ಸಾರಾಂಶ
ಈ ಎಲ್ಲಾ ಗರ್ಭಿಣಿಯರಿಗೂ ಸುಖ ಪ್ರಸವವಾಗಿ, ಎಂಟು ಜನ ಬಾಣಂತಿಯರು ಮತ್ತು 8 ಮಕ್ಕಳು ಆರೋಗ್ಯವಾಗಿದ್ದಾರೆ, ಪ್ರಸೂತಿ ತಜ್ಞ ವೈದ್ಯರ ಅನುಪಸ್ಥಿತಿಯಲ್ಲಿ ತರಬೇತಿ ಪಡೆದ ಮಹಿಳಾ ನರ್ಸ್ ಗಳು ಮತ್ತು ಡ್ಯೂಟಿ ವೈದ್ಯರ ಕಾರ್ಯದಿಂದ ತಾಯಂದಿರು ಮತ್ತು ಪಕ್ಕದಲ್ಲಿ ಮಲಗಿದ ಮಗುವಿನ ಮುಖದಲ್ಲಿ ಮಂದಹಾಸ ಮೂಡಿಸುವಲ್ಲಿ ವೈದ್ಯರು ಮತ್ತು ವೈದ್ಯ ಸಿಬ್ಬಂದಿ ಯಶಸ್ವಿಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕನ್ನಡಪ್ರಭ ವಾರ್ತೆ, ತರೀಕೆರೆ
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಂದೇ ದಿನ ಎಂಟು ಜನ ಗರ್ಭಿಣಿಯರು ಮಕ್ಕಳಿಗೆ ಜನ್ಮನೀಡಿದ್ದಾರೆ. ಇದರಲ್ಲೇನು ವಿಶೇಷ ಎನ್ನಬೇಡಿ ಕಾರಣ ಈ ಆಸ್ಪತ್ರೆಯಲ್ಲಿ ಪ್ರಸೂತಿ ತಜ್ಞ ವೈದ್ಯರು ರಜೆಯಲ್ಲಿದ್ದಾಗ ತರಬೇತಿ ಪಡೆದ ಮಹಿಳಾ ನರ್ಸ್ ಗಳು ಮತ್ತು ಡ್ಯೂಟಿ ವೈದ್ಯರು ಕಾರ್ಯ ಯಶಸ್ವಿಯಾಗಿ ನಿಭಾಯಿಸಿದ್ದಾರೆ.ಈ ಎಲ್ಲಾ ಗರ್ಭಿಣಿಯರಿಗೂ ಸುಖ ಪ್ರಸವವಾಗಿ, ಎಂಟು ಜನ ಬಾಣಂತಿಯರು ಮತ್ತು 8 ಮಕ್ಕಳು ಆರೋಗ್ಯವಾಗಿದ್ದಾರೆ, ಪ್ರಸೂತಿ ತಜ್ಞ ವೈದ್ಯರ ಅನುಪಸ್ಥಿತಿಯಲ್ಲಿ ತರಬೇತಿ ಪಡೆದ ಮಹಿಳಾ ನರ್ಸ್ ಗಳು ಮತ್ತು ಡ್ಯೂಟಿ ವೈದ್ಯರ ಕಾರ್ಯದಿಂದ ತಾಯಂದಿರು ಮತ್ತು ಪಕ್ಕದಲ್ಲಿ ಮಲಗಿದ ಮಗುವಿನ ಮುಖದಲ್ಲಿ ಮಂದಹಾಸ ಮೂಡಿಸುವಲ್ಲಿ ವೈದ್ಯರು ಮತ್ತು ವೈದ್ಯ ಸಿಬ್ಬಂದಿ ಯಶಸ್ವಿಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಆಸ್ಪತ್ರೆಯಲ್ಲಿ ತರಬೇತಿ ಪಡೆದ ಮಹಿಳಾ ಶುಶ್ರೂ,ಷಕರು ಮತ್ತು ವೈದ್ಯರು ಒಂದೇ ದಿನ ಎಂಟು ಜನ ಗರ್ಭಿಣಿಯರಿಗೆ ಸುಖ ಪ್ರಸವಕ್ಕೆ ಅವಕಾಶ ಮಾಡಿಕೊಟ್ಟಿರುವುದು ಒಂದು ದಾಖಲಾರ್ಹವಾಗಿದೆ ಎಂದು ಆಸ್ಪತ್ರೆ ಆಡಳಿತಾಧಿಕಾರಿ ಡಾ.ಟಿ.ಎಂ. ದೇವರಾಜ್ ಸಂತೋಷ ವ್ಯಕ್ತಪಡಿಸಿ ಸಹಕರಿಸಿದ ಮಹಿಳಾ ಶುಶ್ರೂಷಕರಿಗೆ ಮತ್ತು ಡ್ಯೂಟಿ ವೈದ್ಯರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.7ಕೆಟಿಆರ್.ಕೆ.1ಃತರೀಕೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಎಂಟು ಜನ ಗರ್ಭಿಣಿಯರಿಗೆ ಸುಖ ಪ್ರಸವವಾಗಿದ್ದು ಬಾಣಂತಿ ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆ.