ಸಾರಾಂಶ
ವಲಯ ಪ್ರತಿನಿಧಿ ಅವಿನಾಶ್ ಸೆ.15ರಂದು ನಡೆಯುವ ಸಂಸ್ಥೆಯ ತರಬೇತಿ ಕಾರ್ಯಗಾರದ ಮಾಹಿತಿ ನೀಡಿದರು.
ಮಂಗಳೂರು: ಶಿಕ್ಷಕರ ವೃತ್ತಿ ಉನ್ನತ ಮತ್ತು ಗೌರವಾನ್ವಿತ ಸೇವಾ ವೃತ್ತಿಯಾಗಿದ್ದು, ಅವರು ಸಮಾಜದಲ್ಲಿ ವಿಶೇಷ ಸ್ಥಾನಮಾನಗಳನ್ನು ಗಳಿಸಿದ್ದಾರೆ. ಅವರ ತ್ಯಾಗ, ನಿಸ್ವಾರ್ಥ ಸೇವಾ ಮನೋಭಾವ, ಕರ್ತವ್ಯ ಮತ್ತು ಸಮಯ ಪ್ರಜ್ಞೆಯಿಂದ ಕೂಡಿದ್ದು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕಾರ್ಯ ಅಮೂಲ್ಯ ಎಂದು ರೋಟರಿ ಮಾಜಿ ಜಿಲ್ಲಾ ಗವರ್ನರ್ ಡಾ. ದೇವದಾಸ್ ರೈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರೋಟರ‍್ಯಾಕ್ಟ್ ಮಂಗಳೂರು ಸಿಟಿ ಆಶ್ರಯದಲ್ಲಿ ನಗರದಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.ಈ ಸಂದರ್ಭ ಎಂಜಿನಿಯರ್, ಮಣಿಪಾಲ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯ ಮಾಜಿ ಪ್ರಾಧ್ಯಾಪಕ, ನಿಟ್ಟೆ ಎಂಜಿನಿಯರಿಂಗ್ ಕಾಲೇಜಿನ ಮಾಜಿ ಪ್ರಾಂಶುಪಾಲ, ಪುತ್ತೂರು ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ಮಾಜಿ ಪ್ರಾಂಶುಪಾಲ ಪ್ರೊ. ರಘುನಾಥ ರೈ ಅವರನ್ನು ಸನ್ಮಾನಿಸಲಾಯಿತು. ಮಾಧ್ಯಮ ಸಲಹೆಗಾರ ಎಂ.ವಿ. ಮಲ್ಯ, ಸಂತೊಷ್ ಶೇಟ್, ಭಾಸ್ಕರ ರೈ, ಗಣೇಶ್, ಅರ್ಜುನ್ ಪ್ರಕಾಶ್ ಇದ್ದರು.ಸಂಸ್ಥೆಯ ಅಧ್ಯಕ್ಷ ಬಿದ್ದಪ್ಪ ಸ್ವಾಗತಿಸಿದರು. ವಲಯ ಪ್ರತಿನಿಧಿ ಅವಿನಾಶ್ ಸೆ.15ರಂದು ನಡೆಯುವ ಸಂಸ್ಥೆಯ ತರಬೇತಿ ಕಾರ್ಯಗಾರದ ಮಾಹಿತಿ ನೀಡಿದರು. ಕಾರ್ಯದರ್ಶಿ ಅಶ್ವಿನ್ ರೈ ವರದಿ ಮಂಡಿಸಿದರು. ಅರ್ವಿನ್ ಡಿಸೋಜ ವಂದಿಸಿದರು.