ತರೀಕೆರೆ: 48 ಗಂಟೆಗಳಲ್ಲಿ ಇಬ್ಬರು ಮನೆಗಳ್ಳರ ಬಂಧನ

| Published : Nov 22 2025, 01:30 AM IST

ತರೀಕೆರೆ: 48 ಗಂಟೆಗಳಲ್ಲಿ ಇಬ್ಬರು ಮನೆಗಳ್ಳರ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ: ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು 48 ಘಂಟೆಗಳಲ್ಲಿ ಇಬ್ಬರು ಮನೆಗಳ್ಳತನ ಆರೋಪಿಗಳ ಬಂಧಿಸಿ ಅವರಿಂದ ₹ 9,63,000 ಮೌಲ್ಯದ ಚಿನ್ನಾಭರಣ ಹಾಗೂ ₹4,400 ನಗದು ವಶಪಡಿಸಿಕೊಂಡಿರುವ ಘಟನೆ ತರೀಕೆರೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ತರೀಕೆರೆ: ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು 48 ಘಂಟೆಗಳಲ್ಲಿ ಇಬ್ಬರು ಮನೆಗಳ್ಳತನ ಆರೋಪಿಗಳ ಬಂಧಿಸಿ ಅವರಿಂದ ₹ 9,63,000 ಮೌಲ್ಯದ ಚಿನ್ನಾಭರಣ ಹಾಗೂ ₹4,400 ನಗದು ಹಣ ವಶಪಡಿಸಿಕೊಂಡಿರುವ ಘಟನೆ ತರೀಕೆರೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ತರೀಕೆರೆಯ ಯರೇಹಳ್ಳಿಯ ನಿವಾಸಿಗಳಾದ ರಾಮಕೃಷ್ಣ (32) , ಮೇಘರಾಜ್(25 ) ಬಂಧಿತ ಆರೋಪಿಗಳು.

ನವೆಂಬರ್‌ 19 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 3.30ರ ಸಮಯದಲ್ಲಿ ಯರೇಹಳ್ಳಿ ತಾಂಡ್ಯದ ಆಶಾ. ಎಚ್ ಅವರ ಮನೆಯ ಮೇಲ್ಬಾಗದ ಶೀಟ್ ತೆಗೆದು ಒಳ ನುಗ್ಗಿದ ಕಳ್ಳರು 96 ಗ್ರಾಂ ತೂಕದ ಚಿನ್ನಾಭರಣ ಹಾಗೂ 8000 ನಗದು ಕಳವು ಮಾಡಿದ್ದರು.

ಈ ಬಗ್ಗೆ ಆಶಾ ನೀಡಿದ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು 21 ರಂದು ಬಂಧಿಸಿ ಅವರಿಂದ ಕಳ್ಳತನ ಮಾಡಿದ್ದ ₹9,63,000 ಮೌಲ್ಯದ ಚಿನ್ನಾಭರಣ ಹಾಗೂ ₹ 4,400 ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಚಿಕ್ಕಮಗಳೂರು ಪೊಲೀಸ್ ಅಧೀಕ್ಷಕರು ತರೀಕೆರೆ ಪೊಲೀಸ್ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿ ವಿಶೇಷ ತಂಡ ರಚಿಸಿ ಕ್ರಮವಹಿಸಲಾಗಿತ್ತು. ಈ ವಿಶೇಷ ಕಾರ್ಯಾಚರಣೆ ಜಿಲ್ಲಾ ಎಸ್ಪಿ ವಿಕ್ರಮ್ ಅಮಟೆ,ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಸಿ.ಟಿ. ಜಯಕುಮಾರ್, ಪೊಲೀಸ್ ಉಪಾದೀಕ್ಷಕ ಪರಶುರಾಮಪ್ಪ ಅವರ ಮಾರ್ಗದರ್ಶನದಲ್ಲಿ ತರೀಕೆರೆ ಠಾಣೆ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ. ಪಿಎಸ್ಐ ಮಂಜುನಾಥ್ ಮನ್ನಂಗಿ, ದೇವೇಂದ್ರ ರಾಥೋಡ್ ಹಾಗೂ ಸಿಬ್ಬಂದಿ ರಾಮಪ್ಪ, ರುದ್ರೇಶ್, ರಿಯಾಜ್. ಧನಂಜಯಸ್ವಾಮಿ ಹಾಗೂ ಶ್ರೀನಿವಾಸ, ಜಿಲ್ಲಾ ಕಚೇರಿ ತಾಂತ್ರಿಕ ಸಿಬ್ಬಂದಿ ರಬ್ಬಾನಿ ಆರೋಪಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.