋತ್ಸವದ ೨ನೇ ದಿನ ಭಾನುವಾರ ಸಂಜೆ ಕಾರ್ಯಕ್ರಮದಲ್ಲಿ ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ವಚನಾನಂದ ಸ್ವಾಮೀಜಿ ಪಾಲ್ಗೊಂಡು ಆಶೀರ್ವಚನ ನೀಡಿದರು.ಮಹೋತ್ಸವಕ್ಕೆ ಆಗಮಿಸಿದ ಶ್ರೀಗಳನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ನಂತರ ನಡೆದ ಆರೋಗ್ಯ ಮತ್ತು ಸಮಾಜ ವಿಷಯ ಕುರಿತು ಮಾತನಾಡಿದ ವಿಧಾನ ಪರಿಷತ್ ಸದಸ್ಯ, ಮಕ್ಕಳ ತಜ್ಞ, ಡಾ.ಧನಂಜಯ ಸರ್ಜಿ, ಭದ್ರಾವತಿಯ ಪುಣ್ಯಭೂಮಿಯಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವವು ಕೇವಲ ಧಾರ್ಮಿಕ ಆಚರಣೆಯಲ್ಲ, ಅದು ನಮ್ಮ ಜೀವನದ ಮೌಲ್ಯಗಳನ್ನು ನೆನಪಿಸುವ ಒಂದು ಮಹತ್ವದ ಸಾಮಾಜಿಕ ಸಂದರ್ಭವೂ ಹೌದು. ತರಳಬಾಳು ಶ್ರೀಗಳು ಕರ್ನಾಟಕದ ಆಧುನಿಕ ಭಗೀರಥರಾಗಿದ್ದಾರೆ ಎಂದರು.ಆರೋಗ್ಯವಂತ ವ್ಯಕ್ತಿಯಿಂದಲೇ ಆರೋಗ್ಯವಂತ ಸಮಾಜ, ಸುಸಂಸ್ಕೃತ ರಾಷ್ಟ್ರ ಸಾಧ್ಯ, ಮಾನವ ಜೀವನದಲ್ಲಿ ಆರೋಗ್ಯವೆಂಬುದು ಕೇವಲ ದೇಹದ ಸೌಖ್ಯವಲ್ಲ. ಅದು ಮನಸ್ಸಿನ ಸಮತೋಲನ, ಸಮಾಜದ ಒಳಿತಿನ ಚಿಂತನೆ ಮತ್ತು ಸಂಸ್ಕಾರದ ಪ್ರತಿಬಿಂಬವಾಗಿದೆ. ಆರೋಗ್ಯವನ್ನು ವ್ಯಕ್ತಿಗತ ಸಮಸ್ಯೆಯಾಗಿ ಮಾತ್ರ ನೋಡದೆ ಸಮಾಜದ ಒಟ್ಟಾರೆ ಹೊಣೆಗಾರಿಕೆಯಾಗಿ ನೋಡಬೇಕಿದೆ ಎಂದರು.
ಜೀವನಶೈಲಿ, ರೋಗಗಳು, ಒತ್ತಡದ ಬದುಕು, ಆಹಾರ ಪದ್ಧತಿ ಮತ್ತು ಮಾನಸಿಕ ಆರೋಗ್ಯ ಈ ಎಲ್ಲವು ಸಮಾಜದ ಆರೋಗ್ಯದೊಂದಿಗೆ ನೇರವಾಗಿ ಸಂಬಂಧ ಹೊಂದಿವೆ ಎಂದರು.ಆಯುರ್ವೇದ ವೈದ್ಯ ಡಾ.ಗಿರಿಧರ್ ಕಜೆ, ಬೆಂಗಳೂರಿನ ಆಸ್ಟರ್ ಆಸ್ಪತ್ರೆ ಮುಖ್ಯಸ್ಥ ಮತ್ತು ಲೀಡ್ ಲನ್ಸಲ್ಟೆಂಟ್ ಡಾ.ಸಿ.ಎನ್.ಪಾಟೀಲ್ ಮಾತನಾಡಿದರು.
ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ದಿವ್ಯಸಾನ್ನಿಧ್ಯ ವಹಿಸಿದ್ದರು. ದಾವಣಗೆರೆ ಸಂಸದೆ ಡಾ.ಪ್ರಭ್ರಾಮಲ್ಲಿಕಾರ್ಜುನ್, ಇಂಗ್ಲೆಂಡ್ ವೈದ್ಯರಾದ ಡಾ.ಎಸ್.ಶಿವಪ್ರಸಾದ್, ಡಾ.ಎಚ್.ಜೆ.ವಿಜಯ್‌ಕುಮಾರ್, ಕೋಗಳಿ ಕೋಟ್ರೇಶ್, ಎಚ್.ಆರ್ ಬಸವರಾಜಪ್ಪ, ಬಿ.ಕೆ ಜಗನ್ನಾಥ ಇದ್ದರು.ಸಿರಿಗೆರೆಯ ಅಕ್ಕನ ಬಳಗದಿಂದ ವಚನಗೀತೆ, ತೋಟಪ್ಪ ಉತ್ತಂಗಿ ಅವರಿಂದ ಸಂಗೀತ ಕಾರ್ಯಕ್ರಮ, ತರಳಬಾಳು ಸ್ಪೋರ್ಟ್ಸ್ ಅಕಾಡೆಮಿಯಿಂದ ಯೋಗಾಸನ, ದಾವಣಗೆರೆ ಬಾಪೂಜಿ ದಂತ ವೈದ್ಯಕೀಯ ಕಾಲೇಜಿನವರಿಂದ ಕಿರು ನಾಟಕ, ನಲ್ಲೂರು ತರಳಬಾಳು ಶಾಲೆಯಿಂದ ವಚನ ನೃತ್ಯ, ಶ್ರೀಮತಿ ಕಲ್ಲಮ್ಮ ಪ್ರೌಢಶಾಲೆಯಿಂದ ಸೋಲಿಗರ ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಕಬಡ್ಡಿ ಪಂದ್ಯಾವಳಿ, ಭಜನಾ ಸ್ಪರ್ಧೆಗೆ ಚಾಲನೆಭದ್ರಾವತಿ: ನಗರದ ಹುಡ್ಕೋ ಕಾಲೋನಿ ವಿಐಎಸ್‌ಎಲ್ ಹೆಲಿಪ್ಯಾಡ್ ಆವರಣದಲ್ಲಿ ಆಯೋಜಿಸಲಾಗಿರುವ ಸಿರಿಗೆರೆಯ ತರಳಬಾಳು ಜಗದ್ಗುರು ಬೃಹನ್ಮಠ ತರಳಬಾಳು ಹುಣ್ಣಿಮೆ ಮಹೋತ್ಸವದ ೨ನೇ ದಿನ ಭಾನುವಾರ ಕಬಡ್ಡಿ ಪಂದ್ಯಾವಳಿ ಹಾಗೂ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸ್ಪರ್ಧೆ ಆಯೋಜಿಸಲಾಗಿತ್ತು.
ನಗರದ ಅಂತಾರಾಷ್ಟ್ರೀಯ ಹಿರಿಯ ಕಬಡ್ಡಿ ಆಟಗಾರ ಕೃಷ್ಣೇಗೌಡ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿದರು. ರಾಜ್ಯದ ವಿವಿಧೆಡೆಗಳಿಂದ ಸುಮಾರು ೧೦ ಕಬಡ್ಡಿ ತಂಡಗಳು ಭಾಗವಹಿಸಿದ್ದವು.ಭಜನೆ:
ಭಜನಾ ಸ್ಪರ್ಧೆಗಳಿಗೆ ಹಾವೇರಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಟಿ.ಎಂ.ಭಾಸ್ಕರ್ ಚಾಲನೆ ನೀಡಿದರು. ರ್ಜಿ ಮಾತನಾಡಿದರು.