ಕನ್ನಡಪ್ರಭ ವಾರ್ತೆ ಶೃಂಗೇರಿ

ಶಿಕ್ಷಣ, ಸಂಸ್ಕೃತಿ ಇಲ್ಲದ ಮನುಷ್ಯನಿಗೆ ಸಮಾಜದಲ್ಲಿ ಬೆಲೆ ಇಲ್ಲ. ಮಕ್ಕಳಲ್ಲಿ ಉತ್ತಮ ಮೌಲ್ಯ ಸಂಸ್ಕಾರಗಳನ್ನು ಬೆಳೆಸಬೇಕು ಎಂದು ನೆಮ್ಮಾರು ಗ್ರಾಪಂ ಮಾಜಿ ಸದಸ್ಯ ಎಚ್.ಜಿ.ಪುಟ್ಟಪ್ಪ ಹೆಗ್ಡೆ ಹೇಳಿದರು.

ತಾಲೂಕಿನ ನೆಮ್ಮಾರು ಸರ್ಕಾರಿ ಪ್ರೌಡಶಾಲೆ ಆವರಣದಲ್ಲಿ ಆಯೋಜಿಸಿದ್ದ ವಿವಿಧ ದಾನಿಗಳಿಂದ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್, ಶೈಕ್ಷಣಿಕ ಪರಿಕರಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಂದಿನ ಮುಂದುವರಿದ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ ಶಿಕ್ಷಣ ಅನಿವಾರ್ಯ. ಯಾರೊಬ್ಬರೂ ಶಿಕ್ಷಣ ಪಡೆಯುವುದರಿಂದ ವಂಚಿತರಾಗಬಾರದು. ಸರ್ಕಾರಗಳು ಕೂಡ ಶೈಕ್ಷಣಿಕ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡುತ್ತಿವೆ ಎಂದರು.

ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ. ಸರ್ಕಾರಿ ಶಾಲೆಗಳೆಂಬ ನಿರ್ಲಕ್ಷ್ಯ ಬೇಡ. ಸರ್ಕಾರಿ ಶಾಲೆಗಳು ಎಲ್ಲಾ ಮೂಲ ಸೌಕರ್ಯಗಳನ್ನು ಹೊಂದಿವೆ. ಉತ್ತಮ ಫಲಿತಾಂಶ ಪಡೆದು ಸಾಧನೆ ಮಾಡುತ್ತಿವೆ. ಎಸ್ಎಸ್ಎಲ್ ಸಿಯಲ್ಲಿ ನೆಮ್ಮಾರು ಪ್ರೌಢಶಾಲೆ ಸೇರಿದಂತೆ ತಾಲೂಕಿನ ಎಲ್ಲಾ ಸರ್ಕಾರಿ ಪ್ರಢಶಾಲೆಗಳು ಶೇ. 100 ಫಲಿತಾಂಶ ಗಳಿಸಿ ದಾಖಲೆಯ ಸಾಧನೆ ಮಾಡಿದೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಕಡಿಮೆಯಾಗುತ್ತಿರುವುದು ವಿಷಾದದ ಸಂಗತಿ. ಸರ್ಕಾರಿ ಶಾಲೆಗಳ ಅಳಿವು ಉಳಿವು ಪೋಷಕರ ಕೈಯಲ್ಲಿದೆ ಎಂದು ಹೇಳಿದರು.

ವಿದ್ಯಾರ್ಥಿಗಳು ಶಿಕ್ಷಣದ ಜೊತೆ ಶಿಸ್ತು, ಪ್ರಾಮಾಣಿಕತೆ, ಒಳ್ಳೆಯ ಸಂಸ್ಕೃತಿ, ಸಂಸ್ಕಾರಗಳನ್ನು ಮೈಗೂಡಿಸಿಕೊಳ್ಳಬೇಕು. ದಾನಿಗಳು ನೀಡುವ ಸೌಲಭ್ಯಗಳನ್ನು ಸರಿಯಾಗಿ ಸದ್ಬಳಕೆ ಮಾಡಿಕೊಂಡು ಉತ್ತಮ ಸಾಧನೆ ಮಾಡಬೇಕು.ಆಗಲೇ ದಾನಿಗಳು ನೀಡಿದ ಸೌಲಭ್ಯ ಸಾರ್ಥಕವಾಗುತ್ತದೆ ಎಂದರು.


ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಶಶಿಕಲಾ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದಾನಿಗಳಾದ ಬೆಂಗಳೂರಿನ ನಿವೃತ್ತ ಪ್ರಾಂಶುಪಾಲರಾದ ಸರೋಜ, ತೋರಣಗದ್ದೆ ರಾಜೇಂದ್ರ ಭಟ್, ಬಸರಿಕಟ್ಟೆ ಸುದಾ ಸುಬ್ರಮಣ್ಯ, ನೆಮ್ಮಾರಿನ ರಾಜೇಶ್ ದ್ಯಾವುಂಟು, ನೆಮ್ಮಾರು ಕರ್ನಾಟಕ ಗ್ರಾಮಿಣ ವಿಕಾಸ ಬ್ಯಾಂಕಿನ ಮ್ಯಾನೇಜರ್ ಗಿರಿಧರ ಕೃಷ್ಣರಾಜ ಆಚಾರ್ಯ, ಮುಖ್ಯ ಶಿಕ್ಷಕ ಶ್ರೀನಾಥ್ , ಶಾಹಿನ್ ತಾಜ್, ಕನ್ನಡ ಶಿಕ್ಷಕ ಸುಬ್ರಮಣ್ಯ ಭಟ್, ಸರೋಜಾ ದೇವಿ ಇದ್ದರು.

8 ಶ್ರೀ ಚಿತ್ರ 1-

ಶೃಂಗೇರಿ ನೆಮ್ಮಾರು ಸರ್ಕಾರಿ ಪ್ರೌಡಶಾಲಾವರಣದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ಹಾಗೂ ಶೈಕ್ಷಣಿಕ ಪರಿಕರಗಳ ವಿತರಣೆ ಕಾರ್ಯಕ್ರಮ ನಡೆಯಿತು.