ಸಾರಾಂಶ
ಶುಕ್ರವಾರ ಲಕ್ಷ್ಮೇಶ್ವರ ಪಟ್ಟಣದ ಎಸ್‌ಟಿಪಿಎಂಬಿ ಆಂಗ್ಲ ಮಾಧ್ಯಮ ಶಾಲೆಯ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವದ ಅಂಗವಾಗಿ ನಡೆದ ಸರಸ್ವತಿ ಪೂಜೆ ಹಾಗೂ ಪರಿಸರ ದಿನಾಚರಣೆಯ ನಿಮಿತ್ತ ಸಸಿ ನೆಡುವ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರ
ವಿದ್ಯಾರ್ಥಿಗಳು ಅಭ್ಯಾಸದೊಂದಿಗೆ ಪರಿಸರ ರಕ್ಷಣೆ ಹಾಗೂ ಪರಂಪರಯ ಬಗ್ಗೆ ತಿಳಿಸಿ ಕೊಡುವ ಕಾರ್ಯ ಶಿಕ್ಷಕರು ಮಾಡಬೇಕು ಎಂದು ಶಾಲೆಯ ಮುಖ್ಯಸ್ಥೆ ಜಯಲಕ್ಷ್ಮೀ ಮಹಾಂತಶೆಟ್ಟರ್ ಹೇಳಿದರು.ಶುಕ್ರವಾರ ಪಟ್ಟಣದ ಎಸ್‌ಟಿಪಿಎಂಬಿ ಆಂಗ್ಲ ಮಾಧ್ಯಮ ಶಾಲೆಯ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವದ ಅಂಗವಾಗಿ ನಡೆದ ಸರಸ್ವತಿ ಪೂಜೆ ಹಾಗೂ ಪರಿಸರ ದಿನಾಚರಣೆಯ ನಿಮಿತ್ತ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮಕ್ಕಳು ಶೈಕ್ಷಣಿಕ ಅಭ್ಯಾಸದ ಜತೆಗೆ ಸಂಸ್ಕೃತ ಶ್ಲೋಕಗಳು ಹಾಗೂ ಬಸವಣ್ಣನವರ ವಚನಗಳ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಕ್ಕಳಿಗೆ ಪರಿಸರ ರಕ್ಷಣೆಯ ಮಹತ್ವ ತಿಳಿಸಿಕೊಡುವ ಮೂಲಕ ಅವರಲ್ಲಿ ಪರಿಸರ ಪ್ರೀತಿ ಬೆಳೆಯುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಸಂಸ್ಥೆಯ ಮುಖ್ಯಸ್ಥರು, ಮುಖ್ಯೊಪಾಧ್ಯಯರು, ಶಿಕ್ಷಕಿಯರು, ಸಸಿ ನೆಟ್ಟು ನೀರುಣಿಸಿದರು.
ಮುಖ್ಯಯೊಪಾಧ್ಯಯಿನಿ ಸ್ವಾತಿ ಪೈ, ಪ್ರಭುಗೌಡ ಯಕ್ಕಿಕೊಪ್ಪ, ರೂಪಾ ನವಲೆ, ಸಾವಿತ್ರಿ ನಲವಡಿ, ಜ್ಯೋತಿ ಮುಳಗುಂದ, ವೀಣಾ ಜಾಮನೂರ, ಲೀಲಾವತಿ ಬೆಳಗಟ್ಟಿ, ಮಂಜುಳಾ ಪಾಟೀಲ, ದೀಪಾ ಆದಿ, ಸಿಮ್ರಾನ್, ಶಿವಯೋಗೀಶ ವಾಲಿಶೆಟ್ಟರ ಇದ್ದರು.