ಇತರರಿಗೆ ಕನ್ನಡ ಕಲಿಸಿ, ಬೆಳೆಸಲು ಮುಂದಾಗಿ

| Published : Sep 14 2024, 01:51 AM IST

ಸಾರಾಂಶ

ಹೆಸರಾಯಿತು ಕರ್ನಾಟಕ ಉಸಿರಾಯಿತು ಕನ್ನಡ ಅಭಿಯಾನದ ರಥವನ್ನು ತಾಲೂಕಿಗೆ ಬರಮಾಡಿಕೊಳ್ಳಲು ಹೆಮ್ಮೆಯಾಗುತ್ತದೆ ಎಂದು ತಹಸೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ ಹೇಳಿದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರಹೆಸರಾಯಿತು ಕರ್ನಾಟಕ ಉಸಿರಾಯಿತು ಕನ್ನಡ ಅಭಿಯಾನದ ರಥವನ್ನು ತಾಲೂಕಿಗೆ ಬರಮಾಡಿಕೊಳ್ಳಲು ಹೆಮ್ಮೆಯಾಗುತ್ತದೆ ಎಂದು ತಹಸೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ ಹೇಳಿದರು.ಪಟ್ಟಣದ ಡಾ. ಬಾಬು ಜಗಜೀವನ್‌ರಾಮ್ ವೃತ್ತದಲ್ಲಿ ಕನ್ನಡ ಜ್ಯೋತಿರಥವನ್ನು ಸ್ವಾಗತಿಸಿ ಮಾತನಾಡಿದರು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಕನ್ನಡ ರಥಯಾತ್ರೆಯೂ ಸಾಗಲಿದೆ. ಇತರರಿಗೆ ಕನ್ನಡ ಕಲಿಸಿ, ಬೆಳೆಸಬೇಕು. ಎಲ್ಲರೂ ಭಾಷಾಭಿಮಾನ ಬೆಳೆಸಿಕೊಳ್ಳಬೇಕು. ಕಾರ್ಯಕ್ರಮದಲ್ಲಿ ತಾಲೂಕಿನ ಹಿರಿಯ ಅಧಿಕಾರಿಗಳು, ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ ಎಂದರು.ಸಾಹಿತಿ ನಾಗೇಶ್ ಕೌಂಡಿನ್ಯ ಮಾತನಾಡಿ, ಕನ್ನಡಿಗರು ಹೆಮ್ಮೆಯಿಂದ, ಉತ್ಸಾಹದಿಂದ ಸಂಭ್ರಮಿಸುವ ಕನ್ನಡನಾಡಿನಲ್ಲಿ ಕನ್ನಡದಿಂದ ಕರ್ನಾಟಕ ಎಂಬ ಹೆಸರು ಬಂದಿದೆ. ಕನ್ನಡಪ್ರೇಮ, ಕನ್ನಡನಾಡು ಹಾಗೂ ಜಲದ ಅಭಿಮಾನ ಹಾಗೂ ಕನ್ನಡತನ ಸಮಸ್ತ ಕನ್ನಡಿಗರಲ್ಲಿ ಸದಾ ಉಳಿಯಬೇಕು. ಆಗ ಮಾತ್ರ ಕನ್ನಡನಾಡಿಗೆ ಹಾಗೂ ಕರ್ನಾಟಕ ಎಂಬ ಹೆಸರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.

ಸಂಸದ ಶ್ರೇಯಸ್ ಎಂ.ಪಟೇಲ್ ಡಾ. ಅಂಬೇಡ್ಕರ್ ಪ್ರತಿಮೆ ಹಾಗೂ ಕನ್ನಡ ರಥದ ಶ್ರೀ ಭುವನೇಶ್ವರಿದೇವಿ ಪ್ರತಿಮೆಗೆ ಮಾರ್ಲಾಪಣೆ ಮಾಡಿ, ನಮಸ್ಕರಿಸಿದರು.

ರಥಯಾತ್ರೆಯಲ್ಲಿ ಕಳಸ ಹೊತ್ತು ವಿದ್ಯಾರ್ಥಿನಿಯರು ಶ್ರೀ ವೆಂಕಟೇಶ್ವರ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ವಾಧ್ಯಘೋಷ ನುಡಿಸಿದರು.ಇತರೆ ಶಾಲೆಗಳ ವಿದ್ಯಾರ್ಥಿಗಳು ಮತ್ತು ವೀರಗಾಸೆ ನೃತ್ಯ ತಂಡದವರು ಸಾಗಿದರು. ಪೂರ್ವಭಾವಿ ಸಭೆಯಲ್ಲಿ ರಥಯಾತ್ರೆ ಪ್ರಾರಂಭ ಹಾಗೂ ಮುಕ್ತಾಯವಾಗುವ ತನಕ ಎಲ್ಲಾ ಇಲಾಖೆಗಳ ಅಧಿಕಾರಿಗಳು ಮೆರವಣಿಗೆಯಲ್ಲಿ ತಪ್ಪದೇ ಇರಲೇಬೇಕು ಎಂದು ಸೂಚಿಸಲಾಗಿತ್ತು. ಆದರೆ ಸ್ವಾಗತಿಸಲು ಇದ್ದ ಅಧಿಕಾರಿಗಳು ಡಾ. ಅಂಬೇಡ್ಕರ್ ವೃತ್ತಕ್ಕೆ ರಥಯಾತ್ರೆ ಆಗಮಿಸಿದಾಗ ನಾಲ್ಕೈದು ಇಲಾಖೆಗಳ ಅಧಿಕಾರಿಗಳು ಮಾತ್ರ ಇದ್ದರು. ಕೆಲವು ಇಲಾಖೆಗಳ ಅಧಿಕಾರಿಗಳು ಕಾರ್ಯಕ್ರಮಕ್ಕೆ ಗೈರಾಗಿದ್ದರು.ಮೆರವಣಿಗೆಯಲ್ಲಿ ಕಳಸ ಹೊತ್ತು ಸಾಗಿದ ವಿದ್ಯಾರ್ಥಿನಿಯರು, ವಾಧ್ಯಘೋಷದ ನಾಲ್ಕು ಕಿ.ಮಿ.ಗೂ ಹೆಚ್ಚು ಮೆರವಣಿಗೆಯಲ್ಲಿ ಸಾಗುತ್ತಾ ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನದ ತಿರುವಿನ ಸಮೀಪ ಆಗಮಿಸಿದಾಗ ಜಿಪಂ ಇಂಜಿನಿಯರ್ ಪ್ರಶಾಂತ್ ಕುಡಿಯುವ ನೀರು ಹಾಗೂ ಬಿಸ್ಕೆಟ್ ವ್ಯವಸ್ಥೆ ಮಾಡಿದರು. ನಗರಠಾಣೆ ಪಿಎಸ್‌ಐ ಅಭಿಜಿತ್ ನೇತೃತ್ವದಲ್ಲಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.ಪುರಸಭೆ ಅಧ್ಯಕ್ಷ ಎ.ಶ್ರೀಧರ್, ಉಪಾಧ್ಯಕ್ಷೆ ಸಾವಿತ್ರಮ್ಮ, ಸದಸ್ಯರಾದ ಎ.ಜಗನ್ನಾಥ್, ಎಚ್.ಕೆ.ಪ್ರಸನ್ನ ಹಾಗೂ ಜ್ಯೋತಿ ಮಂಜುನಾಥ್, ಪುರಸಭೆ ಮುಖ್ಯಾಧಿಕಾರಿ ನಾಗೇಂದ್ರ ಕುಮಾರ್, ಹಿರಿಯರಾದ ಪ್ರಭಶಂಕರ್, ಮುರಳಿಧರಗುಪ್ತ, ಈಶ್ವರ್, ಪ್ರೇಮಮಂಜುನಾಥ್, ಕೆ.ಆರ್.ಸುದರ್ಶನ್ ಬಾಬು, ಎಚ್.ಟಿ.ಲಕ್ಷ್ಮಣ್, ಜೈಪ್ರಕಾಶ್ ಇದ್ದರು. ಪೋಟೋ

ಹೊಳೆನರಸೀಪುರದ ಡಾ. ಬಾಬು ಜಗಜೀವನ್‌ರಾಮ್ ವೃತ್ತದಲ್ಲಿ ಕನ್ನಡ ಜ್ಯೋತಿರಥವನ್ನು ಸ್ವಾಗತಿಸಲಾಯಿತು.