ಕೈಗಾರಿಗಳಿಗೆ ಟಾಟಾ ಕೊಡುಗೆ ಅಪಾರ

| Published : Oct 14 2024, 01:22 AM IST

ಸಾರಾಂಶ

ದೊಡ್ಡಬಳ್ಳಾಪುರ: ಭಾರತದಲ್ಲಿ ಕೈಗಾರಿಕೋದ್ಯಮ ಬೆಳೆವಣಿಗೆಗೆ ಟಾಟಾ ಅವರ ಕೊಡುಗೆ ಅಪಾರವಾಗಿದೆ ಎಂದು ಪ್ರಾಂಶುಪಾಲ ಡಾ.ವಿಜಯ್‌ ಕಾರ್ತಿಕ್‌ ಹೇಳಿದರು.

ದೊಡ್ಡಬಳ್ಳಾಪುರ: ಭಾರತದಲ್ಲಿ ಕೈಗಾರಿಕೋದ್ಯಮ ಬೆಳೆವಣಿಗೆಗೆ ಟಾಟಾ ಅವರ ಕೊಡುಗೆ ಅಪಾರವಾಗಿದೆ ಎಂದು ಪ್ರಾಂಶುಪಾಲ ಡಾ.ವಿಜಯ್‌ ಕಾರ್ತಿಕ್‌ ಹೇಳಿದರು.

ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ ಟಾಟಾ ನುಡಿನಮನ ಕಾರ್ಯಕ್ರಮದಲ್ಲಿ ರತನ್‌ ಟಾಟಾ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಆಟೋ ಮೊಬೈಲ್, ಬ್ಯಾಂಕಿಂಗ್, ಆಹಾರೋತ್ಪನ್ನ, ಸಾಗರೋತ್ತರ ವ್ಯವಹಾರ ಸೇರಿದಂತೆ ವಿವಿಧ ವಲಯಗಳಲ್ಲಿ ಭಾರತದ ಪ್ರತಿಷ್ಠೆಯನ್ನು ವಿಶ್ವ ಮಟ್ಟದಲ್ಲಿ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು. ದೇಶದ ಔದ್ಯೋಗಿಕ ವಲಯಕ್ಕೆ ಅವರು ಅನನ್ಯ ಸೇವೆ ಸಲ್ಲಿಸಿದ್ದಾರೆ. ಅವರ ಬದುಕು ಯುವ ಜನರಿಗೆ ಮಾದರಿಯಾಗಬೇಕು ಎಂದರು.

ಮಾನವ ಸಂಪನ್ಮೂಲ ನಿರ್ದೇಶಕ ಬಾಬುರೆಡ್ಡಿ, ಉಪಪ್ರಾಂಶುಪಾಲ ಡಾ.ಶಿವಪ್ರಸಾದ್, ಅಕಾಡೆಮಿಕ್ ನಿರ್ದೇಶಕ ಡಾ.ಶ್ರೀನಿವಾಸರೆಡ್ಡಿ, ವಿವಿಧ ವಿಭಾಗಗಳ ಮುಖ್ಯಸ್ಥರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಎಸ್‌ಡಿಯುಐಎಂನಲ್ಲಿ ನುಡಿನಮನ:

ಇಲ್ಲಿನ ದೇವರಾಜ ಅರಸು ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದಲ್ಲಿ ನಡೆದ ನುಡಿನಮನ ಕಾರ್ಯಕ್ರಮದಲ್ಲಿ ರತನ್‌ ಟಾಟಾ ಅವರ ಅನನ್ಯ ಸೇವೆ ಹಾಗೂ ಕೈಗಾರಿಕಾ ವಲಯದಲ್ಲಿ ಭಾರತದ ಪ್ರತಿಷ್ಠೆಯನ್ನು ಹೆಚ್ಚಿಸಿದ ಸಾಧನೆಯ ಹಾದಿಯನ್ನು ಸ್ಮರಿಸಲಾಯಿತು. ಕಾಲೇಜಿನ ಪ್ರಾಂಶುಪಾಲರು, ವಿವಿಧ ವಿಭಾಗಗಳ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರು ಉಪಸ್ಥಿತರಿದ್ದರು.

ಕರವೇಯಿಂದ ಶ್ರದ್ದಾಂಜಲಿ:

ಉದ್ಯಮಿ ರತನ್‌ ಟಾಟಾ ನಿಧನಕ್ಕೆ ಸಂತಾಪ ಸೂಚಿಸಿ ಇಲ್ಲಿನ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್‌ ಶೆಟ್ಟಿ ಬಣದ ನೇತೃತ್ವದಲ್ಲಿ ಶ್ರದ್ದಾಂಜಲಿ ಸಭೆ ನಡೆಯಿತು. ಡಿಕ್ರಾಸ್‌ನ ಡಾ.ರಾಜ್‌ಕುಮಾರ್ ವೃತ್ತದಲ್ಲಿ ನಡೆದ ಸಂತಾಪ ಸಭೆಯಲ್ಲಿ ತಾಲೂಕು ಅಧ್ಯಕ್ಷ ಹಮಾಮ್‌ ವೆಂಕಟೇಶ್, ಪ್ರದಾನ ಕಾರ್ಯದರ್ಶಿ ಎಲ್.ಎನ್.ವೇಣು, ಉಪಾಧ್ಯಕ್ಷ ಜೋಗಳ್ಳಿ ಅಮ್ಮು, ಕಾನೂನು ಸಲಹೆಗಾರ ಆನಂದ್‌ಕುಮಾರ್, ಕಾರ್ಯದರ್ಶಿ ಮುಕ್ಕೇನಹಳ್ಳಿ ರವಿ, ಮಂಜು, ನಗರ ಕಾರ್ಯದರ್ಶಿ ಸಿರಾಜ್ ಇತರರಿದ್ದರು.

ಫೋಟೋ-10ಕೆಡಿಬಿಪಿ6-

ದೊಡ್ಡಬಳ್ಳಾಪುರದ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಉದ್ಯಮಿ ರತನ್‌ ಟಾಟಾ ಅವರ ನಿಧನಕ್ಕೆ ಸಂತಾಪ ಸೂಚಿಸಿ ನುಡಿನಮನ ಸಲ್ಲಿಸಲಾಯಿತು.