ಬದುಕಿಗೆ ದಾರಿ ತೋರುವ ಶಿಕ್ಷಕ ಸಮಾಜದ ಆಸ್ತಿ: ಸಚಿವ ಶರಣಬಸಪ್ಪಗೌಡ ದರ್ಶನಾಪೂರ

| Published : Mar 17 2024, 01:47 AM IST

ಬದುಕಿಗೆ ದಾರಿ ತೋರುವ ಶಿಕ್ಷಕ ಸಮಾಜದ ಆಸ್ತಿ: ಸಚಿವ ಶರಣಬಸಪ್ಪಗೌಡ ದರ್ಶನಾಪೂರ
Share this Article
  • FB
  • TW
  • Linkdin
  • Email

ಸಾರಾಂಶ

ಶಹಾಪುರದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ವಯೋನಿವೃತ್ತಿ ಹೊಂದಿದ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಚೆನ್ನಾರೆಡ್ಡಿ ಪಾಟೀಲ್ ತಂಗಡಿಗಿ ದಂಪತಿಗೆ ಸನ್ಮಾನಿಸಲಾಯಿತು

ಕನ್ನಡಪ್ರಭ ವಾರ್ತೆ ಶಹಾಪುರ

ವಿದ್ಯಾರ್ಥಿಗಳಿಗೆ ಮೌಲ್ಯಧಾರಿತ ಶಿಕ್ಷಣ ನೀಡಿದಾಗ ಮಾತ್ರ ದೇಶ ಅಭಿವೃದ್ಧಿಯಾಗಲು ಸಾಧ್ಯ. ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವ ಮತ್ತು ಬದುಕಿಗೆ ದಾರಿ ತೋರುವ ಶಿಕ್ಷಕರು ಸಮಾಜದ ಆಸ್ತಿ. ಗುರುಗಳಿಗೆ ಪ್ರತಿಯೊಬ್ಬರು ಗೌರವ ನೀಡಬೇಕು ಎಂದು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಹೇಳಿದರು.

ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜು, ಅತಿಥಿ ಉಪನ್ಯಾಸಕರ ಸಂಘ ಹಾಗೂ ವಿದ್ಯಾರ್ಥಿಗಳ ಸಹಯೋಗದಲ್ಲಿ ಪ್ರೊ. ಚೆನ್ನಾರೆಡ್ಡಿ ಪಾಟೀಲ್ ತಂಗಡಿಗಿ ಅವರ ವಯೋನಿವೃತ್ತಿ ಅಂಗವಾಗಿ ನಡೆದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಪಾಠ ಮಾಡಲು ಉಪನ್ಯಾಸಕನಿಗೆ ಆಳವಾದ ಅಧ್ಯಯನ ಅವಶ್ಯ. ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ಭಾವಿಸಿ ಶಿಕ್ಷಣ ನೀಡುವ ಮೂಲಕ ಸಾವಿರಾರು ವಿಧ್ಯಾರ್ಥಿಗಳ ಬದುಕಿಗೆ ದಾರಿ ತೋರಿದ ಪ್ರಾಂಶುಪಾಲ ಚೆನ್ನಾರೆಡ್ಡಿ ಪಾಟೀಲ್ ತಂಗಡಗಿ ಸೇವೆ ಶ್ಲಾಘನೀಯ ಎಂದರು.

ಪ್ರೊ.ಚೆನ್ನಾರೆಡ್ಡಿ ಅವರು ಎಲ್ಲ ಉಪನ್ಯಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮ ಆಡಳಿತ ನಡೆಸುವುದರ ಜತೆಗೆ ವೌಲ್ಯಾಧಾರಿತ ಶಿಕ್ಷಣ ನೀಡಲು ಕಾಲೇಜು ವೃದ್ಧಿಪಡಿಸುವಲ್ಲಿ ಪ್ರಾಂಶುಪಾಲರ ಜವಾಬ್ದಾರಿ ಹೆಚ್ಚಾಗಿರುತ್ತದೆ. ಹಾಗೆಯೇ ನಿವೃತ್ತ ಪ್ರಾಂಶುಪಾಲರು ನಿವೃತ್ತಿ ಜೀವನದಲ್ಲಿ ಸಮಾಜಕ್ಕೆ ಕೊಡುಗೆ ನೀಡುಲು ಹಲವು ಅವಕಾಶಗಳಿವೆ. ಅವುಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುವುದರಿಂದ ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ. ಆ ನಿಟ್ಟಿನಲ್ಲಿ ಕೆಲಸ ಮಾಡಿ ಈ ನಾಡಿಗೆ ಕೊಡುಗೆ ನೀಡಿ ಎಂದು ಮನವಿ ಮಾಡಿದರು. ಈ ಸಮಾರಂಭದಲ್ಲಿ ಚೆನ್ನಾರಡ್ಡಿ ತಂಗಡಗಿ ದಂಪತಿಗೆ ಸಚಿವರು ಗೌರವಿಸಿ ಸನ್ಮಾನಿಸಿದರು.

ವೇದಿಕೆಯಲ್ಲಿ ಪ್ರಭಾರಿ ಪ್ರಾಂಶುಪಾಲರಾದ, ಸಂಗಪ್ಪ ರಾಂಪೂರೆ, ಕರವೇ ಉತ್ತರ ಕರ್ನಾಟಕ ಅಧ್ಯಕ್ಷರಾದ ಡಾ,ಶರಣು ಗದ್ದುಗೆ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷರಾದ ಡಾ, ರವಿಂದ್ರನಾಥ ಹೊಸಮನಿ, ಉಪನ್ಯಾಷಕರಾದ ಎಸ್.ಎಸ್. ದೇಸಾಯಿ, ಪಂಪಾಪತಿ ಶಿರಣಿ, ಧರ್ಮಣಗೌಡ ಬಿರಾದಾರ್, ಅರ್ಜುನ ಕನ್ಯಾಕೋಳೂರ, ದೇವಿಂದ್ರಪ್ಪ ಮಡಿವಾಳಕರ್ ಸೇರಿದಂತೆ ಇತರರಿದ್ದರು. ಮರೆಪ್ಪ ಜಾಲಿಬೆಂಚಿ ನಿರೂಪಿಸಿದರು. ಡಾ. ಶರಣು ಕಾರ್ಯಕ್ರಮ ಆಯೋಜಿಸಿದ್ದರು. ಶ್ರೀದೇವಿ ಪಾಟೀಲ್ ವಂದಿಸಿದರು.