ಸಾರಾಂಶ
ನಿಡಗುಂದಿ: ಮಕ್ಕಳಿಗೆ ವಿದ್ಯಾರ್ಥಿ ದೆಸೆಯಿಂದಲೇ ವಿದ್ಯೆ, ಜೊತೆಗೆ ಸಂಸ್ಕಾರವಂತರನ್ನಾಗಿ ಮಾಡಬೇಕು ಎಂದು ನಾಗರದಿನ್ನಿ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು. ನಿಡಗುಂದಿ ತಾಲೂಕಿನ ಮುಕಾರ್ತಿಹಾಳ ಗ್ರಾಮದ ಶಕುಂತಲಾಬಾಯಿ ಬೆಳ್ಳಿ ಪಬ್ಲಿಕ್ ಶಾಲೆಯಲ್ಲಿ ಮಾತಾ-ಪತೃಗಳ ಪಾದ ಪೂಜೆ ಮತ್ತು ಅಮ್ಮನ ಕೈತುತ್ತು ಎಂ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ನಿಡಗುಂದಿ: ಮಕ್ಕಳಿಗೆ ವಿದ್ಯಾರ್ಥಿ ದೆಸೆಯಿಂದಲೇ ವಿದ್ಯೆ, ಜೊತೆಗೆ ಸಂಸ್ಕಾರವಂತರನ್ನಾಗಿ ಮಾಡಬೇಕು ಎಂದು ನಾಗರದಿನ್ನಿ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು. ನಿಡಗುಂದಿ ತಾಲೂಕಿನ ಮುಕಾರ್ತಿಹಾಳ ಗ್ರಾಮದ ಶಕುಂತಲಾಬಾಯಿ ಬೆಳ್ಳಿ ಪಬ್ಲಿಕ್ ಶಾಲೆಯಲ್ಲಿ ಮಾತಾ-ಪತೃಗಳ ಪಾದ ಪೂಜೆ ಮತ್ತು ಅಮ್ಮನ ಕೈತುತ್ತು ಎಂ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು. ಮಕ್ಕಳಿಗಾಗಿ ಆಸ್ತಿಯನ್ನು ಮಾಡದೇ ಮಕ್ಕಳನ್ನೆ ಆಸ್ತಿಯನ್ನಾಗಿ ಮಾಡಬೇಕು. ಇಂದು ಹೆತ್ತ ತಂದೆ-ತಾಯಂದಿರನ್ನುಮುಪ್ಪಾವಸ್ತೆಯಲ್ಲಿ ವೃದ್ಧಾಶ್ರಮಕ್ಕೆ ಸೇರಿಸುವದನ್ನು ನೋಡುತ್ತಿದ್ದೇವೆ. ಇದಕ್ಕೆ ಮುಖ್ಯಕಾರಣ ಮಕ್ಕಳನ್ನ ವಿದ್ಯಾವಂತರನ್ನಾಗಿ ಮಾಡುತ್ತಿದ್ದಾರೆ ಹೊರತು, ಸಂಸ್ಕಾರವಂತರನ್ನಾಗಿ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಅಧ್ಯಕ್ಷ ಡಾ.ರವೀಂದ್ರ ಬೆಳ್ಳಿ ಮಾತನಾಡಿ, ಇಂದಿನ ಮಕ್ಕಳಿಗೆ ಪೌಷ್ಠಿಕ ಆಹಾರ ತಿನಿಸುತ್ತಿಲ್ಲ, ಮೊಬೈಲ್ ಗಳಿಗೆ ಅಂಟಿಕೊಂಡಿದ್ದಾರೆ. ಭಾರವಾದ ಪುಸ್ತಕ ಹೊರಲು ಸಾಧ್ಯವಾಗುತ್ತಿಲ್ಲ. ಕಾರಣ ಮಕ್ಕಳಿಗೆ ಸಾವಯವ ಆಹಾರ ನೀಡಬೇಕು. ವಿದ್ಯೆಯ ಜೊತೆಗೆ ಯೋಗ,ಪ್ರಾಣಾಯಾಮ ಸೇರಿದಂತೆ ದಾರ್ಶನಿಕರ ಕಥೆ ಹೇಳಬೇಕು ಎಂದರು. ಮಂಡಳಿಯ ಪದಾಧಿಕಾರಿ ಕೆ.ಎಲ್.ದಶವಂತ, ವಿಜಯಕುಮಾರ.ಸಿ, ಗುರುಮಾತೆ ನಿವೇದಿತಾ ರೂಡಗಿ, ಶಿಕ್ಷಕಿಯರಾದ ರೇಣುಕಾ ಗುಣಕಿ, ಚೈತ್ರಾ ಗುಳೇದಗುಡ್ಡ, ರಜಿಯಾಬಾನು ಬಿಳೆಕುದರಿ, ಕೀರ್ತಿ ಚಿಮ್ಮಲಗಿ, ರೂಪಾ ಪಟ್ಟಣಶೆಟ್ಟಿ, ಕಾಶಿಬಾಯಿ ಸೇರಿದಂತೆ ಮುಂತಾದವರು ಇದ್ದರು.