ಅಭಿನವ ಯಚ್ಚರ ಶ್ರೀಗಳು ಮಾತನಾಡಿ, ಉತ್ತಮ ಶಿಕ್ಷಕರು ದೊರೆಯುವುದು ಪೂರ್ವಜನ್ಮದ ಪುಣ್ಯ, ಅವರು ಸಾವಿರಾರು ವಿದ್ಯಾರ್ಥಿಗಳಿಗೆ ಸುಂದರ ಬದುಕಿಗೆ ಮಾರ್ಗದರ್ಶಕರು ಆಗಿದ್ದಾರೆ ಎಂದರು.

ನರಗುಂದ: ಶಿಕ್ಷಕರು ಅಕ್ಷರದ ಜತೆ ಬದುಕಿಗೆ ಬೇಕಾದ ಜೀವನ, ಮಾನವೀಯ, ನೈತಿಕ ಮೌಲ್ಯಗಳನ್ನು ನೀಡಿ ಬದುಕಿಗೆ ದಾರಿ ತೋರುವರು ಆಗಿದ್ದಾರೆ ಎಂದು ಭೈರನಹಟ್ಟಿಯ ಶಾಂತಲಿಂಗ ಶ್ರೀಗಳು ತಿಳಿಸಿದರು.

ಶಿರೋಳದ ಬನಶ್ರೀ ಲಾನ್ಸ್‌ನಲ್ಲಿ 2002ನೇ ಸಾಲಿನಲ್ಲಿ ಎಸ್ಎಸ್ಎಲ್‌ಸಿ ಪೂರೈಸಿದ ವಿದ್ಯಾರ್ಥಿಗಳಿಂದ ಗುರುವಂದನೆ ಹಾಗೂ ಸ್ನೇಹ ಸಮ್ಮೇಳನದಲ್ಲಿ ಮಾತನಾಡಿ, ಗುರು- ಶಿಷ್ಯರ ಸಂಬಂಧ ನಿಜಕ್ಕೂ ಗೌರವಯುತವಾದದ್ದು ಎಂದರು.

ಅಭಿನವ ಯಚ್ಚರ ಶ್ರೀಗಳು ಮಾತನಾಡಿ, ಉತ್ತಮ ಶಿಕ್ಷಕರು ದೊರೆಯುವುದು ಪೂರ್ವಜನ್ಮದ ಪುಣ್ಯ, ಅವರು ಸಾವಿರಾರು ವಿದ್ಯಾರ್ಥಿಗಳಿಗೆ ಸುಂದರ ಬದುಕಿಗೆ ಮಾರ್ಗದರ್ಶಕರು ಆಗಿದ್ದಾರೆ ಎಂದರು.

ನಿವೃತ್ತ ಶಿಕ್ಷಕ ವಿ.ಕೆ. ಮರಿಗುದ್ದಿ ಮಾತನಾಡಿ, ಸಮಾಜದಲ್ಲಿ ಗುರು- ಶಿಷ್ಯರ ಸಂಬಂಧ ಗಟ್ಟಿಯಾಗಲು ಈ ಕಾರ್ಯಕ್ರಮ ಸಹಾಯಕ. ಇದು ಅರ್ಥಪೂರ್ಣ ಕಾರ್ಯಕ್ರಮವಾಗಿದೆ ಎಂದರು.

ಶಿಕ್ಷಕರಾದ ಪ್ರಭಾಕರ ಉಳ್ಳಾಗಡ್ಡಿ, ಎಚ್.ವೈ, ಯಂಡಿಗೇರಿ, ವಿ.ಸಿ. ಸಾಲಿಮಠ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಶಿಕ್ಷಕರನ್ನು ಶಿರೋಳ ತೋಂಟದಾರ್ಯ ಮಠದಿಂದ ಊರಿನ ಪ್ರಮುಖ ಬೀದಿಗಳಲ್ಲಿ ಸಾರೋಟ ವಾದ್ಯಮೇಳದೂಂದಿಗೆ ಮೆರವಣಿಗೆ ಮೂಲಕ ಕರೆತರಲಾಯಿತು.

ಈ ಸಂದರ್ಭದಲ್ಲಿ ಎಸ್.ಬಿ. ಬೀಡಿಕರ, ಎಸ್.ಎನ್. ತಿರಕನಗೌಡ್ರ, ಆರ್.ಎಲ್. ಪಾಟೀಲ, ಶಿವಾನಂದ ಯಲಬಳ್ಳಿ, ದ್ಯಾಮಣ್ಣ ಶಾಂತಗೇರಿ, ಪರಶುರಾಮ ಮಡಿವಾಳರ, ಶ್ರೀಧರ ಶೀಪ್ರಿ, ರಾಜು ಮೂಗನೂರ, ಶರಣಯ್ಯ ಹಿರೇಮಠ, ಪ್ರಭು ಹದ್ಲಿ, ಸುರೇಖಾ ದೊತರದ, ರಶ್ಮೀ ನವಲಗುಂದ, ವೀಣಾ ಅಂಕಲಿಮಠ, ವಿದ್ಯಾರ್ಥಿಗಳು ಇದ್ದರು. ಮಂಜು ಕೊಣ್ಣೂರ ಸ್ವಾಗತಿಸಿದರು. ಶೋಭಾ ಕುಲಕರ್ಣಿ ನಿರೂಪಿಸಿ, ವಂದಿಸಿದರು.