ಇತ್ತೀಚಿಗೆ ಧಾರವಾಡದಲ್ಲಿ ಆಯೋಜಿಸಿದ್ದ 2025-26ನೇ ಸಾಲಿನ ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಹಾವೇರಿ ತಾಲೂಕಿನ ಕಿತ್ತೂರು ಗ್ರಾಮದ ಶಿಕ್ಷಕ ಜಿ.ಎಸ್. ಹತ್ತಿಮತ್ತೂರ ಅವರು ಕಡಿಮೆ ವೆಚ್ಚದ ಗಣಿತ ಮಾದರಿಗಳನ್ನ ಪ್ರದರ್ಶನ ಮಾಡಿ ದಕ್ಷಿಣ ಭಾರತ ರಾಜ್ಯಗಳ ವಿಜ್ಞಾನ ಮೇಳಕ್ಕೆ ಆಯ್ಕೆಯಾಗಿದ್ದಾರೆ.

ಹಾವೇರಿ: ಇತ್ತೀಚಿಗೆ ಧಾರವಾಡದಲ್ಲಿ ಆಯೋಜಿಸಿದ್ದ 2025-26ನೇ ಸಾಲಿನ ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಹಾವೇರಿ ತಾಲೂಕಿನ ಕಿತ್ತೂರು ಗ್ರಾಮದ ಶಿಕ್ಷಕ ಜಿ.ಎಸ್. ಹತ್ತಿಮತ್ತೂರ ಅವರು ಕಡಿಮೆ ವೆಚ್ಚದ ಗಣಿತ ಮಾದರಿಗಳನ್ನ ಪ್ರದರ್ಶನ ಮಾಡಿ ದಕ್ಷಿಣ ಭಾರತ ರಾಜ್ಯಗಳ ವಿಜ್ಞಾನ ಮೇಳಕ್ಕೆ ಆಯ್ಕೆಯಾಗಿದ್ದಾರೆ.ಧಾರವಾಡದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಶ್ರಯದಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ವತಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಹಾವೇರಿ ತಾಲೂಕಿನ ಕಿತ್ತೂರು ಗ್ರಾಮದ ಶ್ರೀ ಶಿವಶರಣ ಹರಳಯ್ಯನವರ ಪ್ರೌಢಶಾಲೆಯ ಗಣಿತ ಶಿಕ್ಷಕ ಜಿ.ಎಸ್.ಹತ್ತಿಮತ್ತೂರ ಹಾವೇರಿ ಜಿಲ್ಲೆಯ ಶಿಕ್ಷಕರ ವಿಭಾಗದಿಂದ ಪ್ರತಿನಿಧಿಸಿ ಕಡಿಮೆ ವೆಚ್ಚದ ಗಣಿತ ಮಾದರಿಗಳನ್ನ ಪ್ರದರ್ಶನ ಮಾಡಿ ದಕ್ಷಿಣ ಭಾರತ ರಾಜ್ಯಗಳ ವಿಜ್ಞಾನ ಮೇಳ-2026ಕ್ಕೆ ಕರ್ನಾಟಕ ರಾಜ್ಯವನ್ನ ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.ದಕ್ಷಿಣ ಭಾರತ ರಾಜ್ಯಗಳ ವಿಜ್ಞಾನ ಮೇಳ-2026ನ್ನು ಜ.19ರಿಂದ 23ರವರೆಗೆ ತೆಲಂಗಾಣ ರಾಜ್ಯದ ಸಂಗಾರೆಡ್ಡಿ ಜಿಲ್ಲೆಯ ಕೊಲ್ಲೂರು ಆರ್.ಸಿ. ಪುರಂನ ಗಾಡಿಯಂ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದೆ.ಈ ಸಾಧನೆಗಾಗಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮೋಹನ ದಂಡಿನ, ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲ ಝಡ್.ಎಂ. ಖಾಜಿ, ಬಿಇಒ ಎಂ.ಎಚ್. ಪಾಟೀಲ ಹಾಗೂ ಶಿವಶರಣ ಹರಳಯ್ಯನವರ ವಿದ್ಯಾಸಂಸ್ಥೆಯ ಅಧ್ಯಕ್ಷ ಮುತ್ತಣ್ಣ ಲಮಾಣಿ, ಮುಖ್ಯ ಶಿಕ್ಷಕ ಎಸ್.ಬಿ. ಚನ್ನೂರ, ಎ.ಕೆ. ಶಿರಾಳಕೊಪ್ಪ. ಸಿಬ್ಬಂದಿ ವರ್ಗದವರು ಕಿತ್ತೂರು ಹಾಗೂ ಡೊಂಬರಮತ್ತೂರು ಗ್ರಾಮಸ್ಥರು ಹಾಗೂ ಜಿಲ್ಲೆಯ ಶಿಕ್ಷಕರ ಬಳಗ ಹರ್ಷ ವ್ಯಕ್ತಪಡಿಸಿದ್ದಾರೆ.