ಸಾರಾಂಶ
ಕನ್ನಡಪ್ರಭ ವಾರ್ತೆ ಸಿದ್ದಾಪುರ
ಬ್ರಹ್ಮಗಿರಿ ಸವೋದಯ ಕೇಂದ್ರ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಕೊಡಗು ಜಿಲ್ಲಾ ಒಕ್ಕೂಟದ ಶಿಕ್ಷಕರ ದಿನಾಚರಣೆ ಮತ್ತು ಗುರುವಂದನಾ ಕಾರ್ಯಕ್ರಮ ಇಲ್ಲಿನ ಸಂತ ಅನ್ನಮ್ಮ ಶಾಲೆಯಲ್ಲಿ ಜರುಗಿತು.ಕಾರ್ಯಕ್ರಮವನ್ನು ಮೈಸೂರಿನ ವರಕೊಡ ಶಿಕ್ಷಣ ಸಂಸ್ಥೆಯ ಕಾಲೇಜಿನ ಪ್ರಾಂಶುಪಾಲ ಪಿ. ದೇವರಾಜು ಚಿಕ್ಕನಹಳ್ಳಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ವಿದ್ಯಾರ್ಥಿಗಳನ್ನು ಮುಖ್ಯ ವಾಹಿನಿಗೆ ತರುವಲ್ಲಿ ಶಿಕ್ಷಕರ ಪಾತ್ರ ಮಹತ್ವದಾಗಿದ್ದು ಭೌತಿಕ ಬೆಳವಣಿಗೆಗೆ ಪೂರಕವಾದ ವಿದ್ಯಾಭ್ಯಾಸವನ್ನು ಮಕ್ಕಳಿಗೆ ಬೋಧನೆ ಮಾಡುವ ಮೂಲಕ ಉತ್ತಮ ಪ್ರಜೆಗಳಾಗಿಸುವಲ್ಲಿ ಗಮನ ಹರಿಸಿ ಬೇಕು ಎಂದರು.
ಬ್ರಹ್ಮಗಿರಿ ಸಿ ಬಿ ಎಸ್ ಸಿ ಒಕ್ಕೂಟದ ಕಾರ್ಯದರ್ಶಿ ಜಾಯ್ ಸಿ ವಿನಯ ಮಾತನಾಡಿ, ಕೇಂದ್ರ ಮಾಧ್ಯಮಿಕ ಶಿಕ್ಷಣ ಮಂಡಳಿ 8 ಶಾಲೆಗಳು ಒಕ್ಕೂಟದ ಶಿಕ್ಷಕರ ದಿನಾಚರಣೆ ಮತ್ತು ಗುರುವಂದನಾ ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ 7ಜನ ಶಿಕ್ಷಕರನ್ನು ಗೌರವಿಸಿ ಸನ್ಮಾನಿಸಲಾಗಿದ್ದು ಮಕ್ಕಳ ನ್ಯೂನತೆ ಅರಿತು ಅದಕ್ಕೆ ತಕ್ಕುದಾದ ಶಿಕ್ಷಣವನ್ನು ಗುರುಗಳು ನೀಡಿದ್ದಲ್ಲಿ ವಿದ್ಯಾರ್ಥಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸಬೇಕು ಎಂದರು.ಈ ಸಂದರ್ಭದಲ್ಲಿ ಕೊಡಗು ವಿದ್ಯಾಲಯದ ಮಡಿಕೇರಿಯ ಟಿ. ಜಯಶ್ರೀ, ಕೂಡಿಗೆ ಸೈನಿಕ ಶಾಲೆಯ ಕೆ, ದಕ್ಷಿಣಮೂರ್ತಿ, ನಾಪೋಕ್ಲು ಅಂಕುರ್ ಪಬ್ಲಿಕ್ ಸ್ಕೂಲ್ ನ ತೆಕ್ಕಡ ವಿ ಮಹೇಶ್, ಅರಮೇರಿಯ ಎಸ್‌ಎಂಎಸ್ ಅಕಾಡಮಿ ಆಫ್ ಸೆಂಟ್ರಲ್ ಎಜುಕೇಶನ್ ಶಾಲೆಯ ಮೈತ್ರಿ ರಾವ್, ಎಎಲ್‌ಜಿ ಗ್ರಾಂಟ್ ಶಾಲೆಯ ಶೈಲಿ, ಹಾತೂರಿನ ನ್ಯಾಷನಲ್ ಅಕಾಡೆಮಿ ಸ್ಕೂಲ್ ನಕುಟ್ಟಂಡ ನೀಲಮ್ಮ ಸೋಮಣ್ಣ ಹಾಗೂ ಸಿದ್ದಾಪುರದ ಸಂತ ಅನ್ನಮ್ಮ ಶಾಲೆಯ ಲೆನಿ ಸೋಲೋಮನ್ ಅವರು ಸೇವೆಯನ್ನು ಗೌರವಿಸಿ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ವಿವಿಧ ಶಾಲೆಯ ಶಿಕ್ಷಕರು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ಕಣ್ಮನ ಸೆಳೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂತ ಅನ್ನಮ್ಮ ಶಾಲೆಯ ವ್ಯವಸ್ಥಾಪಕಿ ಮರ್ಜೋರಿ ಸಂತ ಅನ್ನಮ್ಮ ಶಾಲೆಯ ಕನ್ನಡ ಮಾಧ್ಯಮದ ಪ್ರಿನ್ಸಿಪಾಲ್ ಸಿಸ್ಟರ್ ಅರ್ಪಿತಾ, ಅಂಕರ್ ಪಬ್ಲಿಕ್ ಶಾಲೆಯ ಪ್ರಿನ್ಸಿಪಾಲ್ ಮಮತ, ಅರಮೇರಿ ಎಸ್‌ಎಂಎಸ್ ಶಾಲೆಯ ಪ್ರತಿಭ, ಸಂತ ಅನ್ನಮ್ಮ ಶಾಲೆಯ ಪ್ರಿನ್ಸಿಪಾಲ್ ಸಿಸ್ಟರ್ ಲೀನಿತ್ ಇದ್ದರು.