ತಾರಾನಾಥ ಆಯುರ್ವೇದ ಆಸ್ಪತ್ರೆ ಎಕ್ಸ್‌-ರೇ ಲ್ಯಾಬ್‌ ಕಾರ್ಯ ಮತ್ತೆ ಶುರು!

| Published : Jul 23 2025, 01:45 AM IST

ತಾರಾನಾಥ ಆಯುರ್ವೇದ ಆಸ್ಪತ್ರೆ ಎಕ್ಸ್‌-ರೇ ಲ್ಯಾಬ್‌ ಕಾರ್ಯ ಮತ್ತೆ ಶುರು!
Share this Article
  • FB
  • TW
  • Linkdin
  • Email

ಸಾರಾಂಶ

ಟೆಕ್ನಿಷಿಯನ್‌ ಇಲ್ಲ ಎಂಬ ಕಾರಣಕ್ಕಾಗಿ ಬೀಗ ಹಾಕಲಾಗಿದ್ದ ಇಲ್ಲಿನ ತಾರಾನಾಥ ಸರ್ಕಾರಿ ಆಯುರ್ವೇದ ಕಾಲೇಜು ಆಸ್ಪತ್ರೆಯಲ್ಲಿನ ಎಕ್ಸ್‌-ರೇ ಲ್ಯಾಬ್‌ಗೆ ಜಿಲ್ಲಾ ಆರೋಗ್ಯ ಇಲಾಖೆಯಿಂದ ಸೋಮವಾರ ಟೆಕ್ನಿಷಿಯನ್‌ ಒಬ್ಬರನ್ನು ನಿಯೋಜಿಸಲಾಗಿದ್ದು ಎಂದಿನಂತೆ ಎಕ್ಸ್‌-ರೇ ಲ್ಯಾಬ್ ನ ಕಾರ್ಯನಿರ್ವಹಣೆ ಶುರುಗೊಂಡಿದೆ. ಇದರಿಂದ ಆಸ್ಪತ್ರೆಗೆ ಬರುವ ಬಡ ಹಾಗೂ ಮಧ್ಯಮ ವರ್ಗದ ರೋಗಿಗಳು ನಿಟ್ಟಿಸಿರು ಬಿಡುವಂತಾಗಿದೆ.

ಟೆಕ್ನಿಷಿಯನ್ ಇಲ್ಲ ಎಂಬ ಕಾರಣಕ್ಕೆ ಲ್ಯಾಬ್ ಕೋಣೆಗೆ ಬೀಗ ಹಾಕಲಾಗಿತ್ತು.

ಕನ್ನಡಪ್ರಭ ಸರಣಿ ವರದಿ ಬಳಿಕ ಎಚ್ಚೆತ್ತ ಆಯುಷ್ ಇಲಾಖೆ

ಎಕ್ಸ್‌-ರೇ ಗಾಗಿ ಬಡ ರೋಗಿಗಳ ಅಲೆದಾಟಕ್ಕೆ ಕೊನೆಗೂ ಮುಕ್ತಿ

ಮಂಜುನಾಥ ಕೆ.ಎಂ.

ಕನ್ನಡಪ್ರಭ ವಾರ್ತೆ ಬಳ್ಳಾರಿ

ಟೆಕ್ನಿಷಿಯನ್‌ ಇಲ್ಲ ಎಂಬ ಕಾರಣಕ್ಕಾಗಿ ಬೀಗ ಹಾಕಲಾಗಿದ್ದ ಇಲ್ಲಿನ ತಾರಾನಾಥ ಸರ್ಕಾರಿ ಆಯುರ್ವೇದ ಕಾಲೇಜು ಆಸ್ಪತ್ರೆಯಲ್ಲಿನ ಎಕ್ಸ್‌-ರೇ ಲ್ಯಾಬ್‌ಗೆ ಜಿಲ್ಲಾ ಆರೋಗ್ಯ ಇಲಾಖೆಯಿಂದ ಸೋಮವಾರ ಟೆಕ್ನಿಷಿಯನ್‌ ಒಬ್ಬರನ್ನು ನಿಯೋಜಿಸಲಾಗಿದ್ದು ಎಂದಿನಂತೆ ಎಕ್ಸ್‌-ರೇ ಲ್ಯಾಬ್ ನ ಕಾರ್ಯನಿರ್ವಹಣೆ ಶುರುಗೊಂಡಿದೆ. ಇದರಿಂದ ಆಸ್ಪತ್ರೆಗೆ ಬರುವ ಬಡ ಹಾಗೂ ಮಧ್ಯಮ ವರ್ಗದ ರೋಗಿಗಳು ನಿಟ್ಟಿಸಿರು ಬಿಡುವಂತಾಗಿದೆ.

ತಾರಾನಾಥ ಸರ್ಕಾರಿ ಆಯುರ್ವೇದ ಕಾಲೇಜು ಹಾಗೂ ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಕುರಿತು ಕನ್ನಡಪ್ರಭದ ಸರಣಿ ವರದಿ ಬಳಿಕ ಎಚ್ಚೆತ್ತುಕೊಂಡ ಇಲಾಖೆ ಆಯುಕ್ತರು, ಕೂಡಲೇ ಎಕ್ಸ್‌-ರೇ ಲ್ಯಾಬ್ ಆರಂಭಿಸುವಂತೆ ಕಾಲೇಜಿನ ಪ್ರಾಂಶುಪಾಲರುಗೆ ಸೂಚನೆ ನೀಡಿದ ಬೆನ್ನಲ್ಲೇ ಎಕ್ಸ್‌-ರೇ ಲ್ಯಾಬ್‌ಗೆ ಸಿಬ್ಬಂದಿ ನೇಮಿಸಲಾಗಿದೆ.

ಇದು ತಾತ್ಕಾಲಿಕ. ಬೋಧಕೇತರ ಸಿಬ್ಬಂದಿ ನೇಮಕ ಭರ್ತಿಗೆ ಇಲಾಖೆ ಕ್ರಮ ಕೈಗೊಂಡಿದ್ದು ಶೀಘ್ರವೇ ಲ್ಯಾಬ್‌ಗೆ ಪೂರ್ಣ ಪ್ರಮಾಣದ ಸಿಬ್ಬಂದಿ ನೇಮಕವಾಗುವ ಸಾಧ್ಯತೆಯಿದೆ.

ಎಕ್ಸ್‌ರೇ ಬಂದ್ ಆಗಿದ್ದೇಕೆ?:

ನಾನಾ ಆರೋಗ್ಯ ಸಮಸ್ಯೆಯಿಂದ ತಾರಾನಾಥ ಆಸ್ಪತ್ರೆಗೆ ಬರುವ ರೋಗಿಗಳ ಕೆಲವು ಸೂಕ್ಷ್ಮ ರೋಗಾಣುಗಳನ್ನು ಪತ್ತೆ ಹಚ್ಚುವ ಮೂಲಕ ರೋಗವನ್ನು ಖಚಿತವಾಗಿ ಪತ್ತೆ ಹಚ್ಚುವ ಉದ್ದೇಶದಿಂದ ಜಿಲ್ಲಾ ಖನಿಜ ನಿಧಿಯಿಂದ (ಡಿಎಂಎಫ್‌) ₹40 ಲಕ್ಷ ಮೌಲ್ಯದ ಅತ್ಯಾಧುನಿಕ ತಂತ್ರಜ್ಞಾನದ ಎಕ್ಸ್‌-ರೇ ಲ್ಯಾಬ್ ಅಳವಡಿಸಲಾಗಿತ್ತು. ಲ್ಯಾಬ್ ನಿರ್ವಹಣೆ ಮಾಡುತ್ತಿದ್ದ ಕ್ಷ-ಕಿರಣ ತಂತ್ರಜ್ಞ (ಎಕ್ಸ್‌-ರೇ ಟೆಕ್ನಿಷಿಯನ್‌) ಸೇವಾವಧಿ ಮುಗಿದ ಹಿನ್ನೆಲೆ ಮಾತೃ ಸಂಸ್ಥೆಗೆ ಮರಳಿದ್ದರಿಂದ ಕಳೆದ 2 ತಿಂಗಳಿನಿಂದ ಎಕ್ಸ್‌-ರೇ ಲ್ಯಾಬ್ ಕೋಣೆಗೆ ಬೀಗ ಹಾಕಲಾಗಿತ್ತು.

ಲ್ಯಾಬ್ ಪರಿಶೀಲಿನೆ:

ಆಸ್ಪತ್ರೆಗೆ ಭೇಟಿ ನೀಡಿದ ಆರೋಗ್ಯ ಇಲಾಖೆಯ ಬಯೋ ಮೆಡಿಕಲ್ ಇಂಜಿನಿಯರ್‌ ರೊಬ್ಬರು ಎಕ್ಸ್‌-ರೇ ಯಂತ್ರದ ಸ್ಥಿತಿಗತಿ, ಈವರೆಗೆ ಎಷ್ಟು ಎಕ್ಸ್‌-ರೇ ತೆಗೆಯಲಾಗಿದೆ ಎಂಬಿತ್ಯಾದಿ ಮಾಹಿತಿ ಸಂಗ್ರಹಿಸಿದರಲ್ಲದೆ, ಎಕ್ಸ್‌-ರೇ ಯಂತ್ರ ಸುಸ್ಥಿತಿಯಲ್ಲಿದ್ದು ಉಪಯೋಗಿಸಬಹುದು ಎಂದು ಎಂಟು ಪುಟಗಳ ವರದಿ ನೀಡಿದ್ದರು. ಏತನ್ಮಧ್ಯೆ ಕಾಲೇಜಿನ ಪ್ರಾಂಶುಪಾಲರು ಆಯುಷ್ ಇಲಾಖೆ ಆಯುಕ್ತರಿಗೆ ಪತ್ರ ಬರೆದು ಟೆಕ್ನಿಷಿಯನ್ ಹುದ್ದೆ ಭರ್ತಿಗೆ ಮನವಿ ಮಾಡಿದ್ದರು. ಇದೀಗ ಆರೋಗ್ಯ ಇಲಾಖೆಯಿಂದ ಲ್ಯಾಬ್ ಟೆಕ್ನಿಷಿಯನ್ ನಿಯೋಜನೆಗೊಳಿಸಲಾಗಿದ್ದು, ಸೋಮವಾರದಿಂದ ಲ್ಯಾಬ್ ಕಾರ್ಯನಿರ್ವಹಣೆ ಆರಂಭಗೊಂಡಿದೆ.