ಕುಟುಂಬ ರಾಜಕಾರಣಕ್ಕೆ ಪಾಠ ಕಲಿಸಿ: ವಿನಯಕುಮಾರ

| Published : Apr 21 2024, 02:24 AM IST

ಕುಟುಂಬ ರಾಜಕಾರಣಕ್ಕೆ ಪಾಠ ಕಲಿಸಿ: ವಿನಯಕುಮಾರ
Share this Article
  • FB
  • TW
  • Linkdin
  • Email

ಸಾರಾಂಶ

ಕೆಲಸಕ್ಕೆ ಕಾರ್ಯಕರ್ತರು ಬೇಕು, ಅಧಿಕಾರಕ್ಕೆ ತಮ್ಮ ಕುಟುಂಬ ಸದಸ್ಯರೇಬೇಕೆಂಬ ದಾವಣಗೆರೆ ಜಿಲ್ಲೆಯ ಎರಡು ಕುಟುಂಬಗಳ ರಾಜಕಾರಣಕ್ಕೆ ಲೋಕಸಭೆ ಚುನಾವಣೆಯಲ್ಲಿ ಮತದಾರರು ಎರಡೂ ಪಕ್ಷಗಳ ಅಭ್ಯರ್ಥಿಗಳಿಗೆ ತಕ್ಕ ಪಾಠ ಕಲಿಸುವಂತೆ ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯಕುಮಾರ ಹೇಳಿದ್ದಾರೆ.

- ಹರಪನಹಳ್ಳಿ ತಾಲೂಕು ವಿವಿಧ ಗ್ರಾಮಗಳಲ್ಲಿ ಮತಯಾಚಿಸಿದ ಪಕ್ಷೇತರ ಅಭ್ಯರ್ಥಿ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಕೆಲಸಕ್ಕೆ ಕಾರ್ಯಕರ್ತರು ಬೇಕು, ಅಧಿಕಾರಕ್ಕೆ ತಮ್ಮ ಕುಟುಂಬ ಸದಸ್ಯರೇಬೇಕೆಂಬ ದಾವಣಗೆರೆ ಜಿಲ್ಲೆಯ ಎರಡು ಕುಟುಂಬಗಳ ರಾಜಕಾರಣಕ್ಕೆ ಲೋಕಸಭೆ ಚುನಾವಣೆಯಲ್ಲಿ ಮತದಾರರು ಎರಡೂ ಪಕ್ಷಗಳ ಅಭ್ಯರ್ಥಿಗಳಿಗೆ ತಕ್ಕ ಪಾಠ ಕಲಿಸುವಂತೆ ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯಕುಮಾರ ಹೇಳಿದರು.

ಹರಪನಹಳ್ಳಿ ತಾಲೂಖು ಗುಂಡಗತ್ತಿ, ಜಟ್ಟಿನಕಟ್ಟೆ, ವಿವಿಧ ಗ್ರಾಮಗಳಲ್ಲಿ ಶನಿವಾರ ಮತಯಾಚಿಸಿ ಮಾತನಾಡಿದ ಅವರು, ಜನಸಾಮಾನ್ಯರು ರಾಜಕಾರಣಕ್ಕೆ ಬರಬೇಕು, ಬಡವರ ಮಕ್ಕಳು ರಾಜಕೀಯ ಕ್ಷೇತ್ರದಲ್ಲಿ ಬೆಳೆಯಬೇಕು. ಅದಕ್ಕಾಗಿ ದಾವಣಗೆರೆ ಕ್ಷೇತ್ರದ ಎರಡು ಪ್ರಬಲ ಕುಟುಂಬಗಳ ಕೈಗೆ ಸಿಲುಕಿರುವ ಇಲ್ಲಿನ ವಾತಾವರಣ ಸರಿಪಡಿಸುವ ಜವಾಬ್ದಾರಿ ನಮ್ಮ, ನಿಮ್ಮೆಲ್ಲರ ಮೇಲೂ ಇದೆ ಎಂದರು.

ಈಗಾಗಲೇ ತಂಡಗಳನ್ನು ರಚಿಸಿದ್ದು, ಈ ತಂಡಗಳು ಊರೂರಿನಲ್ಲಿ ಪ್ರಚಾರ ಮಾಡುತ್ತಿವೆ. ತಾವೂ ಮನೆ ಮನೆಗೆ ಹೋಗಿ, ಕುಟುಂಬ ರಾಜಕಾರಣದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇನೆ. ಸ್ವಾಭಿಮಾನಿಯಾಗಿ ಇಲ್ಲಿ ಕಳಕ್ಕಿಳಿದಿರುವ ತಮಗೆ ಮತ ನೀಡಿ, ಸೇವೆ ಮಾಡಲು ಅವಕಾಶ ಮಾಡಿಕೊಡಿ ಎಂದು ಕೋರಿದರು.

ನಿಮ್ಮ ಮನೆ ಬಾಗಿಲಿಗೆ ಬಂದ ನನ್ನ ಕೈಗಳನ್ನು ಬಲಪಡಿಸಿ. ನಿಮ್ಮ ಸಮಸ್ಯೆಗಳು, ಕ್ಷೇತ್ರದ ಸಮಸ್ಯೆಗಳ ಬಗ್ಗೆ ಲೋಕಸಭೆಯಲ್ಲಿ ಸಮರ್ಥವಾಗಿ ಧ್ವನಿ ಎತ್ತುತ್ತೇನೆ. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಎಲ್ಲಾ ರೀತಿ ಶ್ರಮಿಸುವೆ. ನನ್ನ ನಾಮಪತ್ರ ಸಲ್ಲಿಕೆ ವೇಳೆ ರೋಡ್ ಶೋನಲ್ಲಿ ಕ್ಷೇತ್ರಾದ್ಯಂತ ವಿವಿಧ ಗ್ರಾಮಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಜನರುಬಂದಿದ್ದು, ಕಾಂಗ್ರೆಸ್‌-ಬಿಜೆಪಿಗೆ ನಡುಕ ಹುಟ್ಟಿಸಿದೆ ಎಂದರು.

ಗುಂಡಗತ್ತಿ, ಜಿಟ್ಟಿನಕಟ್ಟೆ ಗ್ರಾಮಗಳ ಮುಖಂಡರು, ಗ್ರಾಮಸ್ಥರು, ಕಾಂಗ್ರೆಸ್- ಬಿಜೆಪಿ ಕಾರ್ಯಕರ್ತರು, ಹಿರಿಯರು, ಮಹಿಳೆಯರು ವಿನಯಕುಮಾರಗೆ ಬೆಂಬಲ ಸೂಚಿಸಿದರು. ಗ್ರಾಮಕ್ಕೆ ಬರುತ್ತಿದ್ದಂತೆ ಅದ್ಧೂರಿ ಸ್ವಾಗತ ಕೋರಿ, ಆರತಿ ಎತ್ತಿ ಮಹಿಳೆಯರು ಸ್ವಾಗತಿಸಿದರು. ಪಕ್ಷಾತೀತವಾಗಿ ವಿನಯ್‌ಗೆ ಬೆಂಬಲಿಸಿ, ನಿಮ್ಮ ಪರ ಕೆಲಸ ಮಾಡುವುದಾಗಿ ಭರವಸೆ ನೀಡಿದರು.

- - -

ಕೋಟ್‌

ರಾಷ್ಟ್ರೀಯ ಪಕ್ಷಗಳು ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿವೆ. ಗಂಡ-ಹೆಂಡತಿ, ಅಪ್ಪ-ಮಗಳು, ಸೊಸೆ, ಅಣ್ಣ, ತಮ್ಮಂದಿರಿಗೆ ಟಿಕೆಟ್ ನೀಡಲಾಗಿದೆ. ಪಕ್ಷಕ್ಕಾಗಿ ಇಷ್ಟು ವರ್ಷ ದುಡಿದವರ ಗತಿ ಏನು? ನಮ್ಮಂಥ, ನಿಮ್ಮಂಥವರು ಕೇವಲ ಬಾವುಟ ಹಿಡಿಯೋಕಷ್ಟೇ ಇರಬೇಕಾ? ನಾವೂ ಅಧಿಕಾರ ಅನುಭವಿಸಬಾರದಾ?

- ಜಿ.ಬಿ.ವಿನಯಕುಮಾರ, ಪಕ್ಷೇತರ ಅಭ್ಯರ್ಥಿ

- - - -20ಕೆಡಿವಿಜಿ19, 20:

ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯಕುಮಾರ ಹರಪನಹಳ್ಳಿ ಕ್ಷೇತ್ರದ ಗುಂಡಗತ್ತಿ, ಜಿಟ್ಟಿನಕಟ್ಟೆಯಲ್ಲಿ ಪ್ರಚಾರ ನಡೆಸಿದರು.