ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವ ಶಕ್ತಿ ಶಿಕ್ಷಕರಿಗಿದೆ ಎಂದು ರೇನ್‌ಬೋ ರೆಸಿಡೆನ್ಸಿಯಲ್ ಸ್ಕೂಲ್ ಸಂಸ್ಥಾಪಕ ಡಾ. ಸುರೇಶ ಸಿ.ಟಿ. ಹೇಳಿದರು.

ರಾಣಿಬೆನ್ನೂರು: ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವ ಶಕ್ತಿ ಶಿಕ್ಷಕರಿಗಿದೆ ಎಂದು ರೇನ್‌ಬೋ ರೆಸಿಡೆನ್ಸಿಯಲ್ ಸ್ಕೂಲ್ ಸಂಸ್ಥಾಪಕ ಡಾ. ಸುರೇಶ ಸಿ.ಟಿ. ಹೇಳಿದರು.

ನಗರದ ಬಿಎಜೆಎಸ್‌ಎಸ್ ಬಿ.ಇಡಿ ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಿದ್ದ ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನ ಹಾಗೂ ದೀಪದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಕರ ನಡೆ, ನುಡಿ, ನೋಡಿ ಮಕ್ಕಳು ಅನುಕರಣೆ ಮಾಡುತ್ತಾರೆ. ಆದ್ದರಿಂದ ಶಿಕ್ಷಕರು ಮಕ್ಕಳಿಗೆ ಮಾದರಿಯಾಗಿರಬೇಕು. ಸಮಾಜದ ಎಲ್ಲಾ ರಂಗದಲ್ಲಿ ಬೇಕಾದ ಯುವಕರನ್ನು ಸೃಷ್ಟಿಸುವ ಕೆಲಸ ಶಿಕ್ಷಕರ ಪಾತ್ರ ಇರುತ್ತದೆ ಎಂದರು.

ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ.ಆರ್.ಎಂ.ಕುಬೇರಪ್ಪ ಮಾತನಾಡಿ, ಶಿಕ್ಷಕರ ಮೇಲೆ ಸಮಾಜದ ಕಣ್ಣು ಇದೆ. ನಮ್ಮ ಉಡುಪು, ನಡವಳಿಕೆ, ಭಾಷೆ ಹಾಗೂ ನಡತೆ ಬಗ್ಗೆ ಜನರು ದೃಷ್ಟಿ ಇರುತ್ತದೆ. ಇದರಿಂದ ನಮಗೆ ನಾವೇ ತಿಳಿದುಕೊಂಡು ನಡೆಯಬೇಕು. ಶಿಕ್ಷಕರಾದವರು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಪಾಠ ಮಾಡಬೇಕು ಹಾಗೂ ನಿರಂತರ ಅಧ್ಯಯನದಲ್ಲಿ ತೊಡಗಿಕೊಳ್ಳಬೇಕು. ಮಕ್ಕಳು ತಪ್ಪು ಮಾಡಿದಾಗ ಶಿಕ್ಷೆ ಕೊಡಬಾರದು. ಅವರಿಗೆ ತಪ್ಪಿನ ಅರಿವು ಮೂಡಿಸಿ ಅದನ್ನು ತಿದ್ದಿಕೊಳ್ಳುವ ಕೆಲಸ ಮಾಡಿಸಬೇಕು ಎಂದರು.

ಶೈಕ್ಷಣಿಕ ಸಲಹೆಗಾರ ಎಚ್.ಎ. ಭಿಕ್ಷಾವರ್ತಿಮಠ ಮಾತನಾಡಿದರು. ಪತ್ರಕರ್ತರಾದ ಬಸವರಾಜ ಸರೂರ, ಮಂಜುನಾಥ ಹೊಸಪೇಟೆ ಅತಿಥಿಗಳಾಗಿ ಆಗಮಿಸಿದ್ದರು.

ಪ್ರಾ. ಡಾ.ಮೃತ್ಯುಂಜಯ ಎಂ.ಎಂ. ಅಧ್ಯಕ್ಷತೆ ವಹಿಸಿದ್ದರು.

ಉಪ ಪ್ರಾ. ಪ್ರೊ. ಶಿವಕುಮಾರ ಬಿಸಲಹಳ್ಳಿ, ಡಾ.ಎಚ್.ಐ. ಬ್ಯಾಡಗಿ, ನಿಕೇತನ ಕಮ್ಮಾರ, ನಿಸರ್ಗ ಚಿಗರಿ, ತೇಜಸ್ವಿನಿ ಎಸ್. ಲಕ್ಷ್ಮಿ ಹಣೆಚಿಕ್ಕಿ, ಪರಶುರಾಮ ಪವಾರ, ಅಶೋಕ ಬಣಕಾರ, ಎ.ಶಂಕರನಾಯಕ, ಶ್ರೀಕಾಂತ ಗೌಡಶಿವಣ್ಣನವರ, ಡಾ. ರಾಜೀವ್ ಕೆ.ಎಂ., ಮುತ್ತುರಾಜ ಸಿದ್ದಣ್ಣನವರ, ವಸುಂಧರ ಆರ್.ವೈ., ಸೌಮ್ಯ ವೇರ್ಣೆಕರ, ದೇವಿಕಾ ಚೌಟಗಿ, ಅಜಯ ಗಿಡ್ಡಪ್ಪಳವರ ಮತ್ತಿತರರಿದ್ದರು.