ತರೀಕೆರೆ ಎಂ.ಜಿ.ರಸ್ತೆ ಕಾಮಗಾರಿ ಪರಿಶೀಲನೆ

| Published : Jan 23 2025, 12:47 AM IST

ಸಾರಾಂಶ

Tarikere M. G. Road work inspection

ಕನ್ನಡಪ್ರಭ ವಾರ್ತೆ ತರೀಕೆರೆ

ಗುಣಮಟ್ಟದ ಕಾಮಗಾರಿ ನಿರ್ವಹಿಸಬೇಕೆಂದು ಪುರಸಭೆ ಅಧ್ಯಕ್ಷ ವಸಂತಕುಮಾರ್ ಹೇಳಿದ್ದಾರೆ.

ಅವರು, ಪುರಸಭಾ ಕಾರ್ಯಾಲಯ ವತಿಯಿಂದ ಪುರಸಭೆ ಸದಸ್ಯರು ಮತ್ತು ಅಧಿಕಾರಿಗಳೊಂದಿಗೆ ಎಸ್ಎಫ್‌ಸಿ ಮುಕ್ತನಿಧಿ ಯೋಜನೆಯಡಿ 2023-24 ಮತ್ತು 2024-25ನೇ ಸಾಲಿನಲ್ಲಿ ಮಂಜೂರಾಗಿರುವ ಅನುದಾನದಲ್ಲಿ ಅಂದಾಜು 28.40 ಲಕ್ಷ ಮೊತ್ತದಲ್ಲಿ ಪಟ್ಟಣದ ಎಂ.ಜಿ.ರಸ್ತೆಯಲ್ಲಿ ನೆಡೆಯುತ್ತಿರುವ ಡಾಂಬರೀಕರಣ ಕಾಮಗಾರಿಯನ್ನು ಪರಿಶೀಲಿಸಿ ಮಾತನಾಡುತ್ತಿದ್ದರು.

ಎಂ.ಜಿ.ರಸ್ತೆ ತುಂಬಾ ಹಾಳಾಗಿದ್ದು, ಬಹಳ ದಿನಗಳ ನಂತರ ಎಂ.ಜಿ.ರಸ್ತೆ ಡಾಂಬರೀಕರಣ ಕಾರ್ಯ ನೆಡಯುತ್ತಿದೆ, ಕಾಮಗಾರಿ ಕಾರ್ಯ ಗುಣಮಟ್ಟದಿಂದ ಕೂಡಿರಬೇಕು ಎಂದು ಅವರು ಹೇಳಿದರು.

ಪುರಸಭಾ ಸದಸ್ಯ ಟಿ.ದಾದಾಪೀರ್ ಮಾತನಾಡಿ, ವಾರ್ಡ್ ನಂ.17 ಮತ್ತು 20ರಲ್ಲಿ ರಸ್ತೆಯ ಎರಡೂ ಭಾಗದಲ್ಲಿ ಪಾದಚಾರಿಗಳು ಸಂಚರಿಸಲು ಅನುಕೂಲವಾಗುವಂತೆ ಇಂಟರ್ ಲಾಕ್ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

ಪುರಸಭಾ ಸದಸ್ಯ ಟಿ.ಎಂ.ಬೋಜರಾಜ್ ಮಾತನಾಡಿ, ಎಂ.ಜಿ.ರಸ್ತೆ ಪಟ್ಟಣದ ಎರಡನೆ ಪ್ರಮುಖ ರಸ್ತೆಯಾಗಿದ್ದು ಹೆಚ್ಚು ಜನಸಂಚಾರ ಮತ್ತು ವಾಹನಸಂಚಾರದಿಂದ ಕೂಡಿದ್ದು, ಈ ರಸ್ತೆಯ ಕಾಮಗಾರಿ ಕಾರ್ಯ ಗುಣಮಟ್ಟದಿಂದ ಕೂಡಿರಬೇಕು, ಕಾಮಗಾರಿ ಕಳಪೆಯಾದಲ್ಲಿ ಕೂಡಲೇ ಪುರಸಭೆ ಗಮನಕ್ಕೆ ತರಬೇಕೆಂದು ಅವರು ಮನವಿ ಮಾಡಿದರು.

ಪುರಸಭಾ ಸದಸ್ಯರಾದ ಟಿ.ಜಿ.ಅಶೋಕ್ ಕುಮಾರ್, ಟಿ.ಜಿ.ಲೋಕೇಶ್, ಪುರಸಭೆ ಮುಖ್ಯಾಧಿಕಾರಿ ಹೆಚ್.ಪ್ರಶಾಂತ್ ಮತ್ತಿತರರು ಭಾಗವಹಿಸಿದ್ದರು.

----

ಫೋಟೋ: ತರೀಕೆರೆಯಲ್ಲಿ ಎಂ.ಜಿ.ರಸ್ತೆ ಡಾಂಬರೀಕರಣ ಕಾಮಗಾರಿಯನ್ನು ಪುರಸಭೆ ಅಧ್ಯಕ್ಷರು ವಸಂತಕುಮಾರ್ ಪರಿಶೀಲಿಸಿದರು. ಪುರಸಭೆ ಸದಸ್ಯರಾದ ಟಿ.ದಾದಾಪೀರ್, ಟಿ.ಎಂ.ಬೋಜರಾಜ್, ಟಿ.ಜಿ.ಲೋಕೇಶ್, ಟಿ.ಜಿ.ಅಶೋಕ ಕುಮಾರ್, ಮುಖ್ಯಾದಿಕಾರಿ ಹೆಚ್.ಪ್ರಶಾಂತ್ ಇದ್ದಾರೆ.

22ಕೆಟಿಆರ್.ಕೆ.1