ಸಾರಾಂಶ
ಶಿಕ್ಷಕಿ ವನಜ ಎಂ ಮತ್ತು ಎನ್‌ಸಿಸಿ ನಿವೃತ್ತ ಅಧಿಕಾರಿ ಡಾ. ಗಣೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕನ್ನಡಪ್ರಬ ವಾರ್ತೆ ನಾಪೋಕ್ಲು
ಬಿಲ್ಲವ ಸಮಾಜ ನಾಪೋಕ್ಲು ವತಿಯಿಂದ ಶಿಕ್ಷಕಿ ವನಜ.ಎಂ ಹಾಗೂ ಎನ್ ಸಿ ಸಿ ನಿವೃತ್ತ ಅಧಿಕಾರಿ ಡಾ. ಗಣೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಇಲ್ಲಿಯ ಭಗವತಿ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಬಿಲ್ಲವ ಸಮಾಜದ ಅಧ್ಯಕ್ಷ ಪ್ರತೀಪ ಬಿ ಎಂ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಶ್ರೀ ಬ್ರಹ್ಮರ್ಷಿ ನಾರಾಯಣ ಗುರು ಜಯಂತಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ವಿಜೇತೆ ಹಾಕತ್ತೂರು ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ವನಜ ಎಂ ಹಾಗೂ ಎನ್ ಸಿ ಸಿ ನಿವೃತ್ತ ಅಧಿಕಾರಿ ಡಾ. ಗಣೇಶ್ ಗೋಣಿಕೊಪ್ಪ ಅವರನ್ನು ನಾಪೋಕ್ಲು ಬಿಲ್ಲವ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಕೊಡಗು ಜಿಲ್ಲಾ ಬಿಲ್ಲವ ಸಮಾಜದ ಉಪಾಧ್ಯಕ್ಷ ವಿಠಲ ಪೂಜಾರಿ, ನಾಪೋಕ್ಲು ಬಿಲ್ಲವ ಸಮಾಜದ ಉಪಾಧ್ಯಕ್ಷ ವಸಂತ ಬಿ ಆರ್, ಜಗ್ಗನಾಥ್ ಪಾಲೂರು ಹಾಗೂ ತಾಲೂಕು ಬಿಲ್ಲವ ಸಮಾಜದ ಮಾಜಿ ಅಧ್ಯಕ್ಷ ಎಲ್ಯಣ್ಣ ಪೂಜಾರಿ ಬೆಟ್ಟಗೇರಿ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರೀನಾ ಜಗನ್ನಾಥ್ , ಬಿಲ್ಲವ ಸಮಾಜದ ಕಾರ್ಯದರ್ಶಿ ಲೋಹಿತ್ ಕೆ ಎಸ್, ಖಜಾಂಚಿ ದೀಪಕ್ ಬಿ ಡಿ, ಸಂಘಟನಾ ಕಾರ್ಯದರ್ಶಿ ಪ್ರಕಾಶ್, ನಿರ್ದೇಶಕರು, ಸದಸ್ಯರು ಉಪಸ್ಥಿತರಿದ್ದರು.