ಸದೃಢ ಸಮಾಜ ನಿರ್ಮಾಣಕ್ಕೆ ಶಿಕ್ಷಕರ ಸೇವೆ ಅನನ್ಯ: ಬಿ.ರಾಮಕೃಷ್ಣ

| Published : Sep 12 2024, 01:46 AM IST

ಸದೃಢ ಸಮಾಜ ನಿರ್ಮಾಣಕ್ಕೆ ಶಿಕ್ಷಕರ ಸೇವೆ ಅನನ್ಯ: ಬಿ.ರಾಮಕೃಷ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸ್ತುತ ದಿನಗಳಲ್ಲಿ ಸಮಾಜ ದಿಕ್ಕು ತಪ್ಪುವ ಹಂತ ತಲುಪುವ ಜತೆಗೆ ಯುವ ಸಮೂಹ ದುಶ್ಚಟಗಳಿಗೆ ಬಲಿಯಾಗಿ ತಮ್ಮ ಅಮೂಲ್ಯ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇವರನ್ನು ಸರಿ ದಾರಿಗೆ ತರುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾಗಿದೆ. ಶಿಕ್ಷಕರು ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕು.

ಕನ್ನಡಪ್ರಭ ವಾರ್ತೆ ಮದ್ದೂರು

ಸದೃಢ ಸಮಾಜ ನಿರ್ಮಾಣಕ್ಕೆ ಶಿಕ್ಷಕರ ಸೇವೆ ಅನನ್ಯವಾಗಿದೆ ಎಂದು ಆರ್.ಕೆ.ಸಮೂಹ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ, ವಿಪ ಮಾಜಿ ಸದಸ್ಯ ಬಿ.ರಾಮಕೃಷ್ಣ ಬುಧವಾರ ಹೇಳಿದರು.

ತಾಲೂಕಿನ ಕೆ.ಹೊನ್ನಲಗೆರೆ ಆರ್.ಕೆ.ಶಿಕ್ಷಣ ಸಂಸ್ಥೆ ಸಂಭಾಗಣದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ನಿವೃತ್ತ ಮುಖ್ಯ ಶಿಕ್ಷಕರು ಹಗೂ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ಗೌರವ ಸಮರ್ಪಣೆ ಮಾಡಿ ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಸಮಾಜ ದಿಕ್ಕು ತಪ್ಪುವ ಹಂತ ತಲುಪುವ ಜತೆಗೆ ಯುವ ಸಮೂಹ ದುಶ್ಚಟಗಳಿಗೆ ಬಲಿಯಾಗಿ ತಮ್ಮ ಅಮೂಲ್ಯ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇವರನ್ನು ಸರಿ ದಾರಿಗೆ ತರುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾಗಿದೆ. ಶಿಕ್ಷಕರು ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕು ಕಿವಿಮಾತು ಹೇಳಿದರು.

ವೈದ್ಯರು, ವಿಜ್ಞಾನಿಗಳು, ಅಭಿಯಂತರು, ಸಜ್ಜನರು ಹಾಗೂ ಮೇದಾವಿಗಳನ್ನು ಸಮಾಜಕ್ಕೆ ಕೊಡುಗೆ ನೀಡುವಲ್ಲಿ ಶಿಕ್ಷಕರ ಪಾತ್ರ ಅಪಾರವಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಕರ ಜತೆಗೆ ಮಕ್ಕಳ ಪಾಲಕರ ಜವಾಬ್ದಾರಿ ಕೂಡ ಹೆಚ್ಚಿದೆ ಎಂದರು.

ಶಾಲೆ ಸಿಇಒ ಕೀರ್ತನಾ ಆರ್.ನಿಖಿಲ್ ಪ್ರಧಾನ ಭಾಷಣ ಮಾಡಿ, ಮಕ್ಕಳಿಗೆ ಕೇವಲ ಅಂಕಗಳಿಸುವುದು ಮುಖ್ಯವಾಗಬಾರದು. ಅವರಿಗೆ ಸಮಾಜ ಕಟ್ಟುವ ಮತ್ತು ಶಿಸ್ತು ಬದ್ದ ಜೀವನ ನಡೆಸುವ ವ್ಯಕ್ತಿಗಳಾಗಿ ರೂಪಿಸಬೇಕು. ಶಾಲೆಗಳಲ್ಲಿ ಶಿಕ್ಷಕರು ಮಕ್ಕಳಿಗೆ ಜ್ಞಾನ ತುಂಬುವ ಕೆಲಸ ಮಾಡಬೇಕು ಅವರು ದಾರಿ ತಪ್ಪಿದಾಗ ಸರಿದಾರಿಗೆ ತರುವ ಕೆಲಸವನ್ನು ಶಿಕ್ಷಕರು ಮಾಡಬೇಕು ಎಂದರು.

ಶಿಕ್ಷಕರ ದಿನಾಚರಣೆ ಅಂಗವಾಗಿ ನಿವೃತ್ತ ಮುಖ್ಯ ಶಿಕ್ಷಕರಾದ ಚುಂಚಗಳ್ಳಿ ಶಾಲೆ ದಾಸೇಗೌಡ, ತೈಲೂರಿನ ಟಿ.ಆರ್. ಲೋಕೇಶ್, ಬೂದಗುಪ್ಪೆ ಎಚ್.ರಮೇಶ್ ಹಾಗೂ ಮಾದರಹಳ್ಳಿ ಶಾಲೆ ಎಂ.ಮಲ್ಲಯ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಹಾಗೂ ಸರ್ಕಾರಿ ಮತ್ತು ಖಾಸಗಿ ಶಾಲೆ ಗಳಲ್ಲಿ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ 15 ಮಂದಿ ಶಿಕ್ಷಕರಿಗೆ ಶಾಲು ಹೊದಿಸಿ ಮಾಲಾರ್ಪಣೆ ಮಾಡಲಾಯಿತು.

ಸಮಾರಂಭದಲ್ಲಿ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ವಿನಯ್ ರಾಮಕೃಷ್ಣ, ಶಿಕ್ಷಣ ಸಲಹೆಗಾರ ಡಾ.ಎಸ್.ತುಕಾರಾಂ, ಆಡಳಿತಾಧಿಕಾರಿ ಎಂ.ಎಸ್.ಮರಿಸ್ವಾಮಿಗೌಡ, ಪ್ರಾಂಶುಪಾಲ ಡಾ.ಎಂ.ಸಿ.ಸತೀಶ್ ಬಾಬು, ಪ್ರೊ.ಅರುಣ್ ಕುಮಾರ್, ಬಿ.ಚಂದ್ರಮೋಹನ್, ಆರ್.ಪ್ರವೀಣ್, ಮುಖ್ಯ ಶಿಕ್ಷಕರಾದ ಎಂ.ಎನ್.ರಮೇಶ್, ಕೆ.ಕಲ್ಯಾಣಿ, ಎನ್.ಪ್ರಭಾವತಿ ಇದ್ದರು.