ಮಕ್ಕಳ ಉಜ್ವಲ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾಗಿದ್ದು, ಆ ನಿಟ್ಟಿನಲ್ಲಿ ಪಾಲಕರ ಸಹಕಾರವೂ ಅಗತ್ಯವಾಗಿದೆ ಎಂದು ಸೊನ್ನ ವಿರಕ್ತ ಮಠದ ಪೀಠಾಧಿಪತಿ ಡಾ.ಶಿವಾನಂದ ಸ್ವಾಮಿಜಿ ಹೇಳಿದರು. ಪಟ್ಟಣದ ಸಜ್ಜನ ಕಲ್ಯಾಣ ಮಂಟಪದಲ್ಲಿ ತಾಲುಕು ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಸಾರ್ಥಕ ಶಿಕ್ಷಕ ಪ್ರಶಸ್ತಿ ಹಾಗು ಶಿಕ್ಷಕರ ಕವಿಗೋಷ್ಠಿ ಕಾರ್ಯಕ್ರಮದ ಸಾನಿದ್ಯ ವಹಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಜೇವರ್ಗಿ

ಮಕ್ಕಳ ಉಜ್ವಲ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾಗಿದ್ದು, ಆ ನಿಟ್ಟಿನಲ್ಲಿ ಪಾಲಕರ ಸಹಕಾರವೂ ಅಗತ್ಯವಾಗಿದೆ ಎಂದು ಸೊನ್ನ ವಿರಕ್ತ ಮಠದ ಪೀಠಾಧಿಪತಿ ಡಾ.ಶಿವಾನಂದ ಸ್ವಾಮಿಜಿ ಹೇಳಿದರು. ಪಟ್ಟಣದ ಸಜ್ಜನ ಕಲ್ಯಾಣ ಮಂಟಪದಲ್ಲಿ ತಾಲುಕು ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಸಾರ್ಥಕ ಶಿಕ್ಷಕ ಪ್ರಶಸ್ತಿ ಹಾಗು ಶಿಕ್ಷಕರ ಕವಿಗೋಷ್ಠಿ ಕಾರ್ಯಕ್ರಮದ ಸಾನಿದ್ಯ ವಹಿಸಿ ಮಾತನಾಡಿದರು. ಶಿಕ್ಷಕ ವೃತ್ತಿ ಶ್ರೇಷ್ಠವಾದುದು. ಮಕ್ಕಳನ್ನು ಸತ್ಪ್ರಜೆಗಳನಾಗಿ ಮಾಡುವ ಮಹತ್ತರವಾದ ಜವಾಬ್ದಾರಿ ಶಿಕ್ಷಕರ ಮೇಲಿದ್ದು, ಕಸಾಪ ಶಿಕ್ಷಕರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶಿಕ್ಷಕ ಪ್ರಶಸ್ತಿ ಹಾಗು ಶಿಕ್ಷಕರ ಕವಿಗೊಷ್ಠಿ ಕಾರ್ಯಕ್ರಮ ಆಯೋಜಿಸುವ ಮೂಲಕ ಮಹತ್ತರವಾದ ಕಾರ್ಯ ಮಾಡಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ತಮ್ಮದೇ ಆದ ಪ್ರತಿಭೆಗಳಿವೆ. ಅಂತಹ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸುವ ಶಕ್ತಿ ಕೂಡಾ ಶಿಕ್ಷಕರಲ್ಲಿ ಅಡಗಿದೆ ಎಂದು ಅವರು ಹೇಳಿದರು.

ಇದೇ ಸಂಧರ್ಭ ಸಾರ್ಥಕ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಡಾ.ಲಕ್ಷ್ಮೀಕಾಂತ ಮೊಹರೀರ, ಪ್ರೊ.ಶಾಂತಪ್ಪ ಡಂಬಳ, ಕಸಾಪ ತಾಲೂಕು ಅಧ್ಯಕ್ಷ ಎಸ್.ಕೆ.ಬಿರಾದಾರ, ಬಸವರಾಜ ಬಳುಂಡಗಿ, ಮಹೇಶ ಹೂಗಾರ, ನಿಜಲಿಂಗಪ್ಪ ಮಾನ್ವಿ, ದೇವೀಂದ್ರ ಬಿರಾದಾರ, ದೇವೀಂದ್ರ ಗುಡೂರ, ಪಿಎಸ್‌ಐ ಮಹಿಬೂಬಲಿ, ಕಸಾಪ ಗೌರವಾದ್ಯಕ್ಷ ಚನ್ನಮಲ್ಲಯ್ಯ ಹಿರೇಮಠ, ಸಂಗಯ್ಯಾ ಸ್ವಾಮಿ ನಾಗವಾರ, ಅಬ್ದುಲ ರಹೇಮಾನ ಪಟೇಲ, ಶಾಮರಾಯ ಗೌಡ ಪಾಟೀಲ, ಜಗದೀಶ ವಿಶ್ವಕರ್ಮ, ಭಗವಂತರಾಯ ಶಿವಣ್ಣವರ್, ಕಲ್ಯಾಣಕುಮಾರ ಸಂಗಾವಿ, ಶ್ರೀಹರಿ ಕರಕ್ಕಿಹಳ್ಳಿ, ಉಮಾಕಾಂತ ಗೋಗೇರಿ ಇದ್ದರು. ಕವಿತಾ ಪಾಟೀಲ ಹಳ್ಳಿ ನಿರೂಪಿಸಿದರು.