ಮಕ್ಕಳಿಗೆ ಉನ್ನತ ಶಿಕ್ಷಣದ ಜತೆಗೆ ಸಂಸ್ಕಾರ ಕಲಿಸಿ

| Published : Oct 30 2025, 02:15 AM IST

ಸಾರಾಂಶ

ಸಹಸ್ರಾರ್ಜುನರ ಜಯಂತಿ ಮಾಡುವ ಮೂಲಕ ತತ್ವಾದರ್ಶ ಅಳವಡಿಸಿಕೊಂಡು ಒಗ್ಗಟ್ಟು ಪ್ರದರ್ಶನ ಮಾಡುವ ಮೂಲಕ ಸಾಮಾಜಿಕ ರಾಜಕೀಯವಾಗಿ ಬೆಳೆಯಬೇಕು

ಕುಷ್ಟಗಿ: ದುಡಿಮೆ ನಂಬಿ ಬದುಕು ಕಟ್ಟಿಕೊಳ್ಳುತ್ತಿರುವ ಸೋಮವಂಶ ಕ್ಷತ್ರೀಯ ಸಮಾಜ ಮಕ್ಕಳಿಗೆ ಉನ್ನತ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ ಕಲಿಸಬೇಕು ಎಂದು ಮಾಜಿ ಶಾಸಕ ಕೆ ಶರಣಪ್ಪ ವಕೀಲರು ಹೇಳಿದರು.

ಪಟ್ಟಣದ ಶಾಖಾಪುರ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಅಂಬಾಭವಾನಿ ದೇವಸ್ಥಾನದ ಆವರಣದಲ್ಲಿ ನಡೆದ ಸೋಮವಂಶ ಕ್ಷತ್ರಿಯ ಕುಲತಿಲಕ ಸಹಸ್ರಾರ್ಜುನ ಮಹಾರಾಜರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇಂದಿನ ದಿನಗಳಲ್ಲಿ ಶಿಕ್ಷಣ ಅತ್ಯವಶ್ಯಕವಾಗಿದ್ದು, ಸಮಾಜದ ಅಭಿವೃದ್ಧಿಗೆ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಲು ಮುಂದಾಗಬೇಕೆಂದ ಅವರು, ಸಹಸ್ರಾರ್ಜುನರ ಜಯಂತಿ ಮಾಡುವ ಮೂಲಕ ತತ್ವಾದರ್ಶ ಅಳವಡಿಸಿಕೊಂಡು ಒಗ್ಗಟ್ಟು ಪ್ರದರ್ಶನ ಮಾಡುವ ಮೂಲಕ ಸಾಮಾಜಿಕ ರಾಜಕೀಯವಾಗಿ ಬೆಳೆಯಬೇಕು ಎಂದರು.

ಕಾರಟಗಿ ತಾಲೂಕಿನ ಎಸ್.ಎಸ್.ಕೆ. ಸಮಾಜದ ಅಧ್ಯಕ್ಷ ಶರಣುಸಾ ನಗರಿ ಮಾತನಾಡಿ, ಸಮಾಜವನ್ನು ಕಟ್ಟುವ ಕೆಲಸ ದೊಡ್ಡದು ಕಾರಣ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು. ಸಹಸ್ರಾರ್ಜುನ ಮಹಾರಾಜರ ವಂಶಸ್ಥರಾದ ನಾವುಗಳು ಇನ್ನೊಬ್ಬರಿಗೆ ಮಾದರಿಯಾಗಿ ಬದುಕಬೇಕು. ವಿದ್ಯೆ ಜತೆಗೆ ವಿನಯ ರೂಪಿಸಿಕೊಳ್ಳಬೇಕು ಎಂದರು.

ಹನಮಸಾಗರ ಎಸ್.ಎಸ್.ಕೆ. ಸಮಾಜದ ಅಧ್ಯಕ್ಷ ಭಗೀರಥಸಾ ಪಾಟೀಲ ಮಾತನಾಡಿ, ಧಾರ್ಮಿಕ ಕಾರ್ಯಕ್ರಮ ಆಚರಣೆ ಮಾಡುವ ಮೂಲಕ ಸಮಾಜದ ಉದ್ದೇಶ ಪೂರ್ಣಗೊಳ್ಳುತ್ತದೆ. ಇಲ್ಲಿನ ಅಂಭಾ ಭವಾನಿ ದೇವಸ್ಥಾನದ ಕಟ್ಟಡ ಪೂರ್ಣವಾಗಿ ಮುಗಿಯಲಿ ಎಂದು ಆಶಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಎಸ್.ಎಸ್.ಕೆ.ಸಮಾಜದ ಕುಷ್ಟಗಿ ತಾಲೂಕಾಧ್ಯಕ್ಷ ರವಿಂದ್ರಸಾ ಬಾಕಳೆ ಮಾತನಾಡಿ, ಆರ್ಥಿಕ,ಶೈಕ್ಷಣಿಕ, ರಾಜಕೀಯವಾಗಿ ಹಿಂದುಳಿದ ನಮ್ಮ ಸಮಾಜದವರಿಗೆ ಮೂಲವಾಗಿ ಶಿಕ್ಷಣದ ಅವಶ್ಯಕತೆ ಇದೆ. ನಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ ಒಳ್ಳೆಯ ನಾಗರಿಕರನ್ನಾಗಿ ಮಾಡಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮ ಜರುಗಲು ಸಮಾಜದ ಪ್ರತಿಯೊಬ್ಬರ ಸಹಕಾರ ನೀಡಿರುವದು ಸ್ಮರಣೀಯ. ದೇವಸ್ಥಾನದ ನಿರ್ಮಾಣ ಕಾರ್ಯದಲ್ಲಿ ತನು ಮನ ಧನದ ಸೇವೆ ಸಲ್ಲಿಸಿ ಸಹಸ್ರಾರ್ಜುನ ಮಹಾರಾಜರು ನಮಗೆಲ್ಲ ಆದರ್ಶ ಪ್ರಾಯರಾಗಿದ್ದು ಅವರ ಆಳ್ವಿಕೆಯಲ್ಲಿ ಸಮಾನತೆ ತಂದಿದ್ದರು ಕ್ಷತ್ರಿಯ ಪರಂಪರೆಯ ಹಿನ್ನೆಲೆಯಲ್ಲಿ ರಕ್ಷಣಾ ಕವಚವಾಗಿ ಮಹಾರಾಜರು ಹೋರಾಟ ಮಾಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಸಮಾಜದ ಗೌರವಾಧ್ಯಕ್ಷ ಪರಶುರಾಮ ನಿರಂಜನ, ಡಾ. ರವಿಕುಮಾರ ದಾನಿ, ವೆಂಕಟೇಶ ಕಾಟವಾ, ರಾಜಣಸಾ ಕಾಟವಾ, ಕೇಶವ ಕಾಟವಾ, ಆನಂದ ರಾಯಬಾಗಿ, ಪ್ರಭಾಕರ್ ಸಿಂಗ್ರಿ, ವೆಂಕುಸಾ ಖೋಡೆ, ಪರಶುರಾಮ ಪವಾರ, ಅನಿಲ್ ರಂಗರೇಜಿ, ಡಾ. ನಾಗರಾಜ ರಾಜೋಳ್ಳಿ. ಕಿರಣದಾನಿ, ಶಿವಾಜಿ ಸಿಂಗ್ರಿ, ಮೋತಿಲಾಲ ಸಿಂಗ್ರಿ. ವಿಠ್ಠಲ ದಲಬಂಜನ, ಭಾಸ್ಕರ ರಾಯಬಾಗಿ, ಶ್ರೀನಿವಾಸ ಬಾಕಳೆ,ಶಂಕರ್ ರಾಯಬಾಗಿ, ಆನಂದ ಸಿಂಗ್ರಿ, ಶಿವು ಮಿಸ್ಕಿನ್, ನಾರಾಯಣ ಸಿಂಗ್ರಿ, ಪ್ರಮೋದ ನಿರಂಜನ, ನಾಗರಾಜ ದಲಬಂಜನ, ಕುಬೇರಸಾ ದಾನಿ ಸೇರಿದಂತೆ ಮಹಿಳಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. ಬೆಳಗ್ಗೆ ಶ್ರೀ ಸಹಸ್ರಾರ್ಜುನ ಮಹಾರಾಜರ ಭಾವಚಿತ್ರಕ್ಕೆ ವಿಶೇಷ ಪೂಜೆ ಜತೆಗೆ ಅನ್ನಪ್ರಸಾದ ನಡೆಯಿತು.