ಶಿಕ್ಷಕರ ಕಾರ್ಯ ಎಲ್ಲ ವೃತ್ತಿಗಿಂತ ಪವಿತ್ರ: ಉಮೇಶ

| Published : Dec 10 2023, 01:30 AM IST

ಸಾರಾಂಶ

ಸಂಸ್ಥೆ ಅಧ್ಯಕ್ಷ ಎಂ.ಬಿ. ಶಿವಕುಮಾರ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿವೃತ್ತ ಅಧಿಕಾರಿ ನಿರ್ಮಲಾ ಪೈ, ಮೈತ್ರಿ ಮಾತೃ ಮಂಡಳಿಯ ಹಿರಿಯ ಸದಸ್ಯೆ ಅಪರ್ಣ ಗುರುಮೂರ್ತಿ, ಕುಮದ್ವತಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಜಿ.ಆರ್. ಹೆಗಡೆ, ಪ್ರಭಾರಿ ಮುಖ್ಯಶಿಕ್ಷಕ ಪ್ರಶಾಂತ ಕುಬಸದ, ಶಿಕ್ಷಕರು, ಮಾತೃ ಮಂಡಳಿಯ ಸದಸ್ಯರು, ವಿದ್ಯಾರ್ಥಿಗಳು ಇದ್ದರು.

ಶಿಕಾರಿಪುರ: ಮಕ್ಕಳು ತಿದ್ದಿ ಸಂಸ್ಕೃತಿ, ಸಂಸ್ಕಾರ ನೀಡಿ ಸಮಾಜಕ್ಕೆ ಕೊಡುಗೆಯಾಗಿ ಸಿದ್ದಪಡಿಸುವ ಶಿಕ್ಷಕರ ಸಾಧನೆ ಎಲ್ಲ ವೃತ್ತಿಗಿಂತ ಪವಿತ್ರವಾಗಿದ್ದು, ವೃತ್ತಿಯನ್ನು ಪ್ರಾಮಾಣಿಕತೆಯಿಂದ ಸಲ್ಲಿಸಿದರೆ ಗೌರವ ಹೆಚ್ಚಲಿದೆ ಎಂದು ತಾ. ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಉಮೇಶ ಎಂ. ತಿಳಿಸಿದರು.

ಶನಿವಾರ ಪಟ್ಟಣದ ಭವಾನಿರಾವ್‌ ಕೇರಿಯಲ್ಲಿನ ಮೈತ್ರಿ ಪ್ರಾಥಮಿಕ ಮತ್ತು ಕುಮದ್ವತಿ ಪ್ರೌಢಶಾಲೆಯಲ್ಲಿ ವಾರ್ಷಿಕೋತ್ಸವದ ಅಂಗವಾಗಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನಡೆದ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಕುಮದ್ವತಿ ಮಹಾವಿದ್ಯಾಲಯ ಹಾಗೂ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಪ್ರಾಚಾರ್ಯ ಶಿವಕುಮಾರ್ ಜಿ.ಎಸ್. ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿ ಶುಭಾ ರಘು, ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ವಿಶ್ವನಾಥ ಪಿ. ಮಾತನಾಡಿದರು.

ಸಂಸ್ಥೆ ಅಧ್ಯಕ್ಷ ಎಂ.ಬಿ. ಶಿವಕುಮಾರ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿವೃತ್ತ ಅಧಿಕಾರಿ ನಿರ್ಮಲಾ ಪೈ, ಮೈತ್ರಿ ಮಾತೃ ಮಂಡಳಿಯ ಹಿರಿಯ ಸದಸ್ಯೆ ಅಪರ್ಣ ಗುರುಮೂರ್ತಿ, ಕುಮದ್ವತಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಜಿ.ಆರ್. ಹೆಗಡೆ, ಪ್ರಭಾರಿ ಮುಖ್ಯಶಿಕ್ಷಕ ಪ್ರಶಾಂತ ಕುಬಸದ, ಶಿಕ್ಷಕರು, ಮಾತೃ ಮಂಡಳಿಯ ಸದಸ್ಯರು, ವಿದ್ಯಾರ್ಥಿಗಳು ಇದ್ದರು.

ಸಂಜನಾ ಸಂಗಡಿಗರು ಪ್ರಾರ್ಥಿಸಿ, ವಿದ್ಯಾಲಕ್ಷ್ಮಿ ಸ್ವಾಗತಿಸಿ, ರೋಹಿಣಿ ಮತ್ತು ಅನ್ವಿತಾ ನಿರೂಪಿಸಿದರೆ, ವೀಣಾ ವಂದಿಸಿದರು.

- - -ಶಿಕಾರಿಪುರದ ಮೈತ್ರಿ ಪ್ರಾಥಮಿಕ ಮತ್ತು ಕುಮದ್ವತಿ ಪ್ರೌಢಶಾಲೆಯಲ್ಲಿ ವಾರ್ಷಿಕೋತ್ಸವದ ಅಂಗವಾಗಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನಡೆದ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಉಮೇಶ ಎಂ ಮಾತನಾಡಿದರು.[ಫೋಟೋ ಫೈಲ್‌ ನಂ.9 ಕೆ.ಎಸ್‌.ಕೆ.ಪಿ 1]