ಶಿಕ್ಷಕರಿಂದ ದೇಶಕ್ಕೆ ಸತ್ಪ್ರಜೆಗಳ ಕೊಡುಗೆ ಸಾಧ್ಯ: ಶಿವಾನಂದ ಉದಪುಡಿ

| Published : Feb 03 2024, 01:49 AM IST

ಶಿಕ್ಷಕರಿಂದ ದೇಶಕ್ಕೆ ಸತ್ಪ್ರಜೆಗಳ ಕೊಡುಗೆ ಸಾಧ್ಯ: ಶಿವಾನಂದ ಉದಪುಡಿ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಾಪುರ: ಶಿಕ್ಷಕ ವೃಂದ ಸಕಾರಾತ್ಮಕವಾಗಿ ಶ್ರಮಿಸಿದಲ್ಲಿ ಈ ದೇಶಕ್ಕೆ ಉತ್ತಮ ಪ್ರಜೆಗಳ ದೊಡ್ಡ ಕೊಡುಗೆ ನೀಡಬಹುದೆಂದು ಬಿಡಿಸಿಸಿ ಬ್ಯಾಂಕ್‌ ಮಾಜಿ ಉಪಾಧ್ಯಕ್ಷ ಶಿವಾನಂದ ಉದಪುಡಿ ಹೇಳಿದರು. ಪಟ್ಟಣದ ನೇತಾಜಿ ಸುಭಾಷಚಂದ್ರ ಬೋಸ್ ಶಿಕ್ಷಣ ಸಂಸ್ಥೆಯಿಂದ ನೇತಾಜಿ ಸುಭಾಸಚಂದ್ರ ಬೋಸ್ ಅವರ ೧೨೭ನೇ ಜಯಂತ್ಯುತ್ಸವ ಹಾಗೂ ನಾಟ್ಯ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಲೋಕಾಪುರ

ಶಿಕ್ಷಕ ವೃಂದ ಸಕಾರಾತ್ಮಕವಾಗಿ ಶ್ರಮಿಸಿದಲ್ಲಿ ಈ ದೇಶಕ್ಕೆ ಉತ್ತಮ ಪ್ರಜೆಗಳ ದೊಡ್ಡ ಕೊಡುಗೆ ನೀಡಬಹುದೆಂದು ಬಿಡಿಸಿಸಿ ಬ್ಯಾಂಕ್‌ ಮಾಜಿ ಉಪಾಧ್ಯಕ್ಷ ಶಿವಾನಂದ ಉದಪುಡಿ ಹೇಳಿದರು.

ಪಟ್ಟಣದ ನೇತಾಜಿ ಸುಭಾಷಚಂದ್ರ ಬೋಸ್ ಶಿಕ್ಷಣ ಸಂಸ್ಥೆಯಿಂದ ನೇತಾಜಿ ಸುಭಾಸಚಂದ್ರ ಬೋಸ್ ಅವರ ೧೨೭ನೇ ಜಯಂತ್ಯುತ್ಸವ ಹಾಗೂ ನಾಟ್ಯ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅವರು ಶಿಕ್ಷಣ ಹೊರತಾಗಿ ಪ್ರತಿ ಮಗುವಿನಲ್ಲಿ ಈ ನಾಡಿನ ಸೊಗಡು, ಆದರ್ಶ ಸಾಂಸ್ಕೃತಿಕ ಹಿನ್ನಲೆ ಬಿತ್ತಿ ಬೆಳೆಸಬೇಕು. ಬುದ್ಧ, ಬಸವ, ವಿವೇಕಾನಂದ, ಅಂಬೇಡ್ಕರ್, ಸುಭಾಸಚಂದ್ರ ಬೋಸ್ ಅವರಂತಹ ಆದರ್ಶವಾದಿಗಳ ಬದುಕು ಉದಾತ್ತ ಮನೋಭಾವ ತಿಳಿಹೇಳಬೇಕು ಎಂದರು.

ಸಂಸ್ಥೆಯ ಅಧ್ಯಕ್ಷ ಡಾ. ಬಸವರಾಜ ಹಿರೇಮಠ ಮಾತನಾಡಿ, ನಮ್ಮ ಸಂಸ್ಥೆಯಿಂದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಬೇರೆಬೇರೆ ಶಾಲೆಗೆ ಆಯ್ಕೆಯಾಗಿ ಹೋಗುತ್ತಾರೆ. ಇದಕ್ಕೆ ಎಲ್ಲರ ಸಹಕಾರ, ಶಿಕ್ಷಕರ ಮತ್ತು ಸಿಬ್ಬಂದಿ ಶ್ರಮ ಕಾರಣ ಎಂದರು.

ಬಾಗೋಜಿಕೊಪ್ಪದ ಮುರುಘರಾಜೇಂದ್ರ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಿವೃತ್ತ ಪ್ರಾಚಾರ್ಯ ವಿ.ಬಿ.ಮಾಳಿ, ಅತಿಥಿಗಳಾಗಿ ಡಾ. ಅರುಣ ಹೂಲಿ, ಮಹಾಂತೇಶ ಹಿರೇಮಠ, ಆರ್.ಜಿ. ಪಾಟೀಲ, ಸುರೇಶ ಹಿರೇಮಠ, ಲಿಂಗಾನಂದ ಹಿರೇಮಠ, ಜ್ಯೋತಿ ಉಪ್ಪಾರ, ಶಿವಾನಮದ ಜೀವರಗಿ, ಶಾಲಾ ಆಡಳಿತ ಮಂಡಳಿಯ ದಾವಲ್‌ ನದಾಫ್‌, ಮಹಾಂತೇಶ ಹಿರೇಮಠ, ಪ್ರಶಾಂತ ರಾಮದುರ್ಗ, ಮಲ್ಲಿಕಾರ್ಜುನ ಉದಪುಡಿ, ವಿದ್ಯಾಧರೆ ಹಿರೇಮಠ, ರಾಮು ಅರಮನಿ ಹಾಗೂ ಶಾಲಾ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಇದ್ದರು.